ಆ.14ಕ್ಕೆ ಪುತ್ತೂರಿನಲ್ಲಿ ಮೆಗಾ ಅದಾಲತ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಸಾರ್ವಜನಿಕರು ಸದುಪಯೋಗ ಪಡೆಯುವಂತೆ  ನ್ಯಾಯಾಧೀಶ ಎಂ.ರಮೇಶ್ ವಿನಂತಿ

“ನ್ಯಾಯಾಲಯದಲ್ಲಿ ತೀರ್ಮಾಣ ಆದರೆ ಒಬ್ಬರಿಗೆ ಸೋಲು, ಇನ್ನೊಬ್ಬರಿಗೆ ಗೆಲುವು
ಲೋಕಾ ಅದಾಲತ್ ಕೇಸ್ ತೀರ್ಮಾಣ ಆದರೆ ಇಬ್ಬರೂ ಗೆಲ್ಲುತ್ತಾರೆ “

*ಇಬ್ಬರು ಒಪ್ಪಿಗೆ ಮೇರೆಗೆ ಸಂದಾನ ಮಾಡಿ ರಾಜಿ, ಸಮಯ ಉಳಿಯುತ್ತದೆ, ಕೋರ್ಟಿಗೆ ಕಟ್ಟಿದ ಹಣವೂ ಪುನಃ ಸಿಗುತ್ತದೆ, ಸಾಮಾನ್ಯ ಜನರಿಗೆ ಸಂವಿಧಾನಾತ್ಮಕವಾಗಿ ತೀರ್ಪು ಸಿಗಲಿದೆ*

ಪುತ್ತೂರು: ನ್ಯಾಯಾಲಯದಲ್ಲಿ ಹೂಡಲಾಗಿರುವ ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಲು ಆಗಸ್ಟ್ ೧೪ರಂದು ಎಲ್ಲಾ ನ್ಯಾಯಾಲಯಗಳಲ್ಲೂ ಮೆಗಾ ಲೋಕಾ ಅದಾಲತ್ ನಡೆಯಲಿದ್ದು, ಪುತ್ತೂರು ನ್ಯಾಯಾಲಯದಲ್ಲೂ ಮೆಗಾ ಅದಾಲತ್ ಏರ್ಪಡಿಸಲಾಗಿದೆ ಎಂದು ಪುತ್ತೂರು ಹಿರಿಯ ಸಿವಿಲ್ ನ್ಯಾಯಾಧೀಶರಾದ ಅಪರ ಮುಖ್ಯ ನ್ಯಾಯಿಕ ದಂಡಾಧಿಕಾರಿ ಎಂ.ರಮೇಶ್ ಅವರು ತಿಳಿಸಿದ್ದಾರೆ.

ಯಾವುದೇ ಪ್ರಕರಣದ ಎರಡು ಕಕ್ಷಿಗಾರರು, ಸಂಧಾನಕಾರರ ಹಾಗೂ ಸಾಕ್ಷಿದಾರರ ಸಲಹೆ ಸೂಚನೆಗಳಿಗೆ ಸಂಪೂರ್ಣ ಸಮ್ಮತಿ ಸೂಚಿಸಿ ರಾಜಿ ತೀರ್ಮಾನ ಕೈಗೊಳ್ಳಲು ಲೋಕ್ ಅದಾಲತ್ ನಾಗರಿಕರಿಗೆ ಅನುಕೂಲ ಕಲ್ಪಿಸಿದೆ. ಸದರಿ ಲೋಕ್ ಅದಾಲತ್‌ನಲ್ಲಿ ಸಾರ್ವಜನಿಕರು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮತ್ತು ವ್ಯಾಜಾಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಇಚ್ಚಿಸಿದಲ್ಲಿ ಮುಂಚಿತವಾಗಿ ಸಂಬಂಧಪಟ್ಟ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ / ತಾಲೂಕು ಕಾನೂನು ಸೇವೆಗಳ ಸಮಿತಿಗಳಿಗೆ ಆನ್‌ಲೈನ್/ ವಿಡಿಯೋ ಕಾನ್ಪರೆನ್ಸ್ / ಇ ಮೇಲ್ / ಎಸ್.ಎಮ್.ಎಸ್ / ವಾಟ್ಸಪ್ / ಎಲೆಕ್ಟ್ರಾನಿಕ್ಸ್ ಮೊಡ್ / ಖುದ್ದಾಗಿ ಹಾಜಾರಾಗುವ ಮುಖಾಂತರ ಭೇಟಿ ನೀಡಿ ಮಾಹಿತಿ ಪಡೆದು ಕೊಳ್ಳಬೇಕೆಂದು ಹಾಗೂ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಸಂಬಂಧಪಟ್ಟ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಮತ್ತು ತಾಲೂಕು ಕಾನೂನು ಸೇವೆಗಳ ಸಮಿತಿಗಳನ್ನು ಸಂಪರ್ಕಿಸಿ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳುವಂತೆ ಅವರು ಹೇಳಿದರು. ಈಗಾಗಲೇ ಜು. ೨೬ ರಿಂದ ಪ್ರತಿ ದಿನ ಎಲ್ಲಾ ನ್ಯಾಯಾಲಯಗಳಲ್ಲಿ ಮೆಗಾ ಲೋಕ್ ಅದಾಲತ್‌ಗೆ ಸಂಬಂಧಿಸಿ ಪೂರ್ವಭಾವಿ ಕೌನ್ಸಿಲ್ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಸಿವಿಲ್ ನ್ಯಾಯಾಧೀಶರೂ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಧಿಕಾರಿ ವೆಂಕಟೇಶ್, ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.