HomePage_Banner
HomePage_Banner
HomePage_Banner
HomePage_Banner

ಬಿಜೆಪಿ ಕಚೇರಿ ಕಾರ್ಯದರ್ಶಿ ರುಕ್ಮಯ ಇದ್ಬಾಡಿಯವರಿಗೆ ಬೀಳ್ಕೊಡುಗೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • 27* 7 ಕೆಲಸ ಮಾಡಿದ ಕೀರ್ತಿ ರುಕ್ಮಯರದ್ದು – ಮಲ್ಲಿಕಾ ಪ್ರಸಾದ್
  • ಬಿಜೆಪಿಯಲ್ಲಿ ಕೆಲಸ ಮಾಡಿದವರನ್ನು ಪಕ್ಷ ಗುರುತಿಸುತ್ತದೆ- ಸಂಜೀವ ಮಠಂದೂರು
  • ಬೆಳಿಗ್ಗೆ, ಸಂಜೆ ಒಂದೊಂದು ಗಂಟೆ ಪಕ್ಷಕ್ಕೆ ಮೀಸಲು – ರುಕ್ಮಯ ಇದ್ಬಾಡಿ

ಪುತ್ತೂರು: ಕಳೆದ ೧೩ ವರ್ಷಗಳಿಂದ ಪುತ್ತೂರು ಬಿಜೆಪಿ ಕಚೇರಿಯಲ್ಲಿ ಕಚೇರಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರುಕ್ಮಯ ಇದ್ಪಾಡಿಯವರಿಗೆ ಬ್ಯಾಂಕ್ ಹುದ್ದೆಗೆ ತೆರಳಿದ ಹಿನ್ನೆಲೆಯಲ್ಲಿ ಪುತ್ತೂರು ಬಿಜೆಪಿ ಕಚೇರಿಯಲ್ಲಿ ಜು. ೩೧ರಂದು ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.

೨೪* ೭ ಕೆಲಸ ಮಾಡಿದ ಕೀರ್ತಿ ರುಕ್ಮಯರದ್ದು :
ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಅವರು ಮಾತನಾಡಿ ನಾನು ಶಾಸಕಿಯಾದ ಸಮಯದಲ್ಲೇ ರುಕ್ಮಯ ಬಿಜೆಪಿ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. ಇಬ್ಬರು ಹೊಸಬರಾಗಿದ್ದರಿಂದ ಅನುಭವದ ಕೊರತೆಯ ನಡುವೆಯೂ ಉತ್ತಮ ಕಾರ್ಯ ನಿರ್ವಹಿಸಿದ ರುಕ್ಮಯ ಅವರು ೨೪*೭ ಕರ್ತವ್ಯ ನಿರ್ವಹಿಸಿದ್ದಾರೆ ಎಂದರು.

ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಸಂಕಷ್ಟದ, ಸಂಘರ್ಷದ ಕಾಲದಲ್ಲಿ ರುಕ್ಮಯರು ಬಂದಿದ್ದರು. ಐ.ಸಿ ಕೈಲಾಸ್ ಪ್ರಧಾನ ಕಾಯದರ್ಶಿಯಾಗಿದ್ದ ಸಂದರ್ಭದಲ್ಲಿ ಅವರೇ ತೋರಿಸಿಕೊಟ್ಟ ರುಕ್ಮಯರನ್ನು ಕಚೇರಿ ಕಾರ್ಯದರ್ಶಿಯನ್ನಾಗಿ ನೇಮಿಸಲಾಯಿತು. ಬಳಿಕದ ದಿನಗಳಲ್ಲಿ ಐ.ಸಿ ಕೈಲಾಸ್ ಪಕ್ಷ ಬಿಟ್ಟು ಹೋದರು ರುಕ್ಮಯರು ಪ್ರಾಮಾಣಿಕತೆಯಲ್ಲಿ ಪಕ್ಷದ ಸೇವೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಪಕ್ಷ ಅವರನ್ನು ಗುರುತಿಸಿದೆ ಎಂದು ಅವರು ಹೇಳಿದರು.

ಬೆಳಿಗ್ಗೆ, ಸಂಜೆ ಒಂದೊಂದು ಗಂಟೆ ಪಕ್ಷಕ್ಕೆ ಮೀಸಲು:
ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ರುಕ್ಮಯ ಇದ್ಬಾಡಿ ದಂಪತಿ ಬಿಜೆಪಿ ಪಕ್ಷದಿಂದ ಸನ್ಮಾನ ಸ್ವೀಕರಿಸಿದರು. ಬಳಿಕ ರುಕ್ಮಯ ಅವರು ಮಾತನಾಡಿ ನಾನು ಪಕ್ಷದ ಕಚೇರಿಯಿಂದ ನಿರ್ಗಮನವಾದರೂ ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಒಂದೋಂದು ಗಂಟೆ ಪಕ್ಷದ ಕಚೇರಿಯಲ್ಲೇ ಲಭ್ಯವಿದ್ದು, ಪಕ್ಷದ ಕಾರ್ಯ ಮಾಡಲಿದ್ದೇನೆ ಎಂದು ಭರವಸೆ ನೀಡಿದರು. ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಬಿಜೆಪಿ ವಿಭಾಗ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷರಾದ ಅಪ್ಪಯ್ಯ ಮಣಿಯಾಣಿ, ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿದರು. ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಸ್ವಾಗತಿಸಿ, ನಗರ ಮಂಡಲದ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್ ವಂದಿಸಿದರು. ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ ಕಾರ್ಯಕ್ರಮ ನಿರೂಪಿಸಿದರು. ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಬಿಜೆಪಿ ಮಂಡಲದ ಪ್ರಧಾನ ಕಾಯದರ್ಶಿಗಳಾದ ಜಯಶ್ರೀ ಎಸ್ ಶೆಟ್ಟಿ, ನಿತೀಶ್ ಕುಮಾರ್ ಶಾಂತಿವನ, ಯುವರಾಜ್ ಪೆರಿಯತ್ತೋಡಿ, ಒಬಿಸಿ ಮೋರ್ಚಾದ ಅಧ್ಯಕ್ಷ ಶಿವರಾಮ ಸಪಲ್ಯ, ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ್ ರಾವ್ ಬಪ್ಪಳಿಗೆ ಮತ್ತಿತರರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.