HomePage_Banner
HomePage_Banner
HomePage_Banner
HomePage_Banner

ಮೆಸ್ಕಾಂಗೆ ಉಪ್ಪಿನಂಗಡಿ ಗ್ರಾ.ಪಂ.ನಿಂದ ಕೋಟಿಗೂ ಅಧಿಕ ವಿದ್ಯುತ್ ಬಿಲ್ ಬಾಕಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಶುಕ್ರವಾರ ರಾತ್ರಿ ಅರ್ಧ ಕತ್ತಲೆ ಭಾಗ್ಯ; ಉಳಿದೆಡೆ ಬೆಳಕಿನ ಭಾಗ್ಯ

ಉಪ್ಪಿನಂಗಡಿ: ಇಲ್ಲಿನ ಗ್ರಾ.ಪಂ. ವ್ಯಾಪ್ತಿಯಲ್ಲಿ ಮೆಸ್ಕಾಂಗೆ ಪಾವತಿಸಲು ಬಾಕಿಯಿರುವ ಒಂದು ಕೋಟಿಗೂ ಮಿಗಿಲಾದ ವಿದ್ಯುತ್ ಬಿಲ್‌ನಲ್ಲಿ ಸ್ವಲ್ಪ ಭಾಗ ನೀಡುವುದಾಗಿ ಉಪ್ಪಿನಂಗಡಿ ಗ್ರಾ.ಪಂ. ಭರವಸೆ ನೀಡಿದ್ದರಿಂದ ಕಡಿತಗೊಳಿಸಿರುವ ದಾರಿ ದೀಪದ ವಿದ್ಯುತ್ ಸಂಪರ್ಕವನ್ನು ಮರು ಕಲ್ಪಿಸಲು ಮೆಸ್ಕಾಂ ಇಲಾಖೆ ಮುಂದಾಗಿದ್ದು, ಇದರಿಂದ ಶುಕ್ರವಾರ ರಾತ್ರಿ ಉಪ್ಪಿನಂಗಡಿ ಪೇಟೆಯಲ್ಲಿ ದಾರಿ ದೀಪಗಳು ಉರಿಯುವಂತಾಗಿದೆ.

ವರ್ಷಕ್ಕೆ ಸುಮಾರು ಒಂದರಿಂದ ಎರಡು ಕೋಟಿಯಷ್ಟು ಆದಾಯವಿರುವ ಉಪ್ಪಿನಂಗಡಿ ಗ್ರಾ.ಪಂ. ದಾರಿ ದೀಪದ ವಿದ್ಯುತ್ ಬಿಲ್‌ನ ಹಣವನ್ನು ಕಟ್ಟದೆ ಮೆಸ್ಕಾಂಗೆ ಬಾಕಿ ಉಳಿಸಿಕೊಂಡಿತು. ಇದಕ್ಕೆ ಬಡ್ಡಿಯೆಲ್ಲಾ ಕೂಡಿ ಸುಮಾರು ಒಂದು ಕೋಟಿಯ ಹದಿನೆಂಟು ಲಕ್ಷದ ಎಂಬತ್ತನಾಲ್ಕು ಸಾವಿರದ ಒಂಬೈನೂರ ಆರು ರೂಪಾಯಿ (1,18,84,906) ಆಗಿತ್ತು. ಇದನ್ನು ಪಾವತಿ ಮಾಡಲು ಮೆಸ್ಕಾಂ ಗ್ರಾ.ಪಂ.ಗೆ ಹಲವು ಬಾರಿ ಮನವಿ ಮಾಡಿದರೂ ಸರಿಯಾದ ಸ್ಪಂದನೆ ಗ್ರಾ.ಪಂ. ಕಡೆಯಿಂದ ದೊರೆತಿರಲಿಲ್ಲ. ಈ ಹಿನ್ನೆಲೆಯಲ್ಲಿ ಮೆಸ್ಕಾಂ ಇಲಾಖೆ ಉಪ್ಪಿನಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು ಮೂವತ್ತು ಲಕ್ಷದಷ್ಟು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ದಾರಿ ದೀಪಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿತ್ತು. ಇದರಿಂದಾಗಿ ಗುರುವಾರ ರಾತ್ರಿ ಉಪ್ಪಿನಂಗಡಿ ಪೇಟೆ, ಹಿರ್ತಡ್ಕ, ಪೆರಿಯಡ್ಕ ಸೇರಿದಂತೆ ಕೆಲವಡೆ ದಾರಿ ದೀಪಗಳಿಲ್ಲದೆ, ಆ ಪ್ರದೇಶಕ್ಕೆ ಕತ್ತಲ ಭಾಗ್ಯ ಲಭ್ಯವಾಗಿತ್ತು. ಶುಕ್ರವಾರ ಪುತ್ತೂರು ಮೆಸ್ಕಾಂ ಇಲಾಖೆಗೆ ತೆರಳಿದ ಗ್ರಾ.ಪಂ.ನವರು ಆಗಸ್ಟ್ ತಿಂಗಳೊಳಗೆ ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಬಿಲ್‌ನಲ್ಲಿ ಸ್ವಲ್ಪ ಭಾಗವನ್ನು ಪಾವತಿ ಮಾಡುತ್ತೇವೆಂದು ಭರವಸೆ ನೀಡಿದ್ದು, ಕಡಿತಗೊಳಿಸಿದ ದಾರಿದೀಪಗಳ ವಿದ್ಯುತ್ ಸಂಪರ್ಕವನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಮರು ಕಲ್ಪಿಸಲು ಮೆಸ್ಕಾಂ ಇಲಾಖೆ ಸಿಬ್ಬಂದಿಗಳಿಗೆ ಸೂಚಿಸಿದೆ. ಉಪ್ಪಿನಂಗಡಿ ಪೇಟೆಯಲ್ಲಿ ಕಡಿತಗೊಳಿಸಲಾಗಿದ್ದ ದಾರಿ ದೀಪಗಳ ಫ್ಯೂಸ್ ಅನ್ನು ಜೋಡಿಸಲಾಗಿದೆ. ಇನ್ನುಳಿದ ಗ್ರಾಮಾಂತರ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ಫ್ಯೂಸ್ ಅನ್ನು ಜೋಡಿಸಲಾಗುವುದು ಎಂದು ಮೆಸ್ಕಾಂ ಇಲಾಖೆ ತಿಳಿಸಿದೆ.

ಬಾಕಿ ಇರುವ ವಿದ್ಯುತ್ ಬಿಲ್‌ನಲ್ಲಿ ಆಗಸ್ಟ್ ತಿಂಗಳ ಅಂತ್ಯದೊಳಗೆ 30 ಲಕ್ಷ ರೂ. ಹಣವನ್ನು ಪಾವತಿಸಬೇಕೆಂದು ಉಪ್ಪಿನಂಗಡಿ ಗ್ರಾ.ಪಂ.ಗೆ ಸೂಚಿಸಲಾಗಿದೆ. ಆದರೆ ಅವರು ೧೫ ಲಕ್ಷದಷ್ಟು ಪಾವತಿ ಮಾಡುವುದಾಗಿ ತಿಳಿಸಿದ್ದಾರೆ. ಅದಕ್ಕೆ ನಾವು ಒಪ್ಪಿಲ್ಲ. 30 ಲಕ್ಷ ಪಾವತಿಸಲೇಬೇಕು ಎಂದು ನಾವು ಅವರಿಗೆ ಹೇಳಿದ್ದು, ಆಗಸ್ಟ್ ತಿಂಗಳ ಗಡುವು ನೀಡಲಾಗಿದೆ. ಈಗ ಕಡಿತಗೊಳಿಸಿರುವ ಸ್‌ಗಳನ್ನು ಜೋಡಿಸಲು ಸಿಬ್ಬಂದಿಗೆ ಸೂಚಿಸಿದ್ದು, ಉಪ್ಪಿನಂಗಡಿ ಪೇಟೆಯಲ್ಲಿ ಶುಕ್ರವಾರ ಫ್ಯೂಸ್ ಜೋಡಿಸಿಯಾಗಿದೆ. ಇನ್ನು ಪೆರಿಯಡ್ಕ, ಹಿರ್ತಡ್ಕ ಸೇರಿದಂತೆ ಕೆಲವು ಕಡೆಗಳಲ್ಲಿ ಶನಿವಾರ ಫ್ಯೂಸ್ ಜೋಡಿಸಲಾಗುವುದು.

– ಶಿಲ್ಪಾ ಶೆಟ್ಟಿ ಎಇಇ, ಮೆಸ್ಕಾಂ, ಪುತ್ತೂರು ಉಪವಿಭಾಗ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.