HomePage_Banner
HomePage_Banner
HomePage_Banner
HomePage_Banner

ಜಾತಿ, ಮತ, ಧರ್ಮ, ಭಾಷೆಗಳನ್ನು ಮೀರಿ ತುಳುನಾಡಿನಲ್ಲಿ ಆಷಾಢ ಮಾಸ ಆಚರಣೆ- ರೋಟರಿ ಕ್ಲಬ್ ಪುತ್ತೂರು ಸ್ವರ್ಣದ‌ ಆಷಾಡ ಮಾಸ ಸ್ನೇಹ ಮಿಲನದಲ್ಲ ಕುಂಬ್ರ ದುರ್ಗಾಪ್ರಸಾದ್ ರೈ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ತುಳುನಾಡಿನಲ್ಲಿ ನಾನಾ ಭಾಷೆಗಳನ್ನಾಡುವ ಜನರಿದ್ದಾರೆ. ಎಲ್ಲಾ ಧರ್ಮದವರು, ಜಾತಿಯವರು, ನಾನಾ ರೂಪಗಳಲ್ಲಿ ಇಲ್ಲಿನ ಸಂಸ್ಕೃತಿಯನ್ನು ಆಚರಿಸಿ ಪಾಲಿಸಿಕೊಂಡು ಬರುತ್ತಿದ್ದಾರೆ. ಆದರೂ ತುಳುನಾಡಿನಲ್ಲಿ ಆಷಾಡ ಮಾಸವನ್ನು ಜಾತಿ, ಮತ, ಧರ್ಮ, ಭಾಷೆಗಳನ್ನು ಮೀರಿ ತುಳುನಾಡಿನಲ್ಲಿ ಆಚರಿಸಲಾಗುತ್ತದೆ ಎಂದು ನ್ಯಾಯವಾದಿ, ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ಹೇಳಿದರು.


ರೋಟರಿ ಮನೀಷಾ ಸಭಾಂಗಣದಲ್ಲಿ ಜು.29 ರಂದು ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ವತಿಯಿಂದ ನಡೆದ ಸ್ನೇಹ ಮಿಲನ ‘ ಆಷಾಡ ಸಂಜೆ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಆಷಾಡ ಮಾಸದ ಆಚರಣೆಗಳು, ನಂಬಿಕೆಗಳು, ಅದರ ಹಿಂದಿನ ವೈಜ್ಞಾನಿಕ ಕಾರಣಗಳು, ಅದನ್ನು ಮುಂದುವರಿಸಿಕೊಂಡು ಹೋಗಬೇಕಾದ ಮಹತ್ವಗಳ ಕುರಿತು‌ ವಿವರಿಸಿದರು.

ಕ್ಲಬ್‌ನ ಅಧ್ಯಕ್ಷರಾದ ಕೆ.ಭಾಸ್ಕರ ಕೋಡಿಂಬಾಳ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವಾದ್ಯಕ್ಷ ಸೆನೋರಿಟಾ ಆನಂದ್, ಜಿಎಸ್.ಆರ್. ಚಿದಾನಂದ ಬೈಲಾಡಿ, ವಲಯ 5ರ ಕಾರ್ಯದರ್ಶಿ ಅಬ್ಬಾಸ್ ಮುರ, ವಲಯ ಸೇನಾನಿ ಜಯಂತ್ ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಹೊಸ ಸದಸ್ಯರ ಸೇರ್ಪಡೆ;
ವಕೀಲರಾದ ಮಹೇಶ್ ಕೆ.ಸವಣೂರು ಹಾಗೂ ಕೃಷ್ಣಪ್ಪ ಗೌಡ ಕಕ್ವೆರವರನ್ನು ಕ್ಲಬ್ ನ ನೂತನ ಸದಸ್ಯರನ್ನಾಗಿ ವಲಯ 5 ರ ಕಾರ್ಯದರ್ಶಿ ಅಬ್ಬಾಸ್ ಕೆ. ಮುರ ರೋಟರಿ ಪಿನ್ ತೊಡಿಸುವ ಮೂಲಕ ಕ್ಲಬ್ ಗೆ ಸೇರ್ಪಡೆಗೊಳಿಸಿದರು.

ಸನ್ಮಾನ:
2020-21 ಸಾಲಿನ ವಲಯ ಸೇನಾನಿ ಕ್ಲಬ್‌ನ ಸದಸ್ಯ ಮನೊಹರ್ ಕುಮಾರ್ ರವರನ್ನು ನಿಕಟಪೂರ್ವ ಅಧ್ಯಕ್ಷೆ ಸೆನೊರಿಟಾ ಆನಂದ್ ರವರು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳು ತುಳು, ಕನ್ನಡ, ಮಲಯಾಳ, ಕೊಂಕಣಿ ಇತ್ಯಾದಿ ಭಾಷೆಗಳಲ್ಲಿ ಮಾತನಾಡುವ ಆಟಿ ಆಚರಣೆ ಮಹತ್ವಗಳನ್ನು‌ ವಿವರಿಸಿರುವುದು ಷಾಡ ಸಂಜೆ ಕಾರ್ಯಕ್ರ‌ಮದ ವಿಶೇಷವಾಗಿತ್ತು. ಕ್ಲಬ್‌ನ ಸದಸ್ಯರು ತಂತಮ್ಮ ಮನೆಗಳಲ್ಲಿ ತಯಾರಿಸಿ ತಂದಿದ್ದ ವಿವಿಧ ಖಾದ್ಯಗಳನ್ನು ಹಂಚಿ ತಿಂದು ಸಂತೋಷವನ್ನು ಹಂಚಿಕೊಂಡರು.

ಕಾರ್ಯದರ್ಶಿ ಆನಂದ ಮೂವಪ್ಪು ವರದಿ ವಾಚಿಸಿದರು. ಸುಂದರ ಗೌಡರವರ ಪುತ್ರಿ ಇಷಿಕಾ ಪ್ರಾರ್ಥಿಸಿದರು. ರೋಹನ್ ಡಯಾಸ್ ಸ್ವಾಗತಿಸಿದರು. ಜಯಂತ್ ಶೆಟ್ಟಿ ವಂದಿಸಿದರು. ಕೋಶಾಧಿಕಾರಿ ದೀಪಕ್ ಬೊಳ್ವಾರ್ ಮತ್ತು ಸನತ್ ಕುಮಾರ್‌ ರೈ ಕುಂಜಾಡಿ ಕಾರ್ಯಕ್ರಮ ನಿರೂಪಿಸಿದರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.