ಕೊಯಿಲ-ಕೆಮ್ಮಾರದಲ್ಲಿ ಸಮಸ್ತ “ಫಾಳಿಲಾ ಪರೀಕ್ಷೆ”- ಪ್ರಥಮ ಬಾರಿಗೆ ಮಾತೃಭಾಷೆ ಕನ್ನಡದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ದ.ಕ. ಜಿಲ್ಲೆಯ ಏಕೈಕ ಪರೀಕ್ಷಾ ಕೇಂದ್ರ

೦ ಕೋವಿಡ್ ಮಾರ್ಗಸೂಚಿಯಂತೆ ವ್ಯವಸ್ಥಿತವಾಗಿ ಪರೀಕ್ಷೆ ನಡೆಸಲಾಯಿತು-ಉಮರ್ ದಾರಿಮಿ.
೦ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ದೊರೆತಿರುವುದು ಸಂತಸ ಕೊಟ್ಟಿದೆ-ಆಯಿಶತ್ ರಾಹಿಲಾ.

 

 

ಉಪ್ಪಿನಂಗಡಿ: ಪ್ರತಿಷ್ಠಿತ ಇಸ್ಲಾಮಿಕ್ ಶಿಕ್ಷಣ ಮಂಡಳಿಯಾದ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಅಧೀನದಲ್ಲಿ ಎಸ್ಸೆಸ್ಸೆಲ್ಸಿ ನಂತರದ ವಿದ್ಯಾರ್ಥಿನಿಯರಿಗೆ ಪಿಯುಸಿ. ಜೊತೆಗೆ ಧಾರ್ಮಿಕ ಸಮನ್ವಯ ಶಿಕ್ಷಣ ವ್ಯವಸ್ಥೆಯಾದ ಸಮಸ್ತ ವಿಮೆನ್ಸ್ ಇಸ್ಲಾಮಿಕ್ ಆರ್ಟ್ಸ್ ಕಾಲೇಜು “ಫಾಳಿಲ ಕೋರ್ಸ್” ಪ್ರಸಕ್ತ ಸಾಲಿನ ಪ್ರಥಮ ತಂಡದ ಹಾಗೂ ದ್ವಿತೀಯ ವರ್ಷದ ಫೈನಲ್ ಪಬ್ಲಿಕ್ ಪರೀಕ್ಷೆ ನಡೆಯುತ್ತಿದ್ದು, ಕೇರಳ ಕೇಂದ್ರ ಸ್ಥಾನವಾದ ಸಮಸ್ತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಜ್ಯದ ವಿದ್ಯಾರ್ಥಿನಿಗಳು ಮಾತೃ ಭಾಷೆಯಾದ ಕನ್ನಡದಲ್ಲಿ ಪರೀಕ್ಷೆ ಬರೆದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಕಡೆ ಪಾಳಿಲ ಕೋರ್ಸ್ ಕಲಿಸಲಾಗುತ್ತಿದೆಯಾದರೂ ಕಡಬ ತಾಲ್ಲೂಕಿನ ಕೊಯಿಲ ಗ್ರಾಮದ ಕೆಮ್ಮಾರ ಶಕ್ತಿನಗರದ ಶಂಸುಲ್ ಉಲಮಾ ಮಹಿಳಾ ಕಾಲೇಜಿನಲ್ಲಿ ಮಾತ್ರ ಈ ವರ್ಷ ಪಬ್ಲಿಕ್ ಪರೀಕ್ಷಾ ಕೇಂದ್ರ ನಿಗಧಿಪಡಿಸಲಾಗಿದ್ದು, ಅದರಂತೆ ಜುಲೈ ೨೬ರಂದು ಪರೀಕ್ಷೆ ಆರಂಭಗೊಂಡಿದ್ದು, ಜುಲೈ ೨೯ರಂದು ಮುಕ್ತಾಯಗೊಂಡಿತು. ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ಪರೀಕ್ಷೆಯ ಮೇಲ್ವಿಚಾರಕರಾಗಿದ್ದರು.

ಕೋವಿಡ್ ಮಾರ್ಗಸೂಚಿಯಂತೆ ಪರೀಕ್ಷೆ ನಡೆಸಲಾಯಿತು-ಉಮರ್ ದಾರಿಮಿ
ಕಡಬ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ತಾಲ್ಲೂಕುಗಳ ವಿದ್ಯಾರ್ಥಿನಿಗಳು ಹಾಗೂ ಕೇರಳದ ಬೋರ್ಡಿಂಗ್ ಸ್ಥಾಪನೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಜಿಲ್ಲೆಯ ವಿದ್ಯಾರ್ಥಿನಿಗಳು ಇಲ್ಲಿ ಪರೀಕ್ಷೆ ಬರೆದಿದ್ದು ಕೆಮ್ಮಾರ ಸಂಶುಲ್ ಉಲಮಾ ಕಾಲೇಜು ಸಮಿತಿ ಕೋವಿಡ್ ಮಾರ್ಗಸೂಚಿಯಂತೆ ಎಲ್ಲರಿಗೂ ಸಂಪೂರ್ಣ ಸೌಕರ್ಯಗಳ ವ್ಯವಸ್ಥೆ ಮಾಡಿದ್ದು, ಕಾಲೇಜಿನ ಪರೀಕ್ಷಾ ಕೇಂದ್ರವನ್ನು ಕೋವಿಡ್ ಮಾರ್ಗಸೂಚಿಯಂತೆ ಸಜ್ಜುಗೊಳಿಸಲಾಗಿದೆ.

ಕೇರಳದ ಚೇಳಾರಿ ಕೇಂದ್ರವಾಗಿ ಕಾರ್ಯಾಚರಿಸುತ್ತಿರುವ ಸಮಸ್ತದ ಎಲ್ಲಾ ಪಬ್ಲಿಕ್ ಪರೀಕ್ಷೆಗಳು ಈ ತನಕ ಅರೇಬಿಕ್ ಮತ್ತು ಅರಬಿ ಮಲಯಾಳಂನಲ್ಲಿ ನಡೆಸಲಾಗುತ್ತಿತ್ತು. ಈ ವರ್ಷದಿಂದ ಪ್ರಾರಂಭಗೊಂಡ ಫಾಳಿಲ ಕನ್ನಡಿಗ ವಿದ್ಯಾರ್ಥಿಗಳಿಗೆ ಮಾತೃಭಾಷೆಯಾದ ಕನ್ನಡದಲ್ಲಿ ಬರೆಯುವ ಅವಕಾಶ ಸಮಸ್ತ ನೀಡಿದ್ದು ವಿದ್ಯಾರ್ಥಿಗಳೆಲ್ಲರೂ ಬಹಳ ಸಂತೋಷದಿಂದ ಕನ್ನಡದಲ್ಲಿ ಪರೀಕ್ಷೆ ಬರೆದಿದ್ದಾರೆ. ಇದು ವಿದ್ಯಾರ್ಥಿನಿಯರಂತೆ ಅವರ ಪೋಷಕರಿಗೆ ಮತ್ತು ಕಾಲೇಜು ಆಡಳಿತ ಸಮಿತಿಯವರಿಗೂ ಹರುಷ ತಂದಿದ್ದು ಸಮಸ್ತದ ಅವಕಾಶಕ್ಕೆ ಮತ್ತು ಅದಕ್ಕಾಗಿ ಮುತುವರ್ಜಿ ವಹಿಸಿದ ಜಿಲ್ಲೆಯ ಸಮಸ್ತ ಶಿಕ್ಷಣ ಮೇಲ್ವಿಚಾರಕರಾದ ಮುಫತ್ತಿಷ್‌ಗಳ ಪ್ರಯತ್ನಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ದೊರೆತಿರುವುದು ಸಂತಸ ಕೊಟ್ಟಿದೆ-ಆಯಿಶತ್ ರಾಹಿಲಾ
ಕೆಮ್ಮಾರ ಶಂಸುಲ್ ಉಲಮಾ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿ ಬೆಳ್ತಂಗಡಿ ತಾಲ್ಲೂಕಿನ ಆಯಿಶತ್ ರಾಹಿಲಾ ಜೋಗಿಬೆಟ್ಟು ಮಾಧ್ಯಮದವರೊಂದಿಗೆ ಮಾತನಾಡಿ “ಹತ್ತು ವರ್ಷಗಳಿಂದ ಸಮಸ್ತದ ಮದರಸಗಳಲ್ಲಿ ಪರೀಕ್ಷೆ ಬರೆದಿದ್ದೆ. ಈ ವರ್ಷ ಮೊದಲ ಬಾರಿಗೆ ಸಮಸ್ತದ ಫಾಳಿಲಾ ಪರೀಕ್ಷೆ ಮಾತೃಭಾಷೆಯಾದ ಕನ್ನಡದಲ್ಲಿ ಬರೆಯಲು ಅವಕಾಶ ಲಭ್ಯವಾಗಿರುವುದು ಅತೀವ ಸಂತಸ ತಂದಿದೆ. ಇದಕ್ಕೆ ಅನುವು ಮಾಡಿಕೊಟ್ಟ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಸಾರಥಿಗಳಿಗೂ ಅದಕ್ಕಾಗಿ ಪ್ರಯತ್ನಿಸಿದ ಜಿಲ್ಲೆಯ ಸಮಸ್ತ ಮುಫತ್ತಿಶ್‌ಗಳಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.