ಕೋಡಿಂಬಾಡಿ ಗ್ರಾ.ಪಂನ ನಾಗರಿಕ ಸನ್ನದು ವಿಶೇಷ ಸಭೆಯಲ್ಲಿ ಗ್ರಾಮಸ್ಥರೇ ವಿರಳ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಕೋಡಿಂಬಾಡಿ ಗ್ರಾ.ಪಂನ ನನ್ನ ಪಂಚಾಯತ್ ನನ್ನ ಅಧಿಕಾರ. ನನ್ನಿಂದ ಜನರ ಸೇವೆ ಅಭಿಯಾನದ ಮೂಲಕ ನಾಗರಿಕ ಸನ್ನದು ವಿಶೇಷ ಗ್ರಾಮ ಸಭೆಯಲ್ಲಿ ಬೆರಳೆಣಿಕೆಯಷ್ಟೇ ಗ್ರಾಮಸ್ಥರು ಭಾಗವಹಿಸಿದ್ದು ಗ್ರಾಮಸ್ಥರಿಂದ ನೀರಸ ಪ್ರತಿಕ್ರೀಯೆ ವ್ಯವಕ್ತವಾಗಿದೆ.

ಸಭೆಯು ಜು.30ರಂದು ಅಧ್ಯಕ್ಷ ರಾಮಚಂದ್ರ ಪೂಜಾರಿ ಶಾಂತಿನಗರರವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು ಪ್ರಮುಖವಾಗಿದ್ದರೆ. ಬೆರೆಳೆಣಿಕೆಯಷ್ಟು ಮಾತ್ರ ಗ್ರಾಮಸ್ಥರು ಭಾಗವಹಿಸಿದ್ದರು. ಈ ಸಭೆಯಲ್ಲಿ ತಾಲೂಕು ಮಟ್ಟದ ಇಲಾಖಾಧಿಕಾರಿಗಳು ಭಾಗವಹಿಸಿ ಆಯಾ ಇಲಾಖೆಗಳಿಂದ ಗ್ರಾಮಸ್ಥರಿಗೆ ಮಾಹಿತಿ ನೀಡುವ ಮಹತ್ತರವಾದ ಉದ್ದೇಶವನ್ನಿಟ್ಟುಕೊಂಡಿದ್ದರೂ ಗ್ರಾಮಸ್ಥರಿಂದ ಪೂರಕವಾದ ಸ್ಪಂಧನೆ ದೊರೆತಿಲ್ಲ.

ಪ್ರಹಸನದ ಸಭೆ:
ನಾಗರಿಕ ಸನ್ನದ ಎಂಬ ವಿಶೇಷ ಸಭೆಯು ಪ್ರಹಸನದ ರೀತಿಯಲ್ಲಿ ನಡೆಯುತ್ತಿದೆ. ೨ ದಿನಗಳ ಹಿಂದೆಯಷ್ಟೇ ವಿಶೇಷ ಸಭೆ ನಡೆಸುವಂತೆ ಪಂಚಾಯತ್ ಕಚೇರಿಗೆ ಸುತ್ತೋಲೆ ಬಂದಿದೆ. ಸದಸ್ಯರಿಗೆ ಸಭೆಯ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಇಲ್ಲಿ ಸಭೆಗೆ ಭಾಗವಹಿಸಿರುವವರೆಲ್ಲಾ ಒಂದಲ್ಲ ಒಂದು ರೀತಿಯ ತೀರಾ ಅನಿವಾರ್ಯತೆಯಿಂದಾಗಿ ಭಾಗವಹಿಸಿದ್ದು ಇದೊಂದು ರೀತಿಯ ನಾಟಕವಾಗಿದೆ ಎಂದು ಸದಸ್ಯ ಜಗನ್ನಾಥ ಶೆಟ್ಟಿ ನಡುಮನೆ ಆರೋಪಿಸಿದರು.ಸದಸ್ಯ ಜಯಪ್ರಕಾಶ್ ಬದಿನಾರು ಮಾತನಾಡಿ, ಜನರಿಗೆ ತೋಟಗಾರಿಕಾ ಇಲಾಖೆ ಮಾಹಿತಿ ಬಹುಮುಖ್ಯವಾಗಿದ್ದು ಅವರೇ ಗೈರಾಗಿರುವುದಾಗಿ ಆರೋಪಿಸಿದರು.

ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷ ರಾಮಚಂದ್ರ ಪೂಜಾರಿ ಶಾಂತಿನಗರ ಮಾತನಾಡಿ, ಉತ್ತಮ ಉದ್ದೇಶವನ್ನಿಟ್ಟುಕೊಂಡು ಸರಕಾರ ಯೋಜನೆಯನ್ನು ರೂಪಿಸಿದೆ. ಅದನ್ನು ಪರಿಣಾಮಕಾರಿಯಾಗಿ ಅನುಷ್ಟಾನ ಮಾಡಬೇಕಾದ ಹೊಣೆ ನಮ್ಮ ಮೇಲಿದೆ ಎಂದರು.

ಶಿಕ್ಷಣ ಇಲಾಖೆ, ಆರೋಗ್ಯ, ಪಶು ಸಂಗೋಪನೆ, ಮೆಸ್ಕಾಂ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಇಲಾಖೆಯ ಮಾಹಿತಿಗಳನ್ನು ನೀಡಿದರು.

ಉಪಾಧ್ಯಕ್ಷೆ ಉಷಾ, ಸದಸ್ಯರಾದ ಮಲ್ಲಿಕಾ, ಗೀತಾ, ಜಯಪ್ರಕಾಶ್ ಬದಿನಾರು, ವಿಶ್ವನಾಥ, ರಾಮಣ್ಣ ಗೌಡ, ಪುಷ್ಪಾ ಹಾಗೂ ಮೋಹಿನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಓ ಚಿತ್ರಾವತಿ ಸ್ವಾಗತಿಸಿ, ಕಾರ್ಯದರ್ಶಿ ರಮೇಶ್ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.