ಕೊಯಿಲ: ಕೋಳಿ ಫಾರ್ಮ್ ನಲ್ಲಿ ಜುಗಾರಿ ಆಟ | ಪೊಲೀಸರ ದಾಳಿ , ಐವರ ಬಂಧನ-ವಾಹನ ನಗದು ವಶಕ್ಕೆ, ಹಲವರು ಪರಾರಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ : ಕೋಳಿ ಫಾರ್ಮ್ ವೊಂದರಲ್ಲಿ ಜುಗಾರಿ ಆಟ ಆಡುತ್ತಿದ್ದ ವೇಳೆ ದಾಳಿ ನಡೆಸಿದ ಕಡಬ ಪೊಲೀಸರು ಐವರನ್ನು ಬಂಧಿಸಿ ನಗದು ವಶಪಡಿಸಿಕೊಂಡ ಘಟನೆ ಜು.28ರ ರಾತ್ರಿ ಕೊಯಿಲ ಗ್ರಾಮದ ಅಂಬ ಎಂಬಲ್ಲಿ ನಡೆದಿದೆ. ಪ್ರಮೋದ್ ಹಿರೆಬಂಡಾಡಿ,ದರ್ಶನ್ ಅಂಬ,ಸತೀಶ್ ಪಟ್ಟೆ,ಸುನಿಲ್ ಉದನೆ,ಅರುಣ್ ಪ್ರಸಾದ್ ನೇರಳಕಟ್ಟೆ ಬಂಧಿತರು.

ಜೂಜಾಟ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಕಡಬ ಠಾಣೆ ಯ ಎಸ್.ಐ.ರುಕ್ಮ ನಾಯ್ಕ್ ಸಿಬಂದಿಗಳಾದ ಹರೀಶ್ , ಶ್ರೀಶೈಲ, ಭವಿತ್, ಎಎಸ್ಐ ಚಂದ್ರಶೇಖರ್ , ಹೊಯ್ಸಲದ ಶಿವರಾಜ್ ಮತ್ತು ಕುಮಾರ್, ಹೋಂ ಗಾರ್ಡ್ ರತೀಶ್ ಅವರುಗಳು ಮಧ್ಯರಾತ್ರಿ ಒಂದು ಗಂಟೆ ಸಮಯಕ್ಕೆ ದಾಳಿ ನಡೆಸಿದ್ದಾರೆ.

ಪ್ರಮೋದ್ ಹಿರೆಬಂಡಾಡಿ

ಸತೀಶ್-ಪಟ್ಟೆ.


ಸುನೀಲ್-ಉದನೆ.

ಅರುಣ್ ಪ್ರಸಾದ್ ನೇರಳಕಟ್ಟೆ

ದಾಳಿಯ ಸಂದರ್ಭದಲ್ಲಿ ಐವರು ಪೊಲೀಸ್ ವಶವಾದರೆ, ಹರೀಶ್ ಒ.ಕೆ,ಶಿಯಾಬ್ ಗೊಳಿತ್ತಡಿ, ಸಂಜೀವ ಪೂಜಾರಿ ಅಂಬ ಅವರು ಸೇರಿದಂತೆ ಹಲವರು ಪರಾರಿಯಾಗಿದ್ದಾರೆ.

ದಾಳಿಯ ವೇಳೆ ಆಟಕ್ಕೆ ಬಳಸಿದ ರೂ. 8940 ನಗದು ಹಾಗೂ ಇಸ್ಪೀಟೆಲೆಗಳು ಅಲ್ಲದೆ ಸ್ಥಳದಲ್ಲಿದ್ದ ಎರಡು ಆಟೋರಿಕ್ಷಾ ಮತ್ತು ಮೋಟರ್ ಸೈಕಲ್ ನ್ನು ವಶಪಡಿಸಿ ಕೊಳ್ಳಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.