ರಾಮಕುಂಜ: ನಿರ್ಮಾಣ ಹಂತದ ಕಟ್ಟಡದ ಕಾಮಗಾರಿ ಪರಿಕರಗಳ ಕಳ್ಳತನಕ್ಕೆ ವಿಫಲ ಯತ್ನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ರಾಮಕುಂಜ: ರಾಮಕುಂಜ ಗ್ರಾಮ ಪಂಚಾಯತ್ ಕಚೇರಿ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ಖಾಸಗಿ ಕಟ್ಟಡವೊಂದರಲ್ಲಿ ಕಳ್ಳತನಕ್ಕೆ ಯತ್ನ ನಡೆದಿರುವ ಘಟನೆ ಆ.1ರಂದು ಬೆಳಕಿಗೆ ಬಂದಿದೆ.

 

ಕೊಯಿಲ ಗ್ರಾಮದ ಬುಡಲೂರು ನಿವಾಸಿ ರಮೇಶ್ ಎಂಬರಿಗೆ ಸೇರಿದ ನಿರ್ಮಾಣ ಹಂತದ ಕಾಂಪ್ಲೆಕ್ಸ್‌ನ ಒಂದು ಭಾಗದಲ್ಲಿರುವ ಕೋಣೆಯಲ್ಲಿ ಕಟ್ಟಡ ಕಾಮಗಾರಿಗೆ ಸಂಬಂಧಪಟ್ಟ ಪರಿಕರಗಳನ್ನು ಶೇಖರಣೆ ಮಾಡಲಾಗಿತ್ತು. ಈ ಕೋಣೆಯ ಬಾಗಿಲಿನ ಚಿಲಕ ಒಡೆದು ಕಳ್ಳತನಕ್ಕೆ ಯತ್ನ ನಡೆದಿದೆ. ಆ.೧ರಂದು ಬೆಳಿಗ್ಗೆ ಮಾಲಕ ರಮೇಶ್‌ರವರು ಸ್ಥಳಕ್ಕೆ ಬಂದಾಗ ಕಳ್ಳತನಕ್ಕೆ ಯತ್ನ ನಡೆದಿರುವುದು ಬೆಳಕಿಗೆ ಬಂದಿದೆ. ಆದರೆ ಯಾವುದೇ ವಸ್ತು ಕಳವಾಗಿಲ್ಲ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಕಡಬ ಎಎಸ್‌ಐ ಸುರೇಶ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.