HomePage_Banner
HomePage_Banner
HomePage_Banner
HomePage_Banner

ಜು.30 :ಎಲ್‌ಐಸಿ ಪುತ್ತೂರು ಶಾಖಾ ಸಹಾಯಕ ವಿಭಾಗೀಯ ಅಧಿಕಾರಿ ಎಂ.ಡಿ ವೆಂಕಪ್ಪ ನಿವೃತ್ತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಭಾರತೀಯ ಜೀವವಿಮಾ ನಿಗಮದ ಪುತ್ತೂರು ಶಾಖೆಯಲ್ಲಿ ಸಹಾಯಕ ವಿಭಾಗೀಯ ಅಧಿಕಾರಿಯಾಗಿದ್ದ ಎಂ.ಡಿ ವೆಂಕಪ್ಪರವರು ಜು.30ರಂದು ನಿವೃತ್ತರಾಗಲಿದ್ದಾರೆ.

ಬಂಟ್ವಾಳ ತಾಲೂಕಿನ ಮಂಚಿ ನಿವಾಸಿಯಾಗಿರುವ ಎಂ.ಡಿ ವೆಂಕಪ್ಪರವರು, ೧೯೮೭ರಲ್ಲಿ ಭಾರತೀಯ ಜೀವವಿಮಾ ನಿಗಮ ದಾವಣಗೆರೆ ಶಾಖೆಗೆ ಸಹಾಯಕರಾಗಿ ಕರ್ತವ್ಯಕ್ಕೆ ನೇಮಕಗೊಂಡು ನಂತರ ಬಂಟ್ವಾಳ, ಮಂಗಳೂರು ಶಾಖೆಗಳಲ್ಲಿ ಕರ್ತವ್ಯನಿರ್ವಹಿಸಿದ್ದರು. ಬಳಿಕ ಆಡಳಿತಾಧಿಕಾರಿಯಾಗಿ ಮುಂಭಡ್ತಿ ಪಡೆದು ರಾಯಚೂರಿನ ಹರಪ್ಪನಹಳ್ಳಿ, ದಾರಾವಾಡದ ಶಿರಸಿ ಶಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿ ೨೦೧೫ರಲ್ಲಿ ಸಹಾಯಕ ವಿಭಾಗೀಯ ವ್ಯವಸ್ಥಾಪಕರಾಗಿ ಪದೋನ್ನತಿ ಪಡೆದು ಪಶ್ಚಿಮ ವಲಯದ ಸತಾರ ವಿಭಾಗೀಯ ಕಚೇರಿ ಹಾಗೂ ೨೦೧೮ರಲ್ಲಿ ಉಡುಪಿ ವಿಭಾಗೀಯ ಕಚೇರಿಯ ಪುತ್ತೂರು ಶಾಖೆಗೆ ವರ್ಗಾವಣೆಗೊಂಡಿದ್ದರು.

1983ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಎ ಪದವಿ ಪಡೆದಿರುವ ವೆಂಕಪ್ಪರವರು ವೃತ್ತಿ ಜೀವನದ ಜೊತೆಗೆ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿಯೂ ತನ್ನನ್ನು ತೊಡಗಿಸಿಕೊಂಡಿದ್ದರು. ೨೦೧೧ರಲ್ಲಿ ಮಂಗಳೂರು ಪುರಭವನದಲ್ಲಿ ನಡೆದ ಬೆಳ್ಳಿ ಹಬ್ಬ ಸಂಭ್ರಮದ ರಾಜ್ಯಮಟ್ಟದ ಪುರಸ್ಕಾರ, ೨೦೧೩ರಲ್ಲಿ ಸ್ವಸ್ತಿಕ್ ಸಂಭ್ರಮ ಪುರಸ್ಕಾರ, ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಆಳ್ವಾಸ್ ನುಡಿಸಿರಿಯಲ್ಲಿ ಸನ್ಮಾನವನ್ನು ಪಡೆದಿರುತ್ತಾರೆ. ಯಕ್ಷಗಾನ, ನಾಟಕ ಕಲಾವಿಧರಾಗಿ, ಉತ್ತಮ ವಾಗ್ಮಿಯೂ ಆಗಿರುತ್ತಾರೆ.

ಪತ್ನಿ ಬಿಎಸ್‌ಎನ್‌ಎಲ್‌ನ ನಿವೃತ್ತ ಉದ್ಯೋಗಿ ಜಾನಕಿ, ಪುತ್ರ ಇನ್ಫೋಸಿಸ್ ಇಂಜಿನಿಯರ್ ದೀಕ್ಷಿತ್ ಕುಮಾರ್, ಪುತ್ರಿ ಡಾ.ಮಾಧುರ್ಯ, ಸೊಸೆ ದಿವ್ಯಾ ಹಾಗೂ ಮೊಮ್ಮಗಳು ನಿಹಿರಾರೊಂದಿಗೆ ಪ್ರಸ್ತುತ ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆಯಲ್ಲಿ ವಾಸ್ತವ್ಯವಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.