ದರ್ಬೆತ್ತಡ್ಕ: ಅಕ್ರಮ ಕಟ್ಟಡ ತೆರವು ಪ್ರಕರಣ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಯಾವುದೇ ಕಾರಣಕ್ಕೂ ಶಾಲೆಯ ಜಾಗದಲ್ಲಿ ಮನೆ ಕಟ್ಟಲು ಯಾರನ್ನೂ ಬಿಡುವುದಿಲ್ಲ: ಪೋಷಕರ ಎಚ್ಚರಿಕೆ

ಪುತ್ತೂರು: ಒಳಮೊಗ್ರು ಗ್ರಾಮದ ದರ್ಬೆತ್ತಡ್ಕ ಸರಕಾರಿ ಹಿ ಪ್ರಾ ಶಾಲೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದೆ ಎನ್ನಲಾದ ಮನೆಯನ್ನು ಕಂದಾಯ ಅಧಿಕಾರಿಗಳು ತೆರವು ಮಾಡಿರುವ ವಿಚಾರಕ್ಕೆ ಸಂಬಂಧಿಸಿದ ಗೊಂದಲದ ಕುರಿತು ಹೇಳಿಕೆ ನೀಡಿರುವ ಶಾಲಾ ಪೋಷಕರು ಯಾವುದೇ ಕಾರಣಕ್ಕೂ ಶಾಲೆಯ ಜಾಗದಲ್ಲಿ ಮನೆ ಕಟ್ಟಲು ಯಾರಿಗೂ ಅವಕಾಶ ನೀಡುವುದಿಲ್ಲ , ಅದರಲ್ಲಿ ಏನೇ ಆದರೂ ಅದನ್ನು ಎದುರಿಸಲು ನಾವು ಸನ್ನದ್ದರಾಗಿದ್ದೇವೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

ಜು.೩೦ ರಂದು ಶುಕ್ರವಾರ ಮನೆ ತೆರವು ಮಾಡಿರುವ ಜಾಗಕ್ಕೆ ಭೇಟಿ ನೀಡುವುದಾಗಿ ಪುತ್ತೂರು ಸಹಾಯಕ ಕಮಿಷನರ್ ಯತೀಶ್ ಉಳ್ಳಾಲ್ ತಿಳಿಸಿದ್ದರು. ಎ ಸಿ ಅವರು ಬರಲಿದ್ದು ಅವರನ್ನು ಭೇಟಿಯಾಗಿ ಈ ವಿಚಾರದಲ್ಲಿ ಮಾತನಡಲು ಶಾಲಾ ಎಸ್‌ಡಿಎಂಸಿ ಸಮಿತಿಯವರು ಮತ್ತು ಪೋಷಕರು ಶಾಲೆಯ ಬಳಿ ಸೇರಿದ್ದರು. ಸಹಾಯಕ ಕಮಿಷನರ್ ಭೇಟಿ ರದ್ದಾಗಿತ್ತು.

ಶರಣು ಕರೆಯಲು ಶೆಡ್ ನಿರ್ಮಿಸಿದ್ದರು: ಕೊರಗಪ್ಪ ನಾಯ್ಕ
ಶಾಲೆಯ ಬಳಿ ಇರುವ ಒಳಮೊಗ್ರು ಗ್ರಾಪಂಗೆ ಸೇರಿದ ಕಟ್ಟಡದಲ್ಲಿ ರಘುನಾಥ್ ರವರು ಕಳೆದ ಕೆಲವು ವರ್ಷಗಳಿಂದ ಅಂಗಡಿ ವ್ಯಾಪಾರ ಮಾಡುತ್ತಿದ್ದರು. ಕಟ್ಟಡದ ಹಿಂಭಾಗದ ಶಾಲೆಗೆ ಸೇರಿದ ಜಾಗದಲ್ಲಿ ಅಯ್ಯಪ್ಪ ವೃತದಾರಿಯಾಗಿದ್ದ ವೇಳೆ ಶರಣು ಕರೆಯಲು ಶೆಡ್ ನಿರ್ಮಾಣ ಮಾಡಿದ್ದರು. ಟರ್ಪಾಲ್ ಶೆಡ್ ನಿರ್ಮಾಣ ಮಾಡಿದ್ದು ಹಾಗಯೇ ಇತ್ತು. ಅದನ್ನು ತೆರವು ಮಾಡಬೇಕೆಂದು ನಾವು ಹೇಳಿದ್ದೆವು. ಬಳಿಕ ಅದನ್ನು ಕಳೆದ ೫ ತಿಂಗಳ ಹಿಂದೆ ಅಕ್ರಮವಾಗಿ ಗೋಡೆ ನಿರ್ಮಾಣ ಮಾಡಿ ಅದನ್ನು ಮನೆ ಮಾಡಲು ಮುಂದಾದಾಗ ಕಂದಾಯ ಇಲಾಖೆಗೆ ದೂರು ನೀಡಿದ್ದೆವು. ಶಾಲೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ್ದನ್ನು ಕಂದಾಯ ಅಇಕಾರಿಗಳು ನಮ್ಮ ಸಮಕ್ಷಮ ತೆರವು ಮಾಡಿದ್ದಾರೆ. ಸುಮಾರು ೩೫ ವರ್ಷಗಳ ಹಿಂದೆಯೇ ಆ ಜಾಗ ಶಾಲೆಗೆ ಮಂಜೂರಾಗಿದೆ. ನಾವು ಶಾಲೆಯ ಜಾಗವನ್ನು ಅಕ್ರಮಣ ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಕೊರಗಪ್ಪ ನಾಯ್ಕ ತಿಳಿಸಿದ್ದಾರೆ.

ಶಾಲಾ ವಠಾರ ಗಲೀಜು ಮಾಡುತ್ತಿದ್ದರು: ಚೈತ್ರಾ
ಶಾಲೆಯ ಬಳಿಯಲ್ಲೇ ಇವರು ವಾಸ್ತವ್ಯ ಮಾಡಿರುವ ಕಾರಣ ಶಾಲಾ ವಠಾರವನ್ನು ಗಲೀಜು ಮಾಡುತ್ತಿದ್ದರು. ಶೆಡ್ ಬಳಿ ಶೌಚಾಲಯ ಇಲ್ಲದ ಕಾರಣ ಶಾಲೆಯ ಶೌಚಾಲಯಕ್ಕೆ ಬಂದು ಅಲ್ಲಿಯೂ ಗಲೀಜು ಮಾಡುತ್ತಿದ್ದರು. ಅದನ್ನು ಮಾರನೇ ದಿನ ವಿದ್ಯಾರ್ಥಿಗಳು ಶುಚಿ ಮಾಡುತ್ತಿದ್ದರು. ಪುಟ್ಟ ಮಕ್ಕಳ ಎದುರಲ್ಲೇ ಅವ್ಯಾಚ ಶಬ್ದಗಳನ್ನು ಬಳಸಿ ಜಗಳ ಮಾಡುತ್ತಿದ್ದರು.ಇದು ಸಣ್ಣ ಮಕ್ಕಳ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತದೆ ಎಂದು ನಾವು ಸಂಬಂಧಿಸಿದವರಿಗೆ ದೂರನ್ನು ನೀಡಿದ್ದೆವು. ಶಾಲಾ ಜಾಗದಲ್ಲಿ ಅಕ್ರಮವಾಗಿ ಇದ್ದುಕೊಂಡು ಶಾಲೆಗೆ ತೊಂದರೆ ಕೊಡುತ್ತಿದ್ದರು. ನಮ್ಮ ಶಾಲೆಯ ಜಾಗ ಇದು ಸಾರ್ವಜನಿಕ ಸೊತ್ತಾಗಿದೆ, ಮುಂದಿನ ತಲೆಮಾರಿನ ತನಕವೂ ಅದು ಮುಂದುವರೆಯಲಿದೆ. ಶಾಲೆಯ ಜಾಗಕ್ಕಾಗಿ ನಾವು ಯಾವುದೇ ತ್ಯಾಗಕ್ಕೂ ಸಿದ್ದ ಎಂದು ಶಾಲಾ ಹಳೆ ವಿದ್ಯಾರ್ಥಿನಿ ಚೈತ್ರಾಹೇಳಿದರು.

ಆತ್ಮಹತ್ಯೆ ಯತ್ನ ಶುದ್ದ ಸುಳ್ಳು: ಬಾಬು
ಶಾಲಾ ಎಸ್‌ಡಿಎಂಸಿ ಸದಸ್ಯ ಬಾಬು ಮಾತನಾಡಿ ಮನೆಯನ್ನು ತೆರವು ಮಾಡಿದ್ದಕ್ಕೆ ರಘುನಾಥ್ ರವರು ಆತ್ಮಹತ್ಯೆ ಯತ್ನ ಮಾಡಿದ್ದಾರೆ ಎಂಬುದು ಶುದ್ದ ಸುಳ್ಳು. ಸುಳ್ಳು ಹೇಳಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಕ್ರಮ ಕಟ್ಟಡ ದ್ವಂಸ ಮಾಡುವಾಗ ನಾನು ಸ್ಥಳದಲ್ಲೇ ಇದ್ದೆ. ಯಾವುದೇ ದಾಖಲೆಗಳು ಮಣ್ಣಿನಡಿಗೆ ಹಾಕಲಿಲ್ಲ. ಅಲ್ಲಿದ್ದ ಪಾತ್ರೆಗಳನ್ನು, ಹಾಳಾದ ಟಿ ವಿಯನ್ನು ಬದಿಗೆ ಇಟ್ಟಿದ್ದೇವೆ. ದಾಖಲೆಗಳು ಮಣ್ಣು ಪಾಲಾಗಿದೆ ಎಂಬುದು ಸತ್ಯಕ್ಕೆ ದೂರವಾದ ವಿಚಾರವಾಗಿದೆ. ಶಾಲೆಯ ಜಾಗದಲ್ಲಿ ನಾವು ಯಾರನ್ನೂ ಮನೆ ಕಟ್ಟಲು ಬಿಡುವುದೇ ಇಲ್ಲ. ಅವರಿಗೆ ಜಾಗ ಕೊಟ್ಟಿದ್ದೇ ಆದಲ್ಲಿ ಇಲ್ಲಿರುವ ೨೫ ದಲಿತ ಕುಟುಂಬಗಳು ಬಂದು ಅದೇ ಜಾಗದಲ್ಲಿ ಮನೆ ಕಟ್ಟುತ್ತೇವೆ. ಸರಕಾರಿ ಶಾಲೆ ಉಳಿಯಬೇಕು ಎಂಬುದು ನಮ್ಮ ಉದ್ದೇಶ. ಇದಕ್ಕಾಗಿ ಯವುದೇ ಬೆಲೆ ತೆರಳು ಸಿದ್ದವಾಗಿದ್ದೇವೆ. ಮನೆ ತೆರವು ಮಾಡುವಾಗ ದಾಖಲೆಗಳನ್ನು ಹಾಳು ಮಾಡಿದ್ದಾರೆ ಎಂದು ಸುಳ್ಳು ಹೇಳಿಕೆ ನೀಡಿ ಹಲವರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಮಾಡಿದ್ದಾರೆ. ಇದು ನಮ್ಮ ಶಾಲೆ, ನಮ್ಮ ಶಾಲೆ ಮತ್ತು ಅದಕ್ಕೆ ಸೇರಿದ ಜಾಗವನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದು ನಮಗೆ ಗೊತ್ತಿದೆ, ಈ ವಿಚಾರದಲ್ಲಿ ನಾವೆಲ್ಲಾ ಒಗ್ಗಟ್ಟಾಗಿದ್ದೇವೆ. ರಘುನಾಥ್ ಅವರಿಗೆ ೩ ಎಕ್ರೆಗಿಂತಲೂ ಮಿಕ್ಕಿ ಸ್ವಂತ ಜಾಗವಿದೆ, ಜಯಂತಿಯವರಿಗೂ ಜಾಗ ಇದೆ. ಜಾಗ ಇದ್ದರೂ ಶಾಲೆಯ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡಿದ್ದು ತಪ್ಪು ಅವರನ್ನು ಯಾರೋ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

ಶಾಲೆಯ ಜಾಗಕ್ಕೆ ಬೇಲಿ ಹಾಕಿದ್ದೇವೆ: ಬಾಲಕೃಷ್ಣ ರೈ
ಶಾಲೆಗೆ ಸೇರಿದೆ ಎನ್ನಲಾದ ಜಾಗಕ್ಕೆ ನಾವು ಬೇಲಿ ಹಾಕಿ ಬಂದ್ ಮಾಡಿದ್ದೇವೆ. ಯಾರೂ ಶಾಲೆಯ ಜಾಗಕ್ಕೆ ಅಕ್ರಮವಾಗಿ ಪ್ರವೇಶಗೈಯದಂತೆ ತಡೆ ಬೇಲಿ ನಿರ್ಮಾಣ ಮಾಡಿದ್ದೇವೆ. ಶರಣು ಕರೆಯಲು ಮಾನವೀಯ ನೆಲೆಯಲ್ಲಿ ಅಂದು ಶಾಲೆಯ ಮುಖ್ಯ ಶಿಕ್ಷಕರು ತಾತ್ಕಾಲಿಕ ಅವಕಾಶ ಮಾಡಿಕೊಟ್ಟದ್ದೇ ತಪ್ಪು ಎಂಬಂತೆ ರಘುನಾಥ್ ವರ್ತಿಸಿದ್ದಾರೆ. ಶಾಲೆಯ ಜಾಗ ಶಾಲೆಯದ್ದೇ ಅದು ಇಲ್ಲಿ ಶಾಲೆ ಇರುವ ತನಕ ಶಾಲೆಗೆ ಮಾತ್ರ ಬಳಕೆಯಾಗಲಿದೆ. ಯಾರೂ ಅಕ್ರಮವಾಗಿ ಪ್ರವೇಶಿಸದಂತೆ ನಾವೇ ನೋಡಿಕೊಳ್ಳಲಿದ್ದೇವೆ ಎಂದು ಶಾಲೆಯ ಹಿರಿಯ ವಿದ್ಯಾರ್ಥಿ ಬಾಲಕೃಷ್ಣ ರೈ ಹೇಳಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.