HomePage_Banner
HomePage_Banner
HomePage_Banner
HomePage_Banner

ರಾಜ್ಯವನ್ನೇ ತಲ್ಲಣಗೊಳಿಸಿದ್ದ ಮಾದಕ ವಸ್ತುಗಳ ಮಾರಾಟ ಪ್ರಕರಣ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪ್ರಮುಖ ಆರೋಪಿ ಅಖಿಲ್ ನೌಶಿಲ್ ಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್

ಖ್ಯಾತ ನಟಿಯರಾದ ರಾಗಿಣಿ, ಸಂಜನಾ ಬಂಧನ‌ದ ಬಳಿಕ‌ ಬೆಳಕಿಗೆ ಬಂದಿದ್ದ ಡ್ರಗ್ಸ್ ಕೇಸ್

ಪುತ್ತೂರು: ರಾಜ್ಯವನ್ನೇ ತಲ್ಲಣಗೊಳಿಸಿದ್ದ ಮಾದಕ ವಸ್ತುಗಳ ಮಾರಾಟ ಪ್ರಕರಣದ ಪ್ರಮುಖ ಆರೋಪಿ ಅಖಿಲ್ ನೌಶಿಲ್ ಗೆ ಕರ್ನಾಟಕ ಉಚ್ಛ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಆರೋಪಿ ಪರ ಪುತ್ತೂರು ಕಜೆ ಲಾ ಛೇಂಬರ್ಸ್ ಮುಖ್ಯಸ್ಥರಾದ ಖ್ಯಾತ ವಕೀಲ ಮಹೇಶ್ ಕಜೆ ವಾದಿಸಿದ್ದರು.

ರಾಜ್ಯವನ್ನೇ ತಲ್ಲಣಗೊಳಿಸಿದ್ದ ಕೇಸ್:
ಮಾದಕ ವಸ್ತುಗಳ ಮಾರಾಟ ದಂಧೆ ಪ್ರಕರಣ ಕೆಲವು ತಿಂಗಳ ಹಿಂದೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿತ್ತು. ಖ್ಯಾತ ಸ್ಯಾಂಡಲ್‌ವುಡ್ ನಟಿಯರಾದ ರಾಗಿಣಿ ಮತ್ತು ಸಂಜನಾರವರ ಬಂಧನದ ಮೂಲಕ ಈ ಡ್ರಗ್ಸ್ ಜಾಲದ ನಂಟು ಬಯಲಾಗಿತ್ತು. ಈ ಮಾದಕ‌ ಜಾಲ ಕರಾವಳಿಯವರೆಗೂ ವ್ಯಾಪಿಸಿರುವುದು ತನಿಖೆಯಲ್ಲಿ‌ ಕಂಡು ಬಂದಿತ್ತು. ಮಂಗಳೂರಿನಲ್ಲಿ ಕರಾವಳಿ ಮೂಲದ ಪ್ರತಿಷ್ಠಿತರ ಸಂಪರ್ಕವುಳ್ಳ ಖ್ಯಾತ ಡಾನ್ಸರ್ ಕಿಶೋರ್ ಅಮನ್ ಶೆಟ್ಟಿಯವರು ಡ್ರಗ್ಸ್ ಜಾಲದಲ್ಲಿ ಪಾಲ್ಗೊಂಡಿರುವುದು ಬಯಲಾಗುತ್ತಿದ್ದಂತೆಯೇ ಇಡೀ ಕರಾವಳಿಯೇ ಅಂದು ಬೆಚ್ಚಿ ಬಿದ್ದಿತ್ತು. ಈ ದಂಧೆಯಲ್ಲಿ ಖ್ಯಾತ ನಟ, ನಟಿಯರು, ಕಿರುತೆರೆಯ ಪ್ರಸಿದ್ಧ ನಿರೂಪಕಿ ಮತ್ತು ಉದ್ಯಮಿಗಳು ಹಾಗೂ ರಾಜಕಾರಣಿಗಳು ಮತ್ತು ಅವರ ಪುತ್ರರ ಹೆಸರನ್ನೊಳಗೊಂಡಂತೆ ಹಲವಾರು ಪ್ರತಿಷ್ಠಿತರ ಮೇಲೆಯೂ ಆರೋಪ ವ್ಯಕ್ತವಾಗಿತ್ತು. ಇದು ಇಡೀ ರಾಜ್ಯದ ಜನತೆ ನಿಬ್ಬೆರಗಾಗುವಂತಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಭಾವಿ ವ್ಯಕ್ತಿಗಳ ಹಸ್ತಕ್ಷೇಪ ಇದೆ ಎಂದು ಅನುಮಾನ ಹುಟ್ಟಿಸುವಂತೆ ಪ್ರಕರಣದ ತನಿಖಾಧಿಕಾರಿಯನ್ನೇ ವರ್ಗಾವಣೆ ಮಾಡಿದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಈ ಎಲ್ಲಾ ಕಾರಣಗಳಿಂದ ಈ ಪ್ರಕರಣ ವ್ಯಾಪಕ ಕುತೂಹಲವನ್ನುಂಟು ಮಾಡಿತ್ತು. ಸದ್ರಿ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರ ಆಗಸ್ಟ್ 19ರಂದು ಮನುಷ್ಯನ ಜೀವಕ್ಕೆ ಹಾನಿಕಾರಕವಾಗುವಂತಹ ನಿಷೇಧಿತ ಮಾದಕ ವಸ್ತುವಾದ ಎಂ.ಡಿ.ಎಂ.ಎ (ಬ್ರೌನ್)ಅನ್ನು ಖರೀದಿಸಿಕೊಂಡು ತಮ್ಮ ಲಾಭಕ್ಕೋಸ್ಕರ ಈ ಮಾದಕ ವಸ್ತುಗಳನ್ನು ಅಮಾಯಕ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಂಗಳೂರು ನಗರದ ಕದ್ರಿಪದವು ಪರಿಸರದಲ್ಲಿ ತಮ್ಮಲ್ಲಿರುವ ಕೆಂಪು ಬೈಕಿನಲ್ಲಿದ್ದುಕೊಂಡು ಮಾರಾಟ ಮಾಡುತ್ತಿದ್ದಾರೆ ಮತ್ತು ಅವರೂ ಸ್ವತಃ ಮಾದಕ ವಸ್ತುಗಳ ಸೇವನೆಯನ್ನು ಮಾಡಿಕೊಂಡಿರುತ್ತಾರೆ ಎಂದು ಬಂದ ಮಾಹಿತಿಯ ಅನುಸಾರ ಮಂಗಳೂರು ನಗರದ ಕೃಷ್ಣಾಪುರ ನಿವಾಸಿ ಅಖಿಲ್ ನೌಶಿಲ್ ಮತ್ತು ಕಿಶೋರ್ ಅಮನ್ ಶೆಟ್ಟಿಯವರ ವಿರುದ್ಧ ಮಂಗಳೂರಿನ ಎನ್. ಸಿ. ಪಿ. ಎಸ್. ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ೬ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದರು. ಆರೋಪಿಗಳ ವಿರುದ್ಧ ಎನ್. ಡಿ. ಪಿ. ಎಸ್. ಕಾಯ್ದೆಯಡಿಯಲ್ಲಿ ಕಲಂ 21, 21(ಸಿ), 8(ಸಿ),20(ಬಿ)(೧)(ii)(ಎ),27(ಎ)ರನ್ವಯ ಪ್ರಕರಣವನ್ನೂ ದಾಖಲಿಸಿದ್ದರು. ನಂತರ ಆರೋಪಿ ಅಖಿಲ್ ನೌಶಿಲ್ ರವರು ತನ್ನ ಪರ ವಕೀಲರಾದ ಪುತ್ತೂರು ಕಜೆ ಲಾ ಚೇಂಬರ್ಸ್ ನ ಮಹೇಶ್ ಕಜೆಯವರ ಮುಖಾಂತರ ಉಚ್ಛ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಘಟನೆಯಲ್ಲಿ ಆರೋಪಿಯು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಮತ್ತು ಅವನೇ ಸ್ವತಃ ಸೇವನೆಯನ್ನು ಮಾಡುತ್ತಿದ್ದ ಎಂಬುವುದಕ್ಕೆ ಯಾವುದೇ ಪೂರಕವಾದ ಸಾಕ್ಷ್ಯಾಧಾರಗಳು ಲಭ್ಯವಿರುವುದಿಲ್ಲ ಮತ್ತು 1ನೇ ಆರೋಪಿಯಿಂದ ವಾಣಿಜ್ಯ ಪ್ರಮಾಣದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ವೈಜ್ಞಾನಿಕ ವರದಿಯು ತಾಳೆ ಬರುತ್ತಿಲ್ಲ ಎಂಬಿತ್ಯಾದಿ ಅಂಶಗಳ ಬಗ್ಗೆ ವಕೀಲ ಮಹೇಶ್ ಕಜೆಯವರು ನ್ಯಾಯಪೀಠದ ಗಮನ ಸೆಳೆದಿದ್ದರು. ಆರೋಪಿಗೆ ಜಾಮೀನು ಮಂಜೂರು ಮಾಡುವುದಕ್ಕೆ ಸರಕಾರಿ ವಕೀಲರು‌ ಪ್ರಬಲ ಆಕ್ಷೇಪ ವ್ಯಕ್ತಪಡಿಸಿದ್ದರು. ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿಗಳು ಆರೋಪಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.