ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಮಾಸಿಕ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಅರ್ಹ ಸದಸ್ಯರಿಗೆ ಗೃಹ ನಿರ್ಮಾಣ ಸಾಲ ನೀಡಲು ತೀರ್ಮಾನ

ಪುತ್ತೂರು : ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಮಾಸಿಕ ಸಭೆಯು ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್‌ರವರ ಅಧ್ಯಕ್ಷತೆಯಲ್ಲಿ ಬೊಳುವಾರಿನಲ್ಲಿರುವ ಸಂಘದ ಕಛೇರಿಯಲ್ಲಿ ನಡೆಯಿತು. ಅರ್ಹ ಸದಸ್ಯರಿಗೆ ಗೃಹ ನಿರ್ಮಾಣ ಸಾಲ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಬನ್ನೂರು ರೈತರ ಸಂಘದ ಕೃಷ್ಣನಗರ ಶಾಖೆಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸುವ ಬಗ್ಗೆ ಚರ್ಚಿಸಿ ಶೀರ್ಘದಲ್ಲಿ ವಾಣಿಜ್ಯ ಸಂಕೀರ್ಣದ ಕೆಲಸ ಕಾರ್‍ಯಗಳು ನಡೆಸಲು ತೀರ್ಮಾನಿಸಿ ಈ ಬಗ್ಗೆ ಮಹಾಸಭೆಯಲ್ಲಿ ಸದಸ್ಯರ ಒಪ್ಪಿಗೆ ಪಡೆದು ಮುಂದುವರೆಸುವುದಾಗಿ ತೀರ್ಮಾನ ಕೈಗೊಳ್ಳಲಾಯಿತು.

 

 

ಕಚೇರಿ ಸಮಯ ಬದಲಾವಣೆ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1.30 ಮತ್ತು ಮಧ್ಯಾಹ್ನ 2.00ರಿಂದ ಸಂಜೆ 4.00ಗಂಟೆಯ ವರೆಗೆ ವ್ಯವಹಾರ ನಡೆಸಲಾಗುವುದು. ಆಫೀಸ್ ಸಮಯ 5ರ ವರೆಗೆ ನಿಗದಿಪಡಿಸಲಾಯಿತು. ಸಭೆಯಲ್ಲಿ ಪ್ರಗತಿಯ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷ ರಾಜಶೇಖರ್ ಜೈನ್, ನಿರ್ದೇಶಕ ಸುಭಾಷ್ ನಾಯಕ್, ದೇವಾನಂದ ಕೆ., ಮೋಹನ್ ಪಕ್ಕಳ, ಸುಂದರ ಪೂಜಾರಿ ಬಡಾವು, ಸ್ಮಿತಾ ಜೆ. ಭಂಡಾರಿ, ಮಹಮ್ಮದ್ ಅಶ್ರಫ್ ಕಲ್ಲೇಗ, ರಾಜು, ಶ್ರೀನಿವಾಸ ನಾಯ್ಕ, ಸುಬ್ರಹ್ಮಣ್ಯ ಗೌಡ ಹನಿಯೂರು, ಜಯಲಕ್ಷ್ಮಿ ಸುರೇಶ್ ಉಪಸ್ಥಿತರಿದ್ದರು. ಸಂಘದ ಆಡಳಿತಾಧಿಕಾರಿ ಗೋಪಾಲಕೃಷ್ಣ ಭಟ್ ಸ್ವಾಗತಿಸಿ, ವ್ಯವಸ್ಥಾಪಕಿ ರಾಧಾ ಬಿ. ರೈ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.