HomePage_Banner
HomePage_Banner
HomePage_Banner
HomePage_Banner

ಜು.31: ಕೋರ್ಪೊರೇಶನ್ ಬ್ಯಾಂಕ್ ಉದ್ಯೋಗಿ ಈಶ್ವರ್ ಬೆಡೇಕರ್ ವಯೋನಿವೃತ್ತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮುಖ್ಯರಸ್ತೆಯಲ್ಲಿನ ದೇವಣ್ಣ ಕಿಣಿ ಕಾಂಪ್ಲೆಕ್ಸ್ ಬಳಿ ಕಾರ್ಯಾಚರಿಸುತ್ತಿರುವ ಕೋರ್ಪೊರೇಶನ್ ಬ್ಯಾಂಕ್‌ನ ಉದ್ಯೋಗಿ ಬಿ.ಈಶ್ವರ್ ಬೆಡೇಕರ್‌ರವರು ತಮ್ಮ ವೃತ್ತಿ ಬದುಕಿನಲ್ಲಿ ಸುಮಾರು ೩೬ ವರ್ಷಗಳ ಕಾಲ ಸೇವೆ ಸಲ್ಲಿಸಿ ಜು.೩೧ ರಂದು ವಯೋನಿವೃತ್ತಿ ಹೊಂದಲಿದ್ದಾರೆ.

ಮುಳ್ಳೇರಿಯ ದಿ.ನಾರ್ಣು ನಾಯ್ಕ ಹಾಗೂ ದಿ.ದೇವಕಿ ದಂಪತಿ ಪುತ್ರನಾಗಿ ೧೯೬೧, ಜುಲೈ ೨೦ರಂದು ಜನಿಸಿರುವ ಈಶ್ವರ್ ಬೆಡೇಕರ್‌ರವರು ೧೯೮೫, ಏಪ್ರಿಲ್ ೨೮ರಂದು ಕೋರ್ಪೊರೇಶನ್ ಬ್ಯಾಂಕಿಗೆ ಉದ್ಯೋಗಿಯಾಗಿ ನೇಮಕಗೊಂಡರು. ಬಳಿಕ ಅವರು ಕೋರ್ಪೊರೇಶನ್ ಬ್ಯಾಂಕಿನ ಶಾಖೆಗಳಾದ ಸುಳ್ಯ, ಮಡಂತ್ಯಾರು, ಬಂಟ್ವಾಳ, ವಿಟ್ಲ, ಪುತ್ತೂರು ಇಲ್ಲಿ ಸೇವೆಯನ್ನು ಸಲ್ಲಿಸಿದ್ದು, ಕೋರ್ಪೊರೇಶನ್ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್‌ನ ವಲಯ ಕಾರ್ಯದರ್ಶಿಯಾಗಿ ಸೇವೆಯನ್ನು ಸಲ್ಲಿಸಿರುತ್ತಾರೆ. ಈಶ್ವರ್ ಬೆಡೇಕರ್‌ರವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಸುಳ್ಯ ಬಡ್ಡಡ್ಕ ಶ್ರೀರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಪದವಿ ಪೂರ್ವ ಶಿಕ್ಷಣವನ್ನು ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪೂರೈಸಿರುತ್ತಾರೆ.

ಪ್ರಸ್ತುತ ಈಶ್ವರ್ ಬೆಡೇಕರ್‌ರವರು ಅಂತರ್ರಾಷ್ಟ್ರೀಯ ರೋಟರಿ ಸಂಸ್ಥೆಯೆನಿಸಿರುವ ರೋಟರಿ ಕ್ಲಬ್ ಪುತ್ತೂರು ಎಲೈಟ್‌ನ ಸದಸ್ಯರಾಗಿದ್ದು, ಸುದಾನ ಸ್ಪೋರ್ಟ್ಸ್ ಕ್ಲಬ್‌ನ ಸದಸ್ಯರೂ ಆಗಿರುತ್ತಾರೆ. ಹಾಡುವುದು, ಅಭಿನಯ, ಶಟಲ್ ಬ್ಯಾಡ್ಮಿಂಟನ್, ಗೆಳೆತನ ಬೆಳೆಸುವುದು ಈಶ್ವರ್ ಬೆಡೇಕರ್‌ರವರ ಹವ್ಯಾಸವಾಗಿದ್ದು, ಪ್ರಸ್ತುತ ಇವರು ೨೦೧೭ರಲ್ಲಿ ಸಾಮೆತ್ತಡ್ಕದಲ್ಲಿ ನಿರ್ಮಿಸಿರುವ ನೂತನ ಮನೆಯಾದ `ಕೇದಾರಂ’ ಇಲ್ಲಿ ಪತ್ನಿ ಸತ್ಯವತಿ, ಪುತ್ರಿ ಸೌಪರ್ಣಿಕ, ಪುತ್ರ ಸಾತ್ವಿಕ್‌ರವರೊಂದಿಗೆ ವಾಸವಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.