ಪುತ್ತೂರ್ದ ಮುತ್ತು ಲಯನ್ಸ್ ಕ್ಲಬ್ ಮತ್ತು ಜಿಡೆಕಲ್ ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ ಕಾಲೇಜು ಆವರಣದಲ್ಲಿ ವನಮಹೋತ್ಸವ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರ್ದ ಮುತ್ತು ಲಯನ್ಸ್ ಕ್ಲಬ್ ಮತ್ತು ಜಿಡೆಕಲ್ ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ ಕಾಲೇಜು ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು.

 

ಲಯನ್ಸ್ ಕ್ಲಬ್ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್ ಮಾತನಾಡಿ ಕೊರೋನಾ ಕೋವಿಡ್ ಸಾಂಕ್ರಾಮಿಕ ಸನ್ನಿವೇಶದಲ್ಲಿ ಪಕೃತಿಯನ್ನು ಬೆಳೆಸುವ ಅನಿವಾರ್ಯತೆ ಅಗತ್ಯ ಅನುಭವಕ್ಕೆ ಬಂದಿದೆ. ಗಿಡ ಮರಗಳನ್ನು ಬೆಳೆಸಿ ಪ್ರಕೃತಿ ಉಳಿಸಿದರೆ ನಮಗೆ ಅತೀ ಅಗತ್ಯವಾದ ಆಮ್ಲಜನಕ ಹೇರಳವಾಗಿ ಸಿಗುತ್ತದೆ. ಅದರಂತೆ ಪಕೃತಿಯಲ್ಲಿ ನಡೆಯುವ ಹವಾಮಾನ ವೈಪರಿತ್ಯಗಳನ್ನು ಹತೋಟಿಗೆ ತರಬಹುದು. ಆದ್ದರಿಂದ ಗಿಡ ನೆಡುವ ಮತ್ತು ಬೆಳೆಸುವ ಕಾರ್ಯಕ್ರಮವು ನಿತ್ಯ ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಕೋಶಾಧಿಕಾರಿ ಕೇಶವ ಬೆದ್ರಳ, ವಿವಿಧ ಪದಾಧಿಕಾರಿಗಳಾದ ಜಗದೀಶ್ ಕಜೆ, ಬಶೀರ್ ಪರ್ಲಡ್ಕ, ನಾಗೇಶ್ ಆಚಾರ್ಯ, ಪಾಣಾಜೆ ಲಯನ್ಸ್ ಕ್ಲಬ್ ಕಾರ್ಯದರ್ಶಿ ಶ್ರೀಪ್ರಸಾದ್ ಪಾಣಾಜೆ, ಜಿಲ್ಲಾ ಕ್ಯಾಬಿನೆಟ್ ಸದಸ್ಯ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಕಾಲೇಜಿನ‌ ಪರಿಸರ ಸಂಘದ ವಿದ್ಯಾರ್ಥಿಗಳು, ಉಪ ಪ್ರಾಂಶುಪಾಲ ಪ್ರೋ. ಶಾಂತರಾಮ, ಪ್ರೊ.ಶೇಷಪ್ಪ, ಪ್ರೊ.ಪದ್ಮನಾಭ,ಪ್ರೊ.ಎಂಬ್ರೋಸ್ ಎಂ.ಸಿ,ಪ್ರೊ.ಸೀಮಾ,ಪ್ರೊ.ಹರೀಶ್ ನಾಯಕ್,ಪ್ರೊ.ಸುಜಾತ ಪಿ ಎಸ್, ಉಪನ್ಯಾಸಕರಾದ ಜ್ಯೋತಿ ಪಿ ರೈ, ಪ್ರಿಯಲತಾ, ಸುಧಾ,ಹರಿಣಾಕ್ಷಿ,ಮಾನಸ,ಕುಸುಮ ಉಪಸ್ಥಿತರಿದ್ದರು.

ಲಯನ್ಸ್ ಕ್ಲಬ್ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಬಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾಲೇಜು ಗ್ರಂಥಪಾಲಕ ರಾಮಚಂದ್ರ ರು ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.