ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲೆಯ ಪೋಷಕರ ಸಭೆ- ಆರೋಗ್ಯ ಮಾಹಿತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ; ಸರಕಾರಿ ಪ್ರೌಢಶಾಲೆ ಬೆಟ್ಟಂಪಾಡಿ ಇಲ್ಲಿಯ ಶಾಲಾ ಮಕ್ಕಳ ಪೋಷಕರ ಸಭೆ ಹಾಗೂ ಆರೋಗ್ಯ ಮಾಹಿತಿ ಕಾರ್ಯಕ್ರಮ ಶಾಲಾಭಿವೃದ್ದಿ ಸಮಿತಿಯ ಕಾರ್ಯಾಧ್ಯಕ್ಷ ಸುಂದರ ನಾಯಕ್ ಬಾಳೆಗುಳಿ ಇವರ ಅಧ್ಯಕ್ಷತೆಯಲ್ಲಿ ಜು.30 ರಂದು ನಡೆಯಿತು.
ಶಾಲಾ‌ ಮುಖ್ಯ ಗುರು ಶ್ಯಾಮಲಾ ಮಾತನಾಡಿ ಕೋವಿಡ್ ನಿಂದಾಗಿ ಶಾಲೆ ಆರಂಭವಾಗದ ಕಾರಣ ಡಿ.ಡಿ ಚಂದನದಲ್ಲಿ ನಡೆಯುತ್ತಿರುವ ವಿದ್ಯಾಗಮ ಸಂವೇದ ಮತ್ತು ಕಲಿಕಾ‌ ಬಂಧ ಕಾರ್ಯಕ್ರಮದಲ್ಲಿ ಪಾಠ ನಡೆಯುತ್ತಿದೆ.ಮಕ್ಕಳು ಪ್ರತಿ ದಿನದ ಪಾಠ ಮತ್ತು ಪ್ರಶ್ನೆಗೆ ಉತ್ತರ ಬರೆಯಲು ತಿಳಿಸಿದ್ದು ಪೋಷಕರು ಮಕ್ಕಳು ಬರೆಯುವುದನ್ನು ಗಮನಿಸಿ ಸಹಕಾರ ನೀಡಬೇಕು.ಶಾಲೆಯ ಶಿಕ್ಷಕರು ಅನ್ ಲೈನ್ ತರಗತಿ ಮಾಡುತ್ತಿದ್ದು ಕೆಲವು ಮಕ್ಕಳಲ್ಲಿ  ಹಗಲು ಹೊತ್ತು ಮೊಬೈಲ್ ಇಲ್ಲದಿರುವುದರಿಂದ ಸಂಜೆ 6 ಗಂಟೆಯಿಂದ ತರಗತಿ ಮಾಡುತ್ತಿದ್ದಾರೆ ಮೊಬೈಲ್ ಬಳಸುವಾಗ ಮಕ್ಕಳು ಪಾಠಕ್ಕೆ ಸಂಬಂದ ಪಡದ ಕಾರ್ಯಕ್ರಮ ನೋಡಲು ಅವಕಾಶ ನೀಡದೆ ಕಲಿಕೆಗೆ ಮಾತ್ರ ನೀಡಬೇಕು. ಇಲಾಖೆ ಅದೇಶ ನೀಡಿದರೆ ಕೋವಿಡ್ ನಿಯಮ ಪಾಲಿಸಿಕೊಂಡು ತರಗತಿ ಅರಂಬಿಸಲಾಗುವುದು. ಇದಕ್ಕೆ ಎಲ್ಲಾ ಪೋಷಕರು ಸಹಕರಿಸಲು ತಿಳಿಸಿದರು. ಅಲ್ಲದೆ ಶಾಲಾ ಪರಿಸರ ಸ್ವಚ್ಚತೆ ಮತ್ತು ಕೈತೋಟ ನಿರ್ಮಾಣ ಮಾಡಲು ಪೋಷಕರ ಸಹಕಾರ ಅಗತ್ಯ. ಅಲ್ಲದೆ ಶಾಲೆಯ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ಮನವಿ ಮಾಡಿದರು. ಕಂಪ್ಯೂಟರ್ ತರಗತಿಗಾಗಿ ಶಾಲೆಗೆ ಹತ್ತು ಕಂಪ್ಯೂಟರ್ ವ್ಯವಸ್ಥೆ ಮಾಡಲಾಗಿದೆ ಎಂದರು. ಎಸ್.ಡಿ.ಎಂ.ಸಿಯ ತೆರವಾದ ಮೂರು ಸ್ಥಾನಕ್ಕೆ ಸದಸ್ಯರನ್ನು ನೇಮಕ ಮಾಡಲಾಯಿತು.
ಆರೋಗ್ಯ ಮಾಹಿತಿ-ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಕುಸುಮಾವತಿ ಆರೋಗ್ಯದ ಬಗ್ಗೆ ಮಾಹಿತಿ ನೀಡಿ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಬರಬೇಕಾದರೆ ಪ್ರಾಣಾಯಾಮ, ಯೋಗ ಮುಂತಾದುವುಗಳನ್ನು ಮಾಡ ಬೇಕು. ನಮ್ಮ  ದೈಹಿಕ ಮಾನಸಿಕ ಆರೋಗ್ಯವನ್ನು ಹಾಳು ಮಾಡದೆ ಸ್ವಚ್ಚತೆ, ಹಿತ ಮಿತವಾದ ಆಹಾರ ಸೇವನೆ ಬಹಳ ಮುಖ್ಯ. ಕೋವಿಡ್ ಹರಡದಂತೆ ತಡೆಗಟ್ಟಲು ಮಾಸ್ಕ್ ಧರಿಸುವುದು ಇನ್ನು ಮುಂದೆ ಕಡ್ಡಾಯವಾಗಲಿದೆ ಎಂದು ಹಲವಾರು ಮಾಹಿತಿ ನೀಡಿದರು. ‌ವ್ಯಾಕ್ಸಿನೇಷನ್ ತೆಗೆದು ಕೊಳ್ಳಲು ಅಸಡ್ಡೆ ಮಾಡದೆ ಲಭ್ಯವಿರುವ ಸಂದರ್ಭದಲ್ಲಿ ಪ್ರತಿಯೊಬ್ಬರೂ ತೆಗೆದು ಕೊಂಡು ಕೊರೋನಾ ಮುಕ್ಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಸಹಕರಿಸ ಬೇಕು ಎಂದರು.
ಅನ್ ಲೈನ್ ತರಗತಿ ನಡೆಸುತ್ತಿರುವ ಬಗ್ಗೆ ಸಹಶಿಕ್ಷಕರು ಪೋಷಕರಿಗೆ ತಮ್ಮ ಮಾಹಿತಿ ನೀಡಿದರು.ಎಸ್.ಡಿ.ಎಂ.ಸಿಯ ಸದಸ್ಯ ಗಂಗಾಧರ ಸಿ.ಎಚ್ ಅನಿಸಿಕೆ ವ್ಯಕ್ತಪಡಿಸಿದರು.
ಎಸ್.ಡಿ.ಎಂ.ಸಿ ಸದಸ್ಯರಾದ ಶಾಲಿನಿ.ಕೆ, ಗೀತಾ, ಮಾಲತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕಿ ಚಂದ್ರಕಲಾ ಸ್ವಾಗತಿಸಿ, ಸಹಶಿಕ್ಷಕಿ ಮರೀನಾ ವೇಗಸ್ ವಂದಿಸಿದರು.ಸಹಶಿಕ್ಷಕಿ ಉಮಾ ಕಾರ್ಯಕ್ರಮ ನಿರೂಪಿಸಿದರು.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.