HomePage_Banner
HomePage_Banner
HomePage_Banner
HomePage_Banner

ಉಪ್ಪಿನಂಗಡಿ ರೋಟರಿ ಕ್ಲಬ್ ಪದಗ್ರಹಣ ಸಮಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಸಮಾಜ ಸೇವೆಯ ಕನಸು ಕಟ್ಟಿಕೊಂಡವರಿಗೆ ರೋಟರಿಯಲ್ಲಿ ಒಳ್ಳೆಯ ಅವಕಾಶ-ಡಾ. ಭಾಸ್ಕರ್ ಎಸ್
  • ಹಿರಿಯ ವೈದ್ಯ ಕೆ.ಜಿ. ಭಟ್‌ರಿಗೆ ಸನ್ಮಾನ
  • ವೃದ್ಧಾಶ್ರಮ ನಡೆಸುತ್ತಿರುವ ಹೊನ್ನಯ್ಯ ಕಾಟಿಪಳ್ಳ ಇವರಿಗೆ ದೇಣಿಗೆ
  • 2 ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ಉಪ್ಪಿನಂಗಡಿ: ಸಮಾಜಕ್ಕೆ ಏನಾದರೂ ಸೇವೆ ಮಾಡಬೇಕು ಎಂಬ ಉದ್ದೇಶ, ಕನಸು ಕಟ್ಟಿಕೊಂಡವರಿಗೆ ರೋಟರಿ ಸಂಸ್ಥೆಯಲ್ಲಿ ಒಳ್ಳೆಯ ಅವಕಾಶಗಳಿವೆ, ಆ ಮೂಲಕ ಸಮಾಜಕ್ಕಾಗಿ ನಾನು ಏನು ಮಾಡಬಹುದು ಎಂಬ ಕಲ್ಪನೆಗಳು, ಯೋಚನೆ, ಯೋಜನೆಗಳನ್ನು ರೂಪಿಸಬಹುದಾಗಿದೆ ಎಂದು ರೋಟರಿ ಜಿಲ್ಲಾ ಕೌನ್ಸಿಲರ್ ಭಾಸ್ಕರ್ ಎಸ್. ಹೇಳಿದರು.

ಅವರು ಜುಲೈ.30ರಂದು ಉಪ್ಪಿನಂಗಡಿಯಲ್ಲಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಉಪ್ಪಿನಂಗಡಿ ರೋಟರಿ ಕ್ಲಬ್‌ನ ೨೦೨೧-೨೨ನೇ ಸಾಲಿನ ನೂತನ ಅಧ್ಯಕ್ಷ ನೀರಜ್ ಕುಮಾರ್ ಎ. ಮತ್ತು ತಂಡಕ್ಕೆ ಪದಪ್ರಧಾನ ಮಾಡಿ ಮಾತನಾಡಿದರು.

ಬಹಳಷ್ಟು ಮಂದಿಯ ಮನಸ್ಸಿನಲ್ಲಿ ರೋಟರಿ ಸಂಸ್ಥೆ ಮೋಜಿ ಮಸ್ತಿಗಾಗಿ ಇರುವ ಸಂಸ್ಥೆ ಎಂಬ ತಪ್ಪು ಕಲ್ಪನೆಗಳಿವೆ. ರೋಟರಿಯವರು ಸಾರ್ವಜನಿಕ ಹಣವನ್ನು ಪೋಳು ಮಾಡುವವರು ಎಂದೂ ಹೇಳುವವರಿದ್ದಾರೆ, ಆದರೆ ರೋಟರಿ ಸಂಸ್ಥೆ ಎಲ್ಲಿಯೂ ಹಣ ಸಂಗ್ರಹಿಸುವುದಿಲ್ಲ, ಇದರ ಸದಸ್ಯರು ಹಣ ಕ್ರೋಢೀಕರಣ ಮಾಡಿ ಯೋಜನೆ ರೂಪಿಸುತ್ತಾರೆ. ಅದಾಗ್ಯೂ ಕೆಲವೊಂದು ಯೋಜನೆಗಳನ್ನು ಸ್ಥಳೀಯ ದಾನಿಗಳ ಮೂಲಕ ಅನುಷ್ಠಾನಗೊಳಿಸಿ ಸಮಾಜಕ್ಕೆ ಅರ್ಪಿಸುವ ಕೆಲಸ ಮಾಡುತ್ತಿದ್ದು, ಹೊಸದಾಗಿ ಸೇರ್ಪಡೆಗೊಂಡ ಸದಸ್ಯರುಗಳು ಈ ನಿಟ್ಟಿನಲ್ಲಿ ಕಾರ್‍ಯಪ್ರವೃತ್ತರಾಗಬೇಕು ಎಂದರು.

ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಜಿ. ಸುರೇಂದ್ರ ಕಿಣಿ ಮಾತನಾಡಿ ಇತರೇ ರೋಟರಿ ಸಂಸ್ಥೆಗೆ ಹೋಲಿಕೆ ಮಾಡಿದರೆ ಉಪ್ಪಿನಂಗಡಿ ಸಂಗಮ ಕ್ಷೇತ್ರದ ಮಹಿಮೆಗೆ ಪೂರಕವಾಗಿ ಇರುವಂತೆ ಇಲ್ಲಿನ ರೋಟರಿ ಸಂಸ್ಥೆ ಬಹಳಷ್ಟು ವಿಶಿಷ್ಠತೆಯೊಂದಿಗೆ ಕೂಡಿದ ತಂಡ ಇದ್ದು, ಅತ್ತುತ್ತಮವಾಗಿ ಕಾರ್‍ಯ ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ರೋಟರಿ ಜಿಲ್ಲೆಯನ್ನು ಬಲಪಡಿಸಲು ಹೊಸ ತಂಡ ಪರಸ್ಪರ ಕೈಜೋಡಿಸಬೇಕು ಎಂದರು.

ನಿರ್ಗಮನ ಅಧ್ಯಕ್ಷ ರವೀಂದ್ರ ದರ್ಬೆ ಮಾತನಾಡಿ ಎದುರಾಗಿರುವ ಕೊರೊನಾ ಸಂಕಷ್ಟದ ಮಧ್ಯೆಯೂ ಬಹಳಷ್ಟು ಸಮಾಜಮಖಿ ಕೆಲಸಗಳನ್ನು ಮಾಡಲು ಸಾಧ್ಯವಾಗಿದ್ದು, ನನ್ನ ಅವಧಿಯಲ್ಲಿ ಸಹಕರಿಸಿದ ಸದಸ್ಯರಿಗೆ, ದಾನಿಗಳಿಗೆ ಅಭಾರಿ ಆಗಿದ್ದೇನೆ ಎಂದರು. ಪದ ಪ್ರಧಾನ ಸ್ವೀಕರಿಸಿದ ನೀರಜ್ ಕುಮಾರ್ ಮಾತನಾಡಿ ಸಂಸ್ಥೆಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಲು ಬದ್ಧನಾಗಿದ್ದು, ಎಲ್ಲರ ಸಹಕಾರ ಅಗತ್ಯ ಎಂದರು.

ರೋಟರಿ ವಲಯ ಕಾರ್‍ಯದರ್ಶಿ ಜಯರಾಮ ರೈ, ವಲಯ ದಂಡಾಧಿಕಾರಿ ಡಿ. ಚಂದಪ್ಪ ಮೂಲ್ಯ, ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಮಧು ನರಿಯೂರ್ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.

ಹಿರಿಯ ವೈದ್ಯ ಕೆ.ಜಿ. ಭಟ್‌ರಿಗೆ ಸನ್ಮಾನ:
ಸಮಾರಂಭದಲ್ಲಿ ಉಪ್ಪಿನಂಗಡಿಯ ಹಿರಿಯ ವೈದ್ಯ ಡಾ. ಕೆ.ಜಿ. ಭಟ್ ಮತ್ತು ವೇಣೂರುನಲ್ಲಿ ವೃದ್ಧಾಶ್ರಮ ನಡೆಸುತ್ತಿರುವ ಹೊನ್ನಯ್ಯ ಕಾಟಿಪಳ್ಳ ಇವರ ಸೇವೆಯನ್ನು ಗುರುತಿಸಲಾಗಿ ಡಿ. ಚಂದಪ್ಪ ಮೂಲ್ಯರವರು ಕೊಡ ಮಾಡಿದ ೧೦ ಸಾವಿರ ರೂಪಾಯಿ ದೇಣಿಗೆ ಹಾಗೂ ಸ್ಥಳೀಯ ದಾನಿಗಳ ಮೂಲಕ ೨ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು. ಹಾಗೂ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ದಿವಾಕರ ಆಚಾರ್ಯ ಅವರ ಸಂಪಾದಕತ್ವದಲ್ಲಿ ಹೊರ ತರಲಾದ ರೋಟರಿ ಸೇವಾ ಸಂಗಮ ಪುಸ್ತಕವನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.

ಹೊಸ ಸದಸ್ಯರುಗಳ ಸೇರ್ಪಡೆ:
ಇದೇ ಸಂದರ್ಭದಲ್ಲಿ ಉದ್ಯಮಿಗಳಾದ ಸುಜಿತ್ ರೈ, ಸಚಿನ್ ಆರ್. ಶೆಟ್ಟಿ, ರವೀಂದ್ರ ಪ್ರಭು ನಿಡ್ಡೋಡಿ, ಡಿ. ಆದಿತ್ಯ ಭಟ್, ಚಾರ್ಟೆಡ್ ಅಕೌಂಟೆಂಟ್ ಶ್ರೀನಿವಾಸ ಭಟ್, ಪ್ರಗತಿಪರ ಕೃಷಿಕ ಜೋಸಿಸ್ ಮೆಂತೇರೊರವರನ್ನು ರೋಟರಿ ಸಂಸ್ಥೆಗೆ ಸೇರ್ಪಡೆಗೊಳಿಸಲಾಯಿತು.
ರೋಟರಿ ಸಂಸ್ಥೆಯ ಪದಾಧಿಕಾರಿಗಳಾದ ಅಜೀಜ್ ಬಸ್ತಿಕ್ಕಾರ್, ಡಾ. ರಾಜಾರಾಮ್ ಕೆ.ಬಿ., ಡಾ. ನಿರಂಜನ ರೈ, ಅಬ್ದುಲ್ ರಹಿಮಾನ್ ಯುನಿಕ್, ಹರೀಶ್ ನಟ್ಟಿಬೈಲ್, ಜಾರ್ಜ್ ನೊರೋನ್ನಾ, ವಿಜಯಕುಮಾರ್ ಕಲ್ಲಳಿಕೆ, ಶ್ರೀಕಾಂತ್ ಪಟೇಲ್, ಸಮೀಮ್ ಬಂಡಾಡಿ, ಅರುಣ್ ಕುಮಾರ್, ಶ್ರೀನಿವಾಸ ಪಡಿಯಾರ್, ಸ್ವರ್ಣೇಶ್ ಗಾಣಿಗ, ಇಸ್ಮಾಯಿಲ್ ಇಕ್ಬಾಲ್, ಶ್ರೀಮತಿ ಹರಿಣಿ ರವೀಂದ್ರ, ಶ್ರೀಮತಿ ಅನುರಾಧ ಶೆಟ್ಟಿ, ಆಶಾಲತಾ ನಾಯಕ್, ವಿದ್ಯಾ ನಾಯಕ್, ಶಿಕ್ಷಕಿ ಶ್ರೀಮತಿ ವಂದನಾ ವಿವಿಧ ಕಾರ್‍ಯಕ್ರಮ ನಿರ್ವಹಿಸಿದರು.

ಸಮಾರಂಭದಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸದಸ್ಯ ಯು.ಟಿ. ತೌಸೀಫ್, ಸ್ಥಳೀಯ ಪ್ರಮುಖರಾದ ಡಾ. ಬಿ. ರಘು, ಎನ್. ಉಮೇಶ್ ಶೆಣೈ, ಯು.ಜಿ. ರಾಧಾ, ಮೊದುಕುಟ್ಟಿ, ನೀರಜ್ ಕುಮಾರ್‌ರವರ ತಂದೆ, ಕೊಲದ ನಿವೃತ್ತ ಶಿಕ್ಷಕ ಕೆ. ರಘುನಾಥ ರೈ, ಪತ್ನಿ ರಂಜಿತಾ ನೀರಜ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ನಿರ್ಗಮನ ಅಧ್ಯಕ್ಷ ರವೀಂದ್ರ ದರ್ಬೆ ಸ್ವಾಗತಿಸಿ, ನಿರ್ಗಮನ ಕಾರ್‍ಯದರ್ಶಿ ವರದಿ ಮಂಡಿಸಿದರು. ನೂತನ ಕಾರ್‍ಯದರ್ಶಿ ನವೀನ್ ಬ್ರಾಗ್ಸ್ ವಂದಿಸಿದರು. ಅಶ್ವಿನಿ ನಾಯಕ್, ಗಿರಿಧರ ನಾಯಕ್ ಕಾರ್‍ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.