HomePage_Banner
HomePage_Banner
HomePage_Banner
HomePage_Banner

ಉದ್ಯಮಿ ದಿ.ದಿನೇಶ್ ರೈ ಬೈಲುಗುತ್ತು ಸ್ಮರಣಾರ್ಥ ಪುಣಚದಲ್ಲಿ ಆಹಾರ ಕಿಟ್ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ದೇಹ ಅಳಿದರೂ ಹೆಸರು ಶಾಶ್ವತವಾಗಿ ಉಳಿಯುವಂತಾಗಬೇಕು- ಶಕುಂತಳಾ ಟಿ.ಶೆಟ್ಟಿ

ಪುತ್ತೂರು: ಉದ್ಯಮ ಕ್ಷೇತ್ರದಲ್ಲಿ ಶ್ರಮ ಮತ್ತು ಸ್ವಾಭಿಮಾನದ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡ ದಿನೇಶ್ ರೈ ಬೈಲುಗುತ್ತುರವರು ಒಬ್ಬ ಶ್ರಮಜೀವಿಯಾಗಿದ್ದರು. ಕೋರೋನಾ ಮಹಾಮಾರಿಯ ಅಟ್ಟಹಾಸಕ್ಕೆ ಬಲಿಯಾದರೂ ಅವರು ಗ್ರಾಮದ ಜನತೆಗೆ ತನ್ನ ಉದ್ಯಮದ ಮೂಲಕ ಮಾಡಿದ ಸಹಕಾರ ಬಹಳಷ್ಟಿದೆ. ಅವರು ದೇಹ ಬಿಟ್ಟು ಅಗಲಿದರೂ ಅವರ ನೆನಪು ಗ್ರಾಮದ ಜನರ ಮನಸ್ಸಲ್ಲಿದೆ. ಅವರ ಹೆಸರಿನಲ್ಲಿ ಅವರ ಮಾವ ಮತ್ತು ಬಾವರವರು ಗ್ರಾಮದ ಒಂದಷ್ಟು ಜನರಿಗೆ ಆಹಾರ ಕಿಟ್ ವಿತರಿಸುವ ಕೆಲಸವನ್ನು ಮಾಡಿದ್ದು ಶ್ಲಾಘನೀಯ, ಅಗಲಿದ ದಿನೇಶ್ ರೈಯವರ ಆತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ ಎಂದು ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಹೇಳಿದರು.

ಅವರು ದಿ.ದಿನೇಶ್ ರೈ ಬೈಲುಗುತ್ತುರವರ ಸ್ಮರಣಾರ್ಥ ಪುಣಚದಲ್ಲಿ ಜು.೩೧ ರಂದು ನಡೆದ ಆಹಾರ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ದಿನೇಶ್ ರೈಯವರು ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿದ್ದರು ಎಂಬುದನ್ನು ತಿಳಿದುಕೊಂಡಿದ್ದೇನೆ. ಇವರ ಸಾಯಿನಾಥ ಎಂಟರ್‌ಪ್ರೈಸಸ್‌ನಿಂದ ಬಹಳಷ್ಟು ಮಂದಿ ಮನೆ ಕಟ್ಟಲು ಸಾಮಾಗ್ರಿಗಳನ್ನು ಪಡೆದುಕೊಂಡು ಹೋಗಿದ್ದಾರೆ ಎಂದ ಶಕುಂತಳಾ ಟಿ.ಶೆಟ್ಟಿಯವರು ಇವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕುಟುಂಬ ವರ್ಗಕ್ಕೆ ಭಗವಂತ ಕರುಣಿಸಲಿ, ದೇಹ ಅಳಿದರೂ ಅವರ ಹೆಸರು ಗ್ರಾಮದಲ್ಲಿ ಶಾಶ್ವತವಾಗಿ ಉಳಿಯುವಂತಾಗಲಿ ಎಂದು ಹೇಳಿ ನುಡಿನಮನ ಸಲ್ಲಿಸಿದರು.

ಸಭಾಧ್ಯಕ್ಷತೆ ವಹಿಸಿದ್ದ ಪುಣಚ ಗ್ರಾಪಂ ಅಧ್ಯಕ್ಷ ರಾಮಕೃಷ್ಣ ಬಿ.ಮೂಡಂಬೈಲುರವರು ಮಾತನಾಡಿ, ಕೊರೋನಾದ ಅಟ್ಟಹಾಸಕ್ಕೆ ಗ್ರಾಮದಲ್ಲಿ ಐದು ಮಂದಿಯನ್ನು ನಾವು ಕಳೆದುಕೊಂಡಿದ್ದು ನಮಗೆ ಬಹಳಷ್ಟು ದುಃಖ ತಂದಿದೆ. ಉದ್ಯಮ ಕ್ಷೇತ್ರದಲ್ಲಿ ತನ್ನದೇ ಶ್ರಮ ಮತ್ತು ಅವಿತರ ದುಡಿಮೆ ಮೂಲಕ ಪ್ರಸಿದ್ಧಿ ಪಡೆದುಕೊಂಡವರು ದಿನೇಶ ರೈಯವರು. ಇವರು ಎಲ್ಲರಿಗೂ ಬೇಕಾದ ಓರ್ವ ಸಜ್ಜನ ವ್ಯಕ್ತಿ. ಇಂತಹ ಓರ್ವ ಉದ್ಯಮಿಯನ್ನು ಪುಣಚ ಗ್ರಾಮ ಕಳೆದುಕೊಂಡಿದ್ದು ಬೇಸರದ ಸಂಗತಿಯಾಗಿದೆ ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ, ಕುಟುಂಬಕ್ಕೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು. ಅತಿಥಿಯಾಗಿದ್ದ ಕೊಳ್ನಾಡು ಜಿಪಂ ಕ್ಷೇತ್ರದ ಮಾಜಿ ಸದಸ್ಯ ಎಂ.ಎಸ್.ಮಹಮ್ಮದ್‌ರವರು ಮಾತನಾಡಿ, ದೇವರ ಕರೆಗೆ ನಾವೆಲ್ಲರೂ ಎದ್ದು ಹೋಗಲೇಬೇಕು. ವಿಧಿಯ ನಿಯಮವನ್ನು ಮೀರಿ ಇಲ್ಲೇನೂ ನಡೆಯದು ಹೀಗಿದ್ದರೂ ಗ್ರಾಮದ ಓರ್ವ ಪ್ರಸಿದ್ಧ ಉದ್ಯಮಿ ದಿನೇಶ್ ರೈಯವರನ್ನು ಕಳೆದುಕೊಂಡಿದ್ದು ಇಡೀ ಗ್ರಾಮಕ್ಕೆ ತುಂಬಲಾರದ ನಷ್ಟ. ದಿನೇಶ್ ರೈಯವರು ಸಾಯಿನಾಥ ಎಂಟರ್‌ಪ್ರೈಸಸ್ ಎಂಬ ಉದ್ಯಮದೊಂದಿಗೆ ಕೃಷಿ ಕೆಲಸದಲ್ಲೂ ತನ್ನನ್ನು ತೊಡಗಿಸಿಕೊಂಡ ಅಪ್ಪಟ ಶ್ರಮ ಜೀವಿಯಾಗಿದ್ದರು. ಅಗಲಿದ ದಿನೇಶ್ ರೈಯವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ,ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ಕೊಡಲಿ ಎಂದು ಪ್ರಾರ್ಥಿಸಿದರು. ಪುಣಚ ಗ್ರಾಪಂ ಸದಸ್ಯ ಮಹೇಶ್ ಶೆಟ್ಟಿ ಬೈಲುಗುತ್ತುಯವರ ದಿನೇಶ್ ರೈಯವರ ಬಗ್ಗೆ ಗುಣಗಾನ ಮಾಡಿದರು.

ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಪ್ರತಿಭಾ ಜಗನ್ನಾಥ್, ಅಭಿವೃದ್ಧಿ ಅಧಿಕಾರಿ ಲಾವಣ್ಯ ಪಿ, ದಿ.ದಿನೇಶ್ ರೈಯವರು ಬಾವ ಸಂದೇಶ್ ರೈ ಬೋಳೋಡಿ ಉಪಸ್ಥಿತರಿದ್ದರು. ಗ್ರಾಪಂ ಮಾಜಿ ಸದಸ್ಯ ಬಾಲಕೃಷ್ಣ ರೈ ಸ್ವಾಗತಿಸಿ, ವಂದಿಸಿದರು. ರಾಜೇಂದ್ರ ರೈ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದ ಮೊದಲಿಗೆ ಒಂದು ನಿಮಿಷದ ಮೌನ ಪ್ರಾರ್ಥನೆ ಮಾಡಲಾಯಿತು.

ಗ್ರಾಮದ 60 ಕುಟುಂಬಗಳಿಗೆ ಕಿಟ್ ವಿತರಣೆ
ಪುಣಚ ಗ್ರಾಮದ 60 ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಮಾಡಲಾಗಿದೆ. ಇದಲ್ಲದೆ ಕೆದಂಬಾಡಿ ಗ್ರಾಮದ ಒಂದಷ್ಟು ಬಡ ಕುಟುಂಬಗಳಿಗೂ ಕಿಟ್ ವಿತರಣೆ ಮಾಡಲಾಗುತ್ತಿದೆ.

ಸಾಯಿನಾಥ ಎಂಟರ್‌ಪ್ರೈಸಸ್ ಮೂಲಕ ಪುಣಚದಲ್ಲಿ ಹಾರ್ಡ್‌ವೇರ್ ಶಾಫ್ ಸ್ಥಾಪಿಸಿ ಪುಣಚ ಸೇರಿದಂತೆ ನೆರೆಯ ಗ್ರಾಮದ ಜನರಿಗೆ ಬೇಕಾದ ಐಟಂಗಳನ್ನು ಒದಗಿಸುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ದಿನೇಶ್ ರೈ ಬೈಲುಗುತ್ತುರವರು ಅಕಾಲಿಕವಾಗಿ ಅಗಲಿದ್ದು ಎಲ್ಲರಿಗೂ ಬೇಸರ ತಂದಿದೆ. ಅವರ ಉತ್ತರಕ್ರಿಯಾಧಿ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮಾವಳಿಗಳು ಇದ್ದುದರಿಂದ ಬಹಳಷ್ಟು ಜನರಿಗೆ ಊಟ ಹಾಕಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ನನ್ನ ಪುತ್ರ, ದಿನೇಶ್ ರೈಯವರ ಬಾವ ಸಂದೇಶ್ ರೈ ಬೋಳೋಡಿಯವರ ನೇತೃತ್ವದಲ್ಲಿ ಗ್ರಾಮದ ಸುಮಾರು ೬೦ ರಷ್ಟು ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಮಾಡಿದ್ದೇವೆ. ದಿನೇಶ್ ರೈಯವರ ನೆನಪನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಇದೊಂದು ಚಿಕ್ಕ ಕಾಣಿಕೆ ಅಷ್ಟೇ. ಎಲ್ಲರ ಸಹಕಾರ ಇರಲಿ – ಬೋಳೋಡಿ ಚಂದ್ರಹಾಸ ರೈ, ದಿನೇಶ್ ರೈಯವರ ಮಾವ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.