ಉಪ್ಪಿನಂಗಡಿ: ಅಕ್ರಮ ಮರ ಸಾಗಾಟ ಪತ್ತೆ, ಇಬ್ಬರು ಬಂಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ತಣ್ಣೀರುಪಂಥ ಗ್ರಾಮದ ಕಲ್ಲೇರಿ ಎಂಬಲ್ಲಿ ಪಿಕ್‌ಅಪ್ ವಾಹನದಲ್ಲಿ ಅಕೇಶಿಯಾ ಮರದ ಕಂಬಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಉಪ್ಪಿನಂಗಡಿ ವಲಯ ಅರಣ್ಯ ಇಲಾಖಾ ಆದಿಕಾರಿಗಳ ತಂಡ ಪತ್ತೆ ಹಚ್ಚಿ ವಾಹನ ಸಹಿತ ಸೊತ್ತು ವಶಕ್ಕೆ ತೆಗೆದುಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿದೆ.

ಬಂಧಿತ ಆರೋಪಿಗಳು ಪಿಕ್‌ಅಪ್ ವಾಹನ ಚಾಲಕ ಸ್ಥಳೀಯ ನಿವಾಸಿಗಳಾದ ಅಶ್ರಫ್ ಮತ್ತು ಜಗದೀಶ್ ಎಂಬವರಾಗಿರುತ್ತಾರೆ. ಇನ್ನೋರ್ವ ಆರೋಪಿ ಬಂಟ್ವಾಳದ ಬದಿನಾರು ನಿವಾಸಿ ಚಂದ್ರ ನಾಯ್ಕ ವಾಹನದಿಂದ ಜಿಗಿದು ಪರಾರಿ ಆಗಿದ್ದಾನೆ ಎಂದು ವಲಯ ಅರಣ್ಯಾಧಿಕಾರಿ ಮಧುಸೂದನ್ ತಿಳಿಸಿದ್ದಾರೆ.

ಕಾರ್‍ಯಾಚರಣೆಯಲ್ಲಿ ಉಪ್ಪಿನಂಗಡಿ ಉಪ ವಲಯ ಅರಣ್ಯಾಧಿಕಾರಿ ಕೆ.ಆರ್. ಅಶೋಕ್, ಅರಣ್ಯ ರಕ್ಷಕರಾದ ಕೆ. ರಾಜೇಶ್, ಜಗದೀಶ ಕೆ.ಎನ್., ಅರಣ್ಯ ವೀಕ್ಷಕ ರಸೂಲ್ ಸಾಬ್ ಸಕಾನದಗಿ, ವಾಹನ ಚಾಲಕ ರವಿ ಭಾಗವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.