HomePage_Banner
HomePage_Banner
HomePage_Banner
HomePage_Banner

ಸವಣೂರು ಗ್ರಾ.ಪಂ. ನನ್ನ ಪಂಚಾಯತ್ ನನ್ನ ಅಧಿಕಾರ ನಮ್ಮಿಂದ ಜನರ ಸೇವೆ ವಿಶೇಷ ಗ್ರಾಮ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೆ 75 ಕಾರ್ಯಕ್ರಮ ,ಬ್ಯಾಂಕ್ ಸಿಬಂದಿಗಳ ವರ್ತನೆಗೆ ಗ್ರಾಮಸ್ಥರ ಅಸಹನೆ
ಸವಣೂರು : ಪಂಚಾಯತ್ ರಾಜ್ ಮಂತ್ರಾಲಯ ಭಾರತ ಸರಕಾರದಿಂದ ಗ್ರಾಮ ಪಂಚಾಯತ್‌ಗಳು ನಾಗರಿಕ ಸನ್ನದು ತಯಾರಿಸಲು ನನ್ನ ಪಂಚಾಯತ್ ನನ್ನ ಅಧಿಕಾರ ನಮ್ಮಿಂದ ಜನರ ಸೇವೆ ಅಭಿಯಾನದಡಿ ಸವಣೂರು ಗ್ರಾ.ಪಂ.ನ ವಿಶೇಷ ಗ್ರಾಮ ಸಭೆ ಜು.31ರಂದು  ಕುಮಾರಧಾರ ಸಭಾಂಗಣದಲ್ಲಿ ಅಧ್ಯಕ್ಷೆ ರಾಜೀವಿ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಕೃಷಿ ಇಲಾಖೆಯಿಂದ ತಿಮ್ಮಪ್ಪ ಗೌಡ,ಆರೋಗ್ಯ ಇಲಾಖೆಯಿಂದ ವಾಗೇಶ್ವರಿ, ಶಿಕ್ಷಣ ಇಲಾಖೆಯಿಂದ ಕುಶಾಲಪ್ಪ ಗೌಡ ,ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಕುರಿತು ವಿಜಯ ಈಶ್ವರ ಅವರು ಮಾಹಿತಿ ನೀಡಿದರು.
ಸಭೆಯಲ್ಲಿ ಆರೋಗ್ಯ ಇಲಾಖೆಯ ಮಾಹಿತಿ ನೀಡುತ್ತಿದ್ದಾಗ ಮಾತನಾಡಿದ ಗ್ರಾ.ಪಂ.ಸದಸ್ಯ ಗಿರಿಶಂಕರ ಸುಲಾಯ ಅವರು,ಸವಣೂರಿನಲ್ಲಿ ಪಡಿತರ ವಿತರಣೆ ಸಂದರ್ಭದಲ್ಲಿ ಜನರ ಕೋವಿಡ್ ತಪಾಸಣೆ ಮಾಡುತ್ತಿದ್ದಾಗ ಏಕಾಏಕಿ ನಿಲ್ಲಿಸಿದ್ದು ಯಾಕೆ?,ಪುಣ್ಚಪ್ಪಾಡಿಯಲ್ಲಿ ಮನೆ ಮನೆ ತಪಾಸಣೆ ಮಾಡಲಾಗಿದೆ.ಗ್ರಾ.ಪಂ.ನಲ್ಲಿ ಎಲ್ಲಾ ಕಡೆ ತಪಾಸಣೆ ನಡೆಸಬೇಕೆಂದು ನಿರ್ಣಯ ಕೈಗೊಳ್ಳಲಾಗಿತ್ತು .ಆದರೆ ಏಕಾ ಏಕಿ ಸವಣೂರಿನಲ್ಲಿ ತಪಾಸಣೆ ನಿಲ್ಲಿಸಿದ್ದು ಸರಿಯಲ್ಲ ಎಂದರು.
ಸದಸ್ಯ ಭರತ್ ರೈ ಪಾಲ್ತಾಡಿ ಮಾತನಾಡಿ, ಹಾಗಾದರೆ ಗ್ರಾ.ಪಂ.ನಿರ್ಣಯಕ್ಕೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದರು.
ಉತ್ತರಿಸಿದ ಅಭಿವೃದ್ಧಿ ಅಧಿಕಾರಿ ಮನ್ಮಥ ಅವರು ,ತಹಶೀಲ್ದಾರ್ ಅವರ ಸೂಚನೆಯಂತೆ ತಪಾಸಣೆ ನಿಲ್ಲಿಸಲು ಹೇಳಲಾಗಿದೆ ಎಂದರು.
ಆರೋಗ್ಯ ಇಲಾಖೆಯಿಂದ ವಾಗೇಶ್ವರಿ ಅವರು ಮಾತನಾಡಿ,ಕೋವಿಡ್ ನಿರ್ವಹಣೆಯಲ್ಲಿ ಸವಣೂರು ಗ್ರಾ.ಪಂ.ತಂಡ ,ಕಾರ್ಯಪಡೆ, ಕೋವಿಡ್ ವಾರಿಯರ್ಸ್ ಇಲಾಖೆಯೊಂದಿಗೆ ಸಂಪೂರ್ಣ ಕೈ ಜೋಡಿಸಿದೆ.ಮುಂದೆ ಪಾಸಿಟಿವ್ ಬಂದರೆ ಮನೆಯಲ್ಲಿ ಐಸೊಲೇಶನ್ ಇಲ್ಲ,ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ ಗೆ ಸೇರಿಸಬೇಕು ಎಂದರು.
ಗ್ರಾ.ಪಂ.ಮಟ್ಟದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯುವಂತೆ   ಗಿರಿಶಂಕರ ಹೇಳಿದರು. ಸವಣೂರು ಗ್ರಾ.ಪಂ.ವತಿಯಿಂದ ಸ್ವಾತಂತ್ರ್ಯೋತ್ಸವದ 75ನೇ ವರ್ಷದ ಸಂಭ್ರಮದ ಅಂಗವಾಗಿ 75 ಕಾರ್ಯಕ್ರಮಗಳನ್ನು ನಡೆಸೋಣ ಎಂದು ಸದಸ್ಯ ಗಿರಿಶಂಕರ ಹೇಳಿದರು. ಗ್ರಾ.ಪಂ.ವ್ಯಾಪ್ತಿಯ ಮೂರು ಗ್ರಾಮಗಳಲ್ಲಿ ತಲಾ 25ರಂತೆ ಕಾರ್ಯಕ್ರಮ ನಡೆಸುವ ಕುರಿತು ಚರ್ಚಿಸಲಾಯಿತು.
ಸವಣೂರಿನಲ್ಲಿ ಇರುವ ಕೆನರಾ ಬ್ಯಾಂಕ್ ನಲ್ಲಿ ಗ್ರಾಹಕರಿಗೆ ಸರಿಯಾದ ಸೇವೆ ದೊರಕುತ್ತಿಲ್ಲ.ಗ್ರಾಹಕರ ಜತೆ ಉಡಾಫೆ ರೀತಿ ವರ್ತಿಸುತ್ತಿದ್ದಾರೆ.ಅನಕ್ಷರಸ್ಥರು ಹಾಗೂ ವಯೋವೃದ್ದರಿಗೆ ಸರಿಯಾದ ಮಾಹಿತಿ ಹಾಗೂ ಸೇವೆ ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ತಾರಾನಾಥ ಕಾಯರ್ಗ,ಸುರೇಶ್ ರೈ ಸೂಡಿಮುಳ್ಳು,ಚೇತನ್ ಕೋಡಿಬೈಲು ಮೊದಲಾದವರು ಆರೋಪಿಸಿದರು. ನ್ಯಾಯವಾದಿ ಮಹೇಶ್ ಕೆ.ಸವಣೂರು ಮಾತನಾಡಿ,ಮಗನ ಹೆಸರಿನಲ್ಲಿ ನೋ ಡ್ಯು ಪ್ರಮಾಣ ಪತ್ರ ಕೇಳಿದರೆ,ತಂದೆಯ ಪಾಸ್ ಬುಕ್ ಕೇಳುತ್ತಾರೆ.ಎಲ್ಲೂ ಇಲ್ಲದ ನಿಯಮಗಳನ್ನು ಸವಣೂರಿನಲ್ಲಿ ಕೇಳುತ್ತಾರೆ ಎಂದರು. ಬ್ಯಾಂಕ್‌ನಲ್ಲಿ ಖಾತೆ ತೆರೆಯಲು ಮೂರು ದಿನ ಕರೆಸುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಉದ್ಯೋಗ ಖಾತರಿಯಲ್ಲಿ ಭತ್ತದ ಕೃಷಿ ಸೇರಿಸಿ
ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಭತ್ತದ ಕೃಷಿಗೂ ಅವಕಾಶ ನೀಡುವಂತೆ ಸದಸ್ಯ ಸತೀಶ್ ಅಂಗಡಿಮೂಲೆ ಹೇಳಿದರು.
ಮಾಜಿ ಸದಸ್ಯ ಸತೀಶ್ ಬಲ್ಯಾಯ ಮಾತನಾಡಿ,75ನೇ ವರ್ಷದ ಸ್ವಾತಂತ್ರ್ಯದ ಸವಿನೆನಪಿಗಾಗಿ ಸವಣೂರು ಜಂಕ್ಷನ್ ನಲ್ಲಿ ಸರ್ಕಲ್ ನಿರ್ಮಿಸುವಂತೆ ಹೇಳಿದರು.
ಸಾರ್ವಜನಿಕ ಶೌಚಾಲಯ ಬೇಕು
ಸವಣೂರಿನಲ್ಲಿ ಸಾರ್ವಜನಿಕ ಶೌಚಾಲಯ ಬೇಕು ಎಂದು ಸುರೇಶ್ ರೈ ಸೂಡಿಮುಳ್ಳು ಹೇಳಿದರು. ಉತ್ತರಿಸಿದ ಅಭಿವೃದ್ಧಿ ಅಧಿಕಾರಿ ಮನ್ಮಥ ಅವರು,ಸವಣೂರಿನಲ್ಲಿ ಗ್ರಾ.ಪಂ.ನ ಜಾಗ ಇಲ್ಲದರಿಂದ ಶೌಚಾಲಯ ನಿರ್ಮಾಣಕ್ಕೆ ಸಮಸ್ಯೆಯಾಗಿದೆ ಎಂದರು.ರಸ್ತೆಬದಿ ಅಂಗಡಿ ನಿರ್ಮಾಣಕ್ಕೆ ಸ್ಥಳ ಇದೆ.ಆದರೆ ಶೌಚಾಲಯಕ್ಕೆ ಜಾಗ ಇಲ್ಲ ಎಂಬುದು ಸರಿಯಲ್ಲ. ಇಚ್ಛಾಶಕ್ತಿ ಯ ಕೊರತೆ ಇದೆ ಎಂದರು.
ಪುಣ್ಚಪ್ಪಾಡಿಯಲ್ಲಿ ಯಾವುದಾದರೊಂದು ಬ್ಯಾಂಕ್ ತೆರೆಯುವಂತೆ ಲೀಡ್ ಬ್ಯಾಂಕ್ ಗೆ ಮನವಿ ಮಾಡುವಂತೆ ಪ್ರಮೋದ್ ರೈ ನೂಜಾಜೆ ಹೇಳಿದರು.
ಶಿಕ್ಷಣ ಇಲಾಖೆಯ ಮಾಹಿತಿ ನೀಡುವಾಗ ಮಕ್ಕಳಿಗೆ ಮನೆಯಲ್ಲಿ ಓದಲು ವೇಳಾಪಟ್ಟಿ ನೀಡಿದರೆ ಮಕ್ಕಳು ತೊಡಗಿಸಿಕೊಳ್ಳಬಹುದು ಎಂದು ಗ್ರಾ.ಪಂ.ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ.ಅಧ್ಯಕ್ಷೆ ರಾಜೀವಿ ಶೆಟ್ಟಿ ಕೆಡೆಂಜಿ ಮಾತನಾಡಿ, ಬ್ಯಾಂಕ್ ಸಿಬಂದಿಗಳಿಂದ ಜನರಿಗೆ ಸಿಗುವ ಸೇವೆಯಲ್ಲಿ ನ್ಯೂನತೆಗಳಾಗುತ್ತಿದೆ.ತನಗೂ ಈ ತೊಂದರೆಯಾಗಿದೆ.ಸಣ್ಣ ಕೆಲಸಕ್ಕಾಗಿ ಮೂರುದಿನ ಕಾಯಿಸಿದ್ದಾರೆ.ಹೀಗಾದರೆ ಜನಸಾಮಾನ್ಯರ ಪಾಡೇನು ಎಂದ ಅವರು ಈ ಕುರಿತು ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಬರೆದುಕೊಳ್ಳಲಾಗುವುದು.ಆಗಲೂ ಸರಿಯಾಗದಿದ್ದರೆ ಗ್ರಾಹಕರೊಂದಿಗೆ ನಾವೂ ಪ್ರತಿಭಟಿಸುತ್ತೇವೆ ಎಂದರು.
ಗ್ರಾ.ಪಂ.ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ,ಸದಸ್ಯರಾದ ಗಿರಿಶಂಕರ ಸುಲಾಯ,ಅಬ್ದುಲ್ ರಝಾಕ್,ಸತೀಶ್ ಅಂಗಡಿಮೂಲೆ, ಚೆನ್ನು ಮಾಂತೂರು,ಭರತ್ ರೈ,ರಫೀಕ್ ಎಂ.ಎ,ಬಾಬು ಎನ್,ತೀರ್ಥರಾಮ ಕೆಡೆಂಜಿ, ಚಂದ್ರಾವತಿ ಸುಣ್ಣಾಜೆ, ಇಂದಿರಾ ಬೇರಿಕೆ, ಹರೀಶ್ ಕೆ.ಜಿ,ಚೇತನಾ ಶಿವಾನಂದ,ತಾರಾನಾಥ ಬೊಳಿಯಾಲ,ಯಶೋಧಾ ಹಾಗೂ ಗ್ರಾಮಸ್ಥರು,ಆರೋಗ್ಯ ಇಲಾಖೆ ಸಿಬಂದಿಗಳು, ಆಶಾ ಕಾರ್ಯಕರ್ತೆಯರು,ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.