ನವೀಕೃತಗೊಂಡ ಕಲ್ಲೇಗ ಜುಮ್ಮಾ ಮಸೀದಿ, ಯಾತ್ರಿಕ ಮಹಿಳೆಯರ ನಮಾಜ್ ಕಟ್ಟಡ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸುಮಾರು 700ವರ್ಷಗಳ ಪುರಾತನ ಕಾಲದ ದಕ್ಷಿಣ ಕನ್ನಡದ 2ನೇ ಪ್ರಮುಖ ಮಸೀದಿಯೆಂದು ಪ್ರತೀತವಾಗಿರುವ ಕಲ್ಲೇಗ ಜುಮ್ಮಾ ಮಸೀದಿಯು ಇದೀಗ ನವೀಕೃತಗೊಂಡು ಜು.29ರಂದು ಉದ್ಘಾಟನೆಗೊಂಡಿದೆ. ಇದೆ ಸಂದರ್ಭದಲ್ಲಿ ನೂತನವಾಗಿ ನಿರ್ಮಿಸಿದ ಯಾತ್ರಿಕ ಮಹಿಳೆಯರಿಗೆ ಹಾಗೂ ಮದ್ರಸ ವಿದ್ಯಾರ್ಥಿನಿಯರಿಗೆ ನಮಾಜ್ ನಿರ್ವಹಿಸಲು ನಿರ್ಮಿಸಿದ ಕಟ್ಟಡದ ಉದ್ಘಾಟನೆಯನ್ನು ಯಾಹ್ಯ ತಂಙಲ್‌ ಪೋಲ್ಯ ರವರು ನೆರವೇರಿಸಿದರು.

ಟಿಪ್ಪುಸುಲ್ತಾನ್‌ರವರ ಕಾಲದಲ್ಲಿ ಕೊಡಗಿನಿಂದ ಹಿಡಿದು ದಕ್ಷಿಣ ಕನ್ನಡ ಜಿಲ್ಲೆಯ ಮುಸಲ್ಮಾನರ ಆರಾಧನ ಕೇಂದ್ರವಾಗಿದ್ದು ಟಿಪ್ಪುಸುಲ್ತಾನರವರ ಆಡಳಿತ ಅವಧಿಯಲ್ಲಿ ದೀಪ ಉರಿಸಲು ತಸ್ತಿಕ್ ದೊರೆಯುತ್ತಿದ್ದ ಪುರಾವೆಗಳೂ ಇವೆ ಮತ್ತು ಹಲಾಬಿ ಕೊಟ್ಟಿಗೆ ಮತ್ತು ಮೊಹರಂನ್ನು ಆಚರಿಸುತ್ತಿದ್ದ ಪ್ರತೀಕವಿದೆ.  ಅನಾದಿಕಾಲದಿಂದಲೂ ಈ ಮಸೀದಿಗೆ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ. 

ನವೀಕೃತಗೊಂಡಿರುವ ನೂತನ ಮಸೀದಿಯನ್ನು  ಪುತ್ತೂರು ಮುದರಿಸ್ ಅಸೈಯದ್ ಅಹಮ್ಮದ್ ಪೂಕೋಯ ತಂಙಳ್‌ರವರು ನೆರವೇರಿಸಿ ಮಾತನಾಡಿ ಮಸೀದಿಗಳು ಭಗವಂತನ ಭವನವಾಗಿದ್ದು ಮಸೀದಿಗಳ ಪಾವಿತ್ರತೆಯನ್ನು ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಅವರು ಹೇಳಿದರುಉ. ಮಸೀದಿಗಳು ಮಾನವನ ಶಾಂತಿ-ಸಮಧಾನದ ಪ್ರತೀಕವಾಗಿದ್ದು, ಇಂತಹ ಮಸೀದಿಗಳ ನಿರ್ಮಾಣದಲ್ಲಿ ಸಹಕರಿಸುವುದು ಇಹ ಪರ ವಿಜಯಕ್ಕೆ ಕಾರಣವಾಗಲಿದೆ. ನಾವೂ ಮಸೀದಿಗಳ ನಿರ್ಮಾಣದಲ್ಲಿ ಹೆಚ್ಚೆಚ್ಚು ಸಹಕರಿಸುವ ಮೂಲಕ ದೇವರ  ಸಂಪ್ರೀತಿಗೆ ಪಾತ್ರರಾಗಬೇಕಾಗಿದೆ ಎಂದು ಅವರು ಹೇಳಿದರು. ಇಲ್ಲಿನ ಮಸೀದಿಗಳ ನಿರ್ಮಾಣಕ್ಕೆ ಸಹಕರಿಸಿದವರಿಗೆಲ್ಲಾ ಅಲ್ಲಾಹು ತಕ್ಕುದಾದ ಪ್ರತಿಫಲ ನೀಡಲಿ ಎಂದರು.

ಸಮಾಋಂಭದ ಅಧ್ಯಕ್ಷತೆಯನ್ನು  ಕಲ್ಲೇಗ ಜುಮ್ಮಾ ಮಸೀದಿಯ ಅಧ್ಯಕ್ಷ ಹಾಗೂ ಉದ್ಯಮಿ ಕೆ.ಪಿ. ಮುಹಮ್ಮದ್ ಹಾಜಿ ವಹಿಸಿದ್ದರು. 

ಕಲ್ಲೇಗ ಮಸೀದಿಯ ಮುದರಿಸ್ ಅಬೂಬ್ಬಕ್ಕರ್ ಸಿದ್ದೀಕ್ ಜಲಾಲಿರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿಗಳಾಗಿ ಕಲ್ಲೇಗ ಮಸೀದಿಯ ಮಾಜಿ ಮುದರಿಸ್ ವಿ.ಕೆ. ಅಬ್ದುಲ್ ಖಾದರ್ ಹಾಜಿ ಬೆಂಗಳೂರು, ಬಂದರು ಮಸೀದಿಯ ಮುದರೀಸ್, ಹಾಜಿ ಅಬುಲ್ ಅಕ್ರಂ ಮುಹಮ್ಮದ್ ಮುಸ್ಲಿಯಾರ್, ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಮೊಯಿದ್ ಫೈಝಿ ಕುಂತೂರು, ಇಸ್ಮಾಯಿಲ್ ಫೈಝಿ, ಕಡಬ ಕೇಂದ್ರ ಜುಮ್ಮಾ ಮಸೀದಿಯ ಇಬ್ರಾಹಿಂ ದಾರಿಮಿ, ಅಸೈಯದ್ ಯಾಹ್ಯಾಯ ತಂಙಳ್ ಮುದರಿಸ್ ಪೋಳ್ಯ, ಅಸೀಫ್ ಡೀಲ್ ಅಧ್ಯಕ್ಷರು ಬಿಹ್ಯೂಮನ್ ಮಂಗಳೂರು, ಹಾಜಿ ಉಮ್ಮರ್ ರಾಜ್‌ಕಮಲ್, ಅಶ್ರಫ್ ಎಚ್ .ಬಿ.ಟಿ ಮಂಗಳೂರು,  ಪುತ್ತೂರು ಅನ್ಸಾರುದ್ದೀನ್‌ ಜಮಾಅತ್‌ ಕಮಿಟಿ ಅಧ್ಯಕ್ಷ ಎಲ್.ಟಿ ಅಬ್ದುಲ್‌ ರಝಾಕ್‌ ಹಾಜಿ, ಸಹಿತ ಹಲವಾರು ಗಣ್ಯರು, ಉಮಾರ ಉಲೇಮಾಗಳು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಕಲ್ಲೇಗ ಜುಮ್ಮಾ ಮಸೀದಿಯ ಅಧ್ಯಕ್ಷ ಹಾಗೂ ಉದ್ಯಮಿ ಕೆ.ಪಿ. ಮುಹಮ್ಮದ್ ಹಾಜಿ ಮತ್ತು ಉಪಾಧ್ಯಕ್ಷ ನ್ಯಾಯವಾದಿ ಕೆ.ಎಂ. ಸಿದ್ದಿಕ್‌ರವರು ಕಾರ್ಯಕ್ರಮ ನಿರ್ವಹಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.