HomePage_Banner
HomePage_Banner
HomePage_Banner
HomePage_Banner

ಫಿಲೋಮಿನಾ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ವೆಬಿನಾರ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಅಂತರ್ಜಾಲಗಳಲ್ಲಿ ಖಾಸಗಿ ಮಾಹಿತಿಯನ್ನು ಅಪ್‌ಲೋಡ್ ಮಾಡಿದಾಗ ಜಾಗೃತೆ ವಹಿಸಿ – ಪ್ರಣಿತಾ ಕೆ.ಎಸ್

ಪುತ್ತೂರು:ನಮ್ಮ ಖಾಸಗಿ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವ ಸಂದರ್ಭದಲ್ಲಿ ಬಹಳಷ್ಟು ಎಚ್ಚರಿಕೆ ವಹಿಸಬೇಕು. ನಮ್ಮ ಖಾಸಗಿ ಮಾಹಿತಿಯನ್ನು ಗೌಪ್ಯವಾಗಿಡದೆ ಹೋದಲ್ಲಿ ಹ್ಯಾಕರ್‌ಗಳು, ಸೈಬರ್ ಅಪರಾಧಿಗಳು ಅದನ್ನು ದುರ್ವಿನಿಯೋಗ ಮಾಡುತ್ತಾರೆಎಂದು ಬೆಂಗಳೂರಿನ ಎನ್. ಎ. ಪಿ. ಲ್ಯಾಬ್ಸ್‌ನ ಪ್ರೊಡಕ್ಟ್ ಸೆಕ್ಯುರಿಟಿ ಇಂಜಿನಿಯರ್ ಪ್ರಣಿತಾ ಕೆ ಎಸ್ ಹೇಳಿದರು.

ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಆಂಗ್ಲ ಭಾಷಾ ವಿಭಾಗ ಮತ್ತು ಗಣಕ ವಿಜ್ಞಾನ ವಿಭಾಗಗಳ ಸಹಯೋಗದಲ್ಲಿ ‘ಸೈಬರ್ ಸೆಕ್ಯುರಿಟಿ ಅಂಡ್ ಪರ್ಸನಲ್ ಡೇಟಾ ಪ್ರೊಟೆಕ್ಷನ್’ ಎಂಬ ವಿಷಯದ ಕುರಿತು ಜು.೧೪ರಂದು ಆಯೋಜಿಸಲಾದ ರಾಷ್ಟ್ರಮಟ್ಟದ ವೆಬಿನಾರ್‌ನಲ್ಲಿ ಸಂಪನ್ಮೂಲ ವ್ಯಕಿಯಾಗಿ ಭಾಗವಹಿಸಿ, ಮಾತನಾಡಿದರು. ಅಂತರ್ಜಾಲದ ಮುಖಾಂತರ ನಾವು ಮಾಡುವ ಪ್ರತಿಯೊಂದು ಕಾರ್ಯವೂ ನಮ್ಮ ಹೆಜ್ಜೆ ಗುರುತನ್ನು ಅಚ್ಚಳಿಯದೆ ಮೂಡಿಸುತ್ತದೆ. ಒಮ್ಮೆ ನಾವು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವ ಮಾಹಿತಿಯನ್ನು ಮುಂದೆ ನಾವು ಬೇಡವೆಂದು ಅಳಿಸಿದರೂ ಅದು ಜಾಲತಾಣದ ಸರ್ವರ್‌ಗಳಲ್ಲಿ ಭದ್ರವಾಗಿ ಸಂಗ್ರಹಗೊಂಡಿರುತ್ತದೆ. ನಮ್ಮ ಬ್ಯಾಂಕ್ ಖಾತೆಯ ವಿವರ, ಆಧಾರ್ ನಂಬರ್ ಮುಂತಾದ ಮಾಹಿತಿಯ ಗೌಪ್ಯತೆಯನ್ನು ಹೇಗೆ ಕಾಪಾಡುವುದು? ಯಾವೆಲ್ಲ ರೀತಿಯಲ್ಲಿ ಜನರು ಸೈಬರ್ ಅಪರಾಧಿಗಳಿಗೆ ತಮಗರಿವಿಲ್ಲದೇ ಮಾಹಿತಿ ನೀಡುತ್ತಾರೆ. ನಮ್ಮ ಮಾಹಿತಿಯ ದುರ್ಬಳಕೆ ಹೇಗೆ ನಡೆಯುತ್ತದೆ? ಮುಂತಾದ ವಿಷಯಗಳನ್ನು ಅವರು ವಿವರಿಸಿದರು.

ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥೆ ಭಾರತಿ ಎಸ್.ರೈ ಸ್ವಾಗತಿಸಿ, ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ವಿನಯಚಂದ್ರ ವಂದಿಸಿದರು. ಸಹಾಯಕ ಪ್ರಾಧ್ಯಾಪಕ ರಮೇಶ್ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.