HomePage_Banner
HomePage_Banner
HomePage_Banner
HomePage_Banner

ನಿವೃತ್ತ ಸೇನಾ ಸಿಬ್ಬಂದಿಯ ಕಲ್ಲೇಟಿಗೆ ದೃಷ್ಟಿ ಕಳೆದು ಕೊಂಡ ಮಹಿಳೆಯ ದೂರು ದಾಖಲು : ಆರೋಪಿ ಬಂಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ : ನಿವೃತ್ತ ಸೇನಾ ಉದ್ಯೋಗಿಯೋರ್ವರಿಂದ ಕಲ್ಲೇಟಿಗೆ ತುತ್ತಾಗಿ ಕಣ್ಣಿನ ದೃಷ್ಟಿ ಕಳೆದುಕೊಂಡ ಮಹಿಳೆಯ ದೂರಿಗೆ ಕೊನೆಗೂ ಪೊಲೀಸ್ ಇಲಾಖೆಯಿಂದ ಸ್ಪಂದನೆ ದೊರಕಿದ್ದು, ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಶುಕ್ರವಾರದಂದು ಆರೋಪಿ ಜಯಕುಮಾರ್ ಪೂಜಾರಿ ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಶಬರಿಗಿರಿ ಮನೆ ನಿವಾಸಿ ಶಶಿ ಕುಮಾರ್ ಪಿಳ್ಳೆ ಎಂಬವರ ಪತ್ನಿ ಆಶಾ ಎಂಬಾಕೆಯ ಮೇಲೆ ಕಳೆದ ಎಪ್ರಿಲ್ ೧೫ ರಂದು ಆರೋಪಿಯು ಕಲ್ಲೆಸೆದು ಕಣ್ಣಿಗೆ ಗಾಯವನ್ನುಂಟು ಮಾಡಿದ್ದರೆಂದೂ, ಹಾಗೂ ಅವ್ಯಾಚ ಪದಗಳಿಂದ ನಿಂದಿಸಿ ಜೀವ ಬೆದರಿಕೆಯೊಡ್ಡಿದ್ದರೆಂದೂ ಆಶಾ ಪುತ್ತೂರು ಡಿವೈಎಸ್ಪಿ ಯವರಿಗೆ ನೀಡಿದ ದೂರಿನಲ್ಲಿ ಆಪಾದಿಸಿದ್ದರು. ಹಾಗು ಘಟನೆಗೆ ಸಂಬಂಧಿಸಿ ವಿಡಿಯೋ ದೃಶ್ಯಾವಳಿಯನ್ನೂ ಒದಗಿಸಿದ್ದರು. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಡಿವೈಎಸ್ಪಿಯವರು ಉಪ್ಪಿನಂಗಡಿ ಪೊಲೀಸರಿಗೆ ನಿರ್ದೇಶನ ನೀಡಿದ್ದ ಹಿನ್ನೆಲೆಯಲ್ಲಿ ಆರೋಪಿ ಜಯ ಕುಮಾರ್ ಪೂಜಾರಿಯವರನ್ನು ಬಂಧಿಸಿ ಅಪರಾಧ ಕಲಂ ೪೪೭, ೩೨೪, ೫೦೪, ೫೦೬ ಅನ್ವಯ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಡಿವೈಎಸ್ಪಿಗೆ ದೂರು ನೀಡಿದಕ್ಕೆ ಎಸೈ ಬೈಯುವುದೇಕೆ ? : ಘಟನೆಗೆ ಸಂಬಂಧಿಸಿ ದೂರುದಾರ ಆಶಾರವರನ್ನು ಮಾಧ್ಯಮ ಪ್ರತಿನಿಧಿಗಳು ಸಂಪರ್ಕಿಸಿದಾಗ , ಡಿವೈಎಸ್ಪಿಯವರಿಗೆ ನೀಡಿದ ದೂರಿನ ಸ್ವೀಕೃತಿ ಪ್ರತಿಯನ್ನು ಎಸೈಯವರು ಪಡೆದುಕೊಂಡು , ಪ್ರಕರಣವನ್ನು ಡಿವೈಎಸ್ಪಿಯವರ ಗಮನಕ್ಕೆ ಕೊಂಡೊಯ್ದದ್ದೇಕೆ ? ಎಂದು ತರಾಟೆಗೆ ತೆಗೆದುಕೊಂಡರು. ಪ್ರಕರಣಕ್ಕೆ ಸಂಬಂಧಿಸಿ ನಾನು ಆಸ್ಪತ್ರೆಗೆ ದಾಖಲಾದ ಕಾರಣ ನನ್ನ ಗಂಡ ಅಂದೇ ಪೊಲೀಸ್ ಠಾಣೆಗೆ ದೂರು ನೀಡಲು ಬಂದಾಗ ದೂರು ಸ್ವೀಕರಿಸಲಿಲ್ಲ, ಚಿಕಿತ್ಸೆ ಪಡೆದು ಬಂದ ಬಳಿಕ ನಾನು ಬಂದು ದೂರು ನೀಡಿದರೂ ದೂರು ಪತ್ರ ಸ್ವೀಕರಿಸಿ ಸ್ವೀಕೃತಿಯನ್ನು ನೀಡದೆ ಕಳುಹಿಸಿದ್ದರೆಂದು ತಿಳಿಸಿದಾಗ, ನನಗೆ ಹನ್ನೊಂದು ಗ್ರಾಮಗಳ ಹೊಣೆ ಇದೆ. ನಿಮ್ಮೊಬ್ಬರ ಬಗ್ಗೆಯೇ ಗಮನಹರಿಸಲಾಗುವುದೇ ಎಂದು ಬೈದರೆಂದೂ ನೋವು ವ್ಯಕ್ತಪಡಿಸಿದರಲ್ಲದೆ ನ್ಯಾಯ ಬಯಸಿ ನಾನು ಡಿವೈಎಸ್ಪಿಗೆ ದೂರು ನೀಡಿರುವುದು ಅಪರಾಧವೇ ? ಅವರು ಯಾಕೆ ನಮಗೆ ಆ ರೀತಿ ಬೈಯುವುದು ? ಎಂದು ಪ್ರಶ್ನಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.