HomePage_Banner
HomePage_Banner
HomePage_Banner
HomePage_Banner

ತಳ್ಳುಗಾಡಿಗಳ ತೆರವು ಮಾಡಿದ ಬಿಜೆಪಿಯಿಂದ ಬಡವರ ಮನೆಯೂ ಧ್ವಂಸ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಹೊಣೆಗಾರರಾದವರ ವಿರುದ್ಧ ಪ್ರಕರಣ ದಾಖಲಿಸಲು ಬ್ಲಾಕ್ ಕಾಂಗ್ರೆಸ್ ಆಗ್ರಹ

 

ಪುತ್ತೂರು:ದರ್ಬೆತ್ತಡ್ಕದಲ್ಲಿ ಸುಮಾರು 12 ವರ್ಷಗಳಿಂದ ವಾಸ್ತವ್ಯದಲ್ಲಿದ್ದ ರಘುನಾಥ್ ಎಂಬವರ ಮನೆಯನ್ನು ಬಿಜೆಪಿಯ ಕುಮ್ಮಕ್ಕಿನಿಂದ ಏಕಾಏಕಿ ಕಂದಾಯ ನಿರೀಕ್ಷಕರು, ವಿ.ಎ ಮತ್ತು ತಹಶೀಲ್ದಾರ್ ಅವರು ತೆರವು ಮಾಡಿದ್ದಾರೆ. ಪುತ್ತೂರಿನಲ್ಲಿ ತಳ್ಳುಗಾಡಿಗಳ ತೆರವು ಮಾಡಿದ ಬಿಜೆಪಿಯಿಂದ ಇದೀಗ ಬಡವರ ಮನೆಯನ್ನೂ ಧ್ವಂಸ ಮಾಡಲಾಗಿದೆ.ಇದರಿಂದ ನೊಂದ ರಘುನಾಥ್ ಅವರು ಆತ್ಮಹತ್ಯೆಗೂ ಪ್ರಯತ್ನ ಪಟ್ಟಿದ್ದಾರೆ.ಈ ಎಲ್ಲಾ ಘಟನೆಗಳ ಹೊಣೆಗಾರರ ವಿರುದ್ಧ ಪ್ರಕರಣ ದಾಖಲಿಸುವಂತೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಆಗ್ರಹಿಸಿದ್ದಾರೆ.

ಸುದ್ದಿ ಮೀಡಿಯಾ ಸೆಂಟರ್‌ನಲ್ಲಿ ರಾತ್ರಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರಘುನಾಥ ಅವರು 94 ಸಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಅರ್ಜಿ ಏನಾಗಿದೆ ಎಂಬುದೇ ಗೊತ್ತಿಲ್ಲ. ಅವರಿಗೆ ಕಂದಾಯ ಇಲಾಖೆ ಹಿಂಬರಹವನ್ನಾದರೂ ಕೊಡಬೇಕಾಗಿತ್ತು. ದರ್ಬೆತ್ತಡ್ಕದಲ್ಲಿ 103 ಎಕ್ರೆ ಸರಕಾರಿ ಭೂಮಿಯಲ್ಲಿ 2 ಎಕ್ರೆ ಶಾಲೆಗೆ ಸೇರಿದ್ದು, 83 ಸೆಂಟ್ಸ್ ರಾಜೀವಗಾಂಧಿ ವಸತಿ ಯೋಜನೆಗೆ ಮೀಸಲಿರಿಸಿದೆ.ಇನ್ನೂ ಸರಕಾರಿ ಜಾಗ ಉಳಿದಿದೆ.ಆದರೆ ರಘುನಾಥ್ ಅವರನ್ನು ಯಾವುದೇ ಮುನ್ಸೂಚನೆ ನೀಡದೆ ಅವರ ಮನೆಯನ್ನು ಧ್ವಂಸ ಮಾಡಿದ ವಿಚಾರ ತಿಳಿದು ನಾವು ಅಲ್ಲಿಗೆ ತೆರಳಿದ್ದೆವು.ರಘುನಾಥ್ ಅವರ ಮನೆಯ ಬಾಗಿಲನ್ನು ಮುರಿದು ಮನೆ ಧ್ವಂಸ ಮಾಡಿದ್ದಾರೆ.ಅವರ ಸೂಕ್ತ ದಾಖಲೆಗಳು ಮಣ್ಣು ಸೇರಿವೆ.ಜೊತೆಗೆ ಅವರು ತಿನ್ನಲೆಂದು ಮನೆಯಲ್ಲಿ ಮಾಡಿಟ್ಟ ದೋಸೆಗಳು ಮಣ್ಣಿನಲ್ಲಿರುವುದು ನೋಡಿದರೆ ಅಧಿಕಾರಿಗಳ ದೌರ್ಜನ್ಯ ತುಂಬಾ ಬೇಸರ ತಂದಿದೆ ಎಂದರು.ಘಟನೆಯಿಂದ ನೊಂದ ರಘುನಾಥ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಇದಕ್ಕೆ ಹೊಣೆಗಾರರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದರು.

ಇಲಾಖೆ, ಬಿಜೆಪಿಯವರ ರಾಕ್ಷಸೀ ಪ್ರವೃತ್ತಿ:
ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿಯವರು ಮಾತನಾಡಿ ಇಲಾಖೆ ಮತ್ತು ಬಿಜೆಪಿಯವರ ರಾಕ್ಷಸೀ ಪ್ರವೃತ್ತಿ ಕಾಣುತ್ತಿದೆ.ಅಲ್ಲಿ ಒಟ್ಟು 103 ಎಕ್ರೆ ಸರಕಾರಿ ಭೂಮಿಯಲ್ಲಿ 3.83 ಸೆಂಟ್ಸ್ ಜಾಗ ಕಾದಿರಿಸಲಾಗಿದ್ದರೂ ಇನ್ನೂ ನೂರು ಎಕ್ರೆ ಜಾಗ ಇರುವಾಗ ಕೇವಲ ಬಡಪಾಯಿ ದಲಿತ ಕುಟುಂಬದವರು ಕೇವಲ ಒಂದೂವರೆ ಸೆಂಟ್ಸ್‌ನಲ್ಲಿ ಮನೆ ಕಟ್ಟಿದ್ದಾರೆ.ಶಾಲೆಯವರು ನಮ್ಮ ಜಾಗ ಎಂದು ಹೇಳಿದ್ದರೂ ದಾಖಲೆ ಪ್ರಕಾರ ಅದು ರಾಜೀವ ಗಾಂಧಿ ವಸತಿ ನಿವೇಶನದಲ್ಲಿದೆ.ಒಂದು ವೇಳೆ ಮನೆ ತೆರವು ಮಾಡುವುದಾದರೂ ತುರ್ತು ಅವಶ್ಯಕತೆ ಏನಿತ್ತು? ಸರ್ವೆ ಮಾಡಿ ನೋಟೀಸ್ ಕೊಡಬಹುದಿತ್ತು. ಶಾಲೆಗೆ ಆಟದ ಮೈದಾನ ಮಾಡುವುದಾದರೆ ಮನವೊಲಿಸಿ ಮಾಡಬಹುದಿತ್ತು.ಆದರೆ ಬಿಜೆಪಿಯವರ ಕುಮ್ಮಕ್ಕಿನಿಂದ ಅಕಾರಿಗಳು ಕ್ರೌರ್ಯ ಮೆರೆಯುತ್ತಿದ್ದಾರೆ.ಮನೆ ತೆರವುಗೊಂಡ ರಘುನಾಥ ಅವರು ಆತ್ಮಹತ್ಯೆ ಮಾಡಲು ಯತ್ನಿಸಿದ್ದಾರೆ ಎಂದಾಗ ಆತನ ಮನಸ್ಥಿತಿ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ನೋಡಬೇಕು ಎಂದರಲ್ಲದೆ, ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ತಹಶೀಲ್ದಾರ್, ಕಂದಾಯ ಅಕಾರಿ ಹಾಗು ಗ್ರಾಮಕರಣಿಕರ ವಿರುದ್ದ ಕ್ರಮ ಕೈಗೊಳ್ಳಬೇಕು.ಒಂದು ವೇಳೆ ಜೀವಕ್ಕೆ ತೊಂದರೆ ಆದರೆ ಕೊಲೆ ಪ್ರಕರಣ ದಾಖಲಿಸಬೇಕು.ನಾವು ಈ ಘಟನೆಯ ವಿಚಾರವಾಗಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದರು.

ಶಾಸಕರ ಮೇಲೆ ಆರೋಪ:
ರಘುನಾಥ್ ಅವರ ಮನೆ ತೆರವು ಮಾಡುವುದು ಅಷ್ಟೂ ಅವಶ್ಯಕತೆ ಇದ್ದರೆ ಪುತ್ತೂರಿನಲ್ಲಿ ಬೇರೆ ಯಾರೂ ಸರಕಾರಿ ಜಾಗವನ್ನು ಅತಿಕ್ರಮಣ ಮಾಡಿಲ್ವ? ಸಾವಿರಾರು ಪ್ರಕರಣ ಅಕ್ರಮ ಮಾಡಿರುವುದು ನನ್ನಲ್ಲಿ ದಾಖಲೆ ಇದೆ ಎಂದ ಮಹಮ್ಮದ್ ಆಲಿಯವರು ದೊಡ್ಡ ದೊಡ್ಡ ವಿದ್ಯಾಸಂಸ್ಥೆಗಳು ಸರಕಾರಿ ಜಾಗವನ್ನು ಅತಿಕ್ರಮಣ ಮಾಡಿದ್ದಾರೆ.ಕುಮ್ಕಿ ಹೆಸರಿನಲ್ಲಿ ಪುತ್ತೂರು ನಗರದಲ್ಲಿ ಬೆಲೆಬಾಳುವ ಜಾಗವನ್ನು ಅಕ್ರಮವಾಗಿ ಸ್ವಾಧಿನ ಮಾಡಿದ ಉದಾಹರಣೆ ಇದೆ. ಅದರ ಬಗ್ಗೆ ಕ್ರಮ ಕೈಗೊಳ್ಳದವರು ಬಡವರ ಮನೆ ತೆರವು ಮಾಡುವುದು ಸರಿಯಲ್ಲ ಎಂದರಲ್ಲದೆ,94 ಸಿಯಲ್ಲಿ ಎಷ್ಟೋ ಜನರಿಗೆ ಕಾನೂನು ಬಾಹಿರವಾಗಿ ಹಕ್ಕು ಪತ್ರ ಕೊಟ್ಟಿರುವುದೂ ನಮಗೆ ಗೊತ್ತಿದೆ.ಈ ಎಲ್ಲಾ ಘಟನೆಗಳು ನಡೆಯುವುದಕ್ಕೆ ಶಾಸಕರು ಕಾರಣಕರ್ತರಾಗಿದ್ದಾರೆ.ಇದಕ್ಕಾಗಿ ನಾನು ನೇರವಾಗಿ ಶಾಸಕರ ಮೇಲೆ ಆರೋಪ ಮಾಡುತ್ತಿzನೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಒಳಮೊಗ್ರು ಕಾಂಗ್ರೆಸ್ ವಲಯ ಸಮಿತಿ ಅಧ್ಯಕ್ಷ ಅಶೋಕ್ ಪೂಜಾರಿ, ರಾಜೀವ ಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಂತೋಷ್ ಭಂಡಾರಿ ಚಿಲ್ಮೆತ್ತಾರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.