ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ದಂತ ವೈದ್ಯ ಡಾ. ರಾಜಾರಾಮ್ ತಂದೆ ನಿವೃತ್ತ ಮುಖ್ಯ ಶಿಕ್ಷಕ ಕೋಂಗುಜೆ ಬಾಬು ಪೂಜಾರಿಯವರಿಗೆ ಶೃದ್ಧಾಂಜಲಿ, ನುಡಿನಮನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷ, ದಂತ ವೈದ್ಯ ಡಾ. ರಾಜಾರಾಮ್‌ರವರ ತಂದೆ ನಿವೃತ್ತ ಮುಖ್ಯ ಶಿಕ್ಷಕ ಕೋಂಗುಜೆ ಬಾಬು ಪೂಜಾರಿಯವರಿಗೆ ಶೃದ್ಧಾಂಜಲಿ, ನುಡಿನಮನ ಕಾರ್‍ಯಕ್ರಮ ಜುಲೈ ೨೯ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಂಗಣದಲ್ಲಿ ಜರಗಿತು.

ಕಾರ್‍ಯಕ್ರಮದಲ್ಲಿ ಕೋಂಗುಜೆ ಬಾಬು ಪೂಜಾರಿಯವರ ಸಹೋದ್ಯೋಗಿ, ಬೆಳ್ತಂಗಡಿ ಗುರುದೇವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಕೃಷ್ಣಪ್ಪ ಪೂಜಾರಿ ನುಡಿನಮನ ಸಲ್ಲಿಸಿ ಮಾತನಾಡಿ ಬಾಬು ಪೂಜಾರಿಯವರು ೮೫ ವರ್ಷಗಳ ಕಾಲ ಜೀವನ ನಡೆಸಿ ಸುಸಂಸ್ಕೃತ ಸಮಾಜ ಕಟ್ಟಿದವರು, ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿ ಅವರಿಗೆ ಬೆಳಕು ಚೆಲ್ಲಿದವರು. ಬಾಬು ಪೂಜಾರಿಯವರ ತ್ಯಾಗ, ಆದರ್ಶಗಳು ನಮಗೆ ಮಾದರಿಯಾಗಿದೆ ಎಂದರು.

ಕೋಂಗುಜೆ ಬಾಬು ಪೂಜಾರಿಯವರ ಶಿಷ್ಯ, ನಿವೃತ್ತ ದೈಹಿಕ ಶಿಕ್ಷಕ ಗೋಪಾಲ ಶೆಟ್ಟಿ ಮಾತನಾಡಿ ೨ ವರ್ಷ ಅವರ ಶಿಷ್ಯನಾಗಿ ಕಲಿಯುವ ಯೋಗ ಸಿಕ್ಕಿತ್ತು. ಅವರ ನೀತಿ ಪಾಠಗಳು, ಸರಳತೆ, ಆದರ್ಶ ವ್ಯಕ್ತಿತ್ವ ಸ್ಪೂರ್ತಿಯಾಗಿತ್ತು. ಅವರು ಬೀರಿದ ಪ್ರಭಾವದಿಂದಾಗಿ ನಾನು ಕೂಡಾ ಒಬ್ಬ ಶಿಕ್ಷಕನಾಗಿ, ವ್ಯಕ್ತಿಯಾಗಿ ರೂಪಗೊಂಡಿದ್ದೇನೆ ಎಂದರು.

ಕಾರ್‍ಯಕ್ರಮದಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಶಾಸಕರಾದ ಶ್ರೀಮತಿ ಶಕುಂತಳಾ ಶೆಟ್ಟಿ, ವಸಂತ ಬಂಗೇರ, ರುಕ್ಮಯ ಪೂಜಾರಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರುಗಳಾದ ಶ್ರೀಮತಿ ಶಯನಾ ಜಯಾನಂದ, ಎಂ.ಎಸ್. ಮಹಮ್ಮದ್, ಅನಿತಾ ಹೇಮನಾಥ ಶೆಟ್ಟಿ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ಮಾಜಿ ಅಧ್ಯಕ್ಷರಾದ ಮಹಮ್ಮದ್ ಬಡಗನ್ನೂರು, ಹೇಮನಾಥ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್‍ಯದರ್ಶಿಗಳಾದ ಮುರಳೀಧರ ರೈ ಮಠಂತಬೆಟ್ಟು, ಉಮಾನಾಥ ಶೆಟ್ಟಿ, ದೇವಿದಾಸ ರೈ, ಕಿಸಾನ್ ಘಟಕದ ಅಧ್ಯಕ್ಷ ಮೋಹನ್ ಗೌಡ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಶೆಟ್ಟಿ, ಅಬ್ಬಾಸ್ ಅಲಿ, ರಮಾನಾಥ ವಿಟ್ಲ, ಬೆಳ್ತಂಗಡಿಯ ಅಭಿನಂದನ್ ಹರೀಶ್ ಕುಮಾರ್, ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲು, ಬೆಳ್ತಂಗಡಿ ಬಿಲ್ಲವ ಸಂಘದ ಅಧ್ಯಕ್ಷ ಪದ್ಮನಾಭ ಮಾನಿಂಜ, ಉಪ್ಪಿನಂಗಡಿ ವಲಯ ಸಮಿತಿ ಅಧ್ಯಕ್ಷ ಎಸ್. ರವಿಚಂದ್ರ ಶಾಂತಿ, ಗುರುದೇವ ವಿವಿದೋದ್ದೇಶ ಸಹಕಾರಿ ಸಂಘದ ಮೋನಪ್ಪ ಪೂಜಾರಿ ಕಂಡೆತ್ತಾರ್, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಸದಸ್ಯರಾದ ಜಯಂತ ಪೊರೋಳಿ, ಹರಿರಾಮಚಂದ್ರ, ಮಾಜಿ ಸದಸ್ಯರಾದ ರಾಧಾಕೃಷ್ಣ ನಾಯಕ್, ಕೋಟಿ-ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಉಷಾ ಮುಳಿಯ, ಮಾಜಿ ಸದಸ್ಯ ಚಂದ್ರಶೇಖರ ಮಡಿವಾಳ, ತಣ್ಣೀರುಪಂಥ ಗ್ರಾಮ ಪಂಚಾಯಿತಿ ಸದಸ್ಯ ಜಯವಿಕ್ರಮ, ಉಪ್ಪಿನಂಗಡಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಶ್ರೀಮತಿ ಸುಜಾತ ಕೃಷ್ಣ, ಎನ್. ಉಮೇಶ್ ಶೆಣೈ, ಉದ್ಯಮಿಗಳಾದ ಯು. ರಾಮ, ಮಹೇಂದ್ರ ವರ್ಮಾ, ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರುಗಳು, ಸದಸ್ಯರುಗಳು, ಕೋಂಗುಜೆ ಬಾಬು ಪೂಜಾರಿಯವರ ಪತ್ನಿ ಗಿರಿಜ, ಪುತ್ರಿಯರಾದ ಸುಜಯ, ವಿಜಯ ಮತ್ತು ಕುಟುಂಬ ಸದಸ್ಯರು ಉಪಸ್ಥಿತರಿದ್ದರು. ಡಾ. ರಾಜಾರಾಮ್ ಸ್ವಾಗತಿಸಿ, ಜಯರಾಮ ವಂದಿಸಿದರು. ಮನೋಹರ್ ಕಾರ್‍ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.