ಪುತ್ತೂರು ತಾಲೂಕು ವಾಲಿಬಾಲ್ ಅಸೋಸಿಯೇಷನ್ ಮಹಾಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ತಾಲೂಕು ವಾಲಿಬಾಲ್ ಅಸೋಸಿಯೇಷನ್‌ನ ವಾರ್ಷಿಕ ಮಹಾಸಭೆಯು ಆ.೧ರಂದು ನೆಹರುನಗರ ಸುದಾನ ಶಾಲಾ ಎಡ್ವರ್ಡ್ ಕಾನ್ಫರೆನ್ಸ್ ಹಾಲ್ ನಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿದ್ದ ಅಸೋಸಿಯೇಷನ್‌ನ ಗೌರವಾಧ್ಯಕ್ಷರು, ಸುದಾನ ವಸತಿಯುತ ಶಾಲಾ ಸಂಚಾಲಕರಾಗಿರುವ ರೆ.ಪಾ ವಿಜಯ ಹಾರ್ವಿನ್ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಸ್ಪರ್ಧಿಗಳ ಮಧ್ಯೆ ವೈರತ್ವ ಕ್ರೀಡಾ ಸಂದರ್ಭದಲ್ಲಿ ಮಾತ್ರ. ಆಟಗಾರರು ಒಬ್ಬರನ್ನೊಬ್ಬರು ಅರಿತುಕೊಂಡು ಮಾನವೀಯತೆಯಿಂದ ಬೆಳೆಯಬೇಕು ಎಂದರು. ಅಸೋಸಿಯೇಷನ್ ಹಲವು ಅಡಚಣೆಗಳನ್ನು ಎದುರಿಸಿಕೊಂಡು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕೋವಿಡ್‌ನ ಸಂದರ್ಭದಲ್ಲಿ ಜಿಲ್ಲೆಯ ಅಟಗಾರರ ಸಂಕಷ್ಟವನ್ನು ಗುರುತಿಸಿ ಕಿಟ್ ವಿತರಿಸಿರುವುದನ್ನು ಶ್ಲಾಘಿಸಿದರು.

ಮಹಾಸಭೆಯ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿದ ವಾಲಿಬಾಲ್‌ನ ಅಸೋಸಿಯೇಷನ್‌ನ ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರಾಗಿರುವ ಬಿ.ಎಸ್ ಸತೀಶ್ ಕುಮಾರ್ ಮಾತನಾಡಿ, ವಾಲಿಬಾಲ್‌ನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿ ತಾಲೂಕಿನಲ್ಲಿಯೂ ಅಸೋಸಿಯೇಷನ್ ರಚಿಸಲಾಗುವುದು. ಅಸೋಸಿಯೇಷನ್ ಮೂಲಕ ಆಟಗಾರರಿಗೆ ಉತ್ತಮ ತರಬೇತಿ, ಪ್ರೋತ್ಸಾಹ ನೀಡಲಾಗುವುದು. ಪ್ರತಿ ತಾಲೂಕುಗಳಲ್ಲಿಯೂ ಪಂದ್ಯಾಟಗಳನ್ನು ಆಯೋಜಿಸಲಾಗುವುದಲ್ಲದೆ ಜಿಲ್ಲಾ ಮಟ್ಟದಲ್ಲಿ ಪ್ರೋ.ಮಾದರಿಯಲ್ಲಿ ಪಂದ್ಯಾಟವನ್ನು ಆಯೋಜಿಸಲಾಗುವುದು ಎಂದರು. ಕಳೆದ ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಜಿಲ್ಲೆಯ ಬಡ ವಾಲಿಬಾಲ್ ಆಟಗಾರರನ್ನು ಗುರುತಿಸಿ ಜಿಲ್ಲಾ ಅಸೋಸಿಯೇಷನ್‌ನಿಂದ ಕಿಟ್ ವಿತರಿಸಲಾಗಿದೆ ಎಂದ ಅವರು ಅಸೋಸಿಯೇಷನ್ ಬೆಳವಣಿಗೆಯಲ್ಲಿ ಸದಸ್ಯರೆಲ್ಲರೂ ಕೈಜೋಡಿಸುವಂತೆ ಅವರು ಮನವಿ ಮಾಡಿದರು.

ನೂತನ ಪದಾಧಿಕಾರಿಗಳ ಆಯ್ಕೆ:
ಮಹಾಸಭೆಯ ಬಳಿಕ ತಾಲೂಕು ಎಸೋಸಿಯೇಷನ್‌ನ ನೂತನ ಪದಾಧಿಕಾಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಸಂಘಟನಾ ಜತೆ ಕಾರ್ಯದರ್ಶಿ ಮುಸ್ತಫಾ ಚುನಾವಣಾಧಿಕಾರಿಯಾಗಿದ್ದರು.

ಜಿಲ್ಲಾ ಅಸೋಸಿಯೇಷನ್‌ನ ಸಂಘಟನಾ ಕಾರ್ಯದರ್ಶಿ ಭಾಸ್ಕರ ಶೆಟ್ಟಿ, ಜಿಲ್ಲಾ ತರಬೇತುದಾರ ರಾಜಾರಾಮ್, ಜಿಲ್ಲಾ ಸಂಘಟನಾ ಜತೆ ಕಾರ್ಯದರ್ಶಿ ಮುಸ್ತಫಾ, ಜಿಲ್ಲಾ ಉಪಾಧ್ಯಕ್ಷ ಸಂಶುದ್ದೀನ್ ಸುಳ್ಯ, ರೆಫ್ರೀ ಬೋರ್ಡ್ ಚೀಪ್ ಮೋನಪ್ಪ ಪಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಶ್ರೀಕಾಂತ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರದೀಪ್ ಪಿ.ಆರ್ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಶಿವರಾಮ್ ಭಟ್ ವಂದಿಸಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬೇಬಿಜಾನ್, ಗಿರೀಶ್ ಕಂಬಳಕೋಡಿ, ವನತ್‌ರಾಜ್, ಪ್ರದೀಪ್ ಪಿ.ಆರ್., ಹರೀಶ್, ಗನೇಶ್ ರೈ, ಬಾಲಣ್ಣ ಹಾಗೂ ಅನೂಪ್ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.