HomePage_Banner
HomePage_Banner
HomePage_Banner
HomePage_Banner

ಸಾಮಾಜಿಕ ಮುಂದಾಳು ವೈಪಾಲ ರಾಮಣ್ಣ ರೈಯವರಿಗೆ ಶ್ರದ್ಧಾಂಜಲಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಚಿತ್ರ- ಉಮಾಪ್ರಸಾದ್ ರೈ ನಡುಬೈಲು

  • ರಾಮಣ್ಣ ರೈಯವರ ಬದುಕು ಸಮಾಜಕ್ಕೆ ಆದರ್ಶ- ಕಾವು ಹೇಮನಾಥ ಶೆಟ್ಟಿ

ಪುತ್ತೂರು: ಜು. ೧೭ ರಂದು ನಿಧನರಾದ ಸಾಮಾಜಿಕ ಹಾಗೂ ಧಾರ್ಮಿಕ ಮುಂದಾಳು, ನೆಟ್ಟಾರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹಾಗೂ ಬಂಟ ಸಮಾಜದ ಪ್ರತಿಷ್ಟಿತ ನಡುಬೈಲು ಕುಟುಂಬದವರಾದ ವೈಪಾಲ ರಾಮಣ್ಣ ರೈಯವರ ಉತ್ತರಕ್ರಿಯೆಯು ಜು. ೨೯ ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿತು.

ಈ ಸಂದರ್ಭದಲ್ಲಿ ರಾಮಣ್ಣ ರೈಯವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್‍ಯಕ್ರಮದಲ್ಲಿ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ ವೈಪಾಲ ರಾಮಣ್ಣ ರೈಯವರು ಸದಾ ಸಕ್ರಿಯರಾಗಿ, ಸಮಾಜ ಮತ್ತು ಕುಟುಂಬದವರೊಂದಿಗೆ ಪ್ರೀತಿ ವಿಶ್ವಾಸವನ್ನು ಗಳಿಸಿ, ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿ ಬದುಕು ಸಾಗಿಸಿ, ಅಕಾಲಿಕವಾಗಿ ನಮ್ಮನ್ನು ಅಗಲಿದ್ದಾರೆ. ಅವರು ಶ್ರಮಜೀವಿಯಾಗಿ ಧಾರ್ಮಿಕ, ಸಾಮಾಜಿಕ, ಹೈನುಗಾರಿಕೆ ಸಹಿತ ಎಲ್ಲಾ ಕ್ಷೇತ್ರದಲ್ಲೂ ಅತ್ಯುತ್ತಮವಾದ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ ಎಂದು ನುಡಿನಮನ ಸಲ್ಲಿಸಿದರು. ವೈಪಾಲ ರಾಮಣ್ಣ ರೈಯವರ ಪತ್ನಿ ವಿಜಯ, ಪುತ್ರ ಮನೋಹರ್, ಪುತ್ರಿಯರಾದ ಮಮತಾ, ವಿನುತಾ, ಅಳಿಯಂದಿರು, ಸೊಸೆ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಮತ್ತು ಹಿತೈಷಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.