HomePage_Banner
HomePage_Banner
HomePage_Banner
HomePage_Banner

ಹಿರೇಬಂಡಾಡಿ: ಹೊಸಗದ್ದೆ-ಅಗರಿ ಪರಿಶಿಷ್ಠ ಕಾಲೋನಿ ರಸ್ತೆ ದುರವಸ್ಥೆ – ಕೆಸರು ಗದ್ದೆಯಂತಾಗಿ ನಡೆದಾಡುವುದಕ್ಕೂ ಸಂಕಷ್ಟ…!!!

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಯಾವುದೇ ವಾಹನಗಳವರು ಬರುವುದಕ್ಕೆ ನಿರಾಕರಣೆ
  • ದೂರು ನೀಡಿದರೂ ಸ್ಪಂಧಿಸದ ಗ್ರಾಮ ಪಂಚಾಯಿತಿ-ಆರೋಪ

ಉಪ್ಪಿನಂಗಡಿ: ಹಿರೇಬಂಡಾಡಿ ಗ್ರಾಮದ ಹೊಸಗದ್ದೆ-ಅಗರಿ ಪರಿಶಿಷ್ಠ ಕಾಲೋನಿ ಸಂಪರ್ಕ ರಸ್ತೆ ಸಂಪೂರ್ಣ ಕೆಸರು ಗದ್ದೆಯಂತಾಗಿ ಮಾರ್ಪಾಡು ಹೊಂದಿದ್ದು, ನಡೆದಾಡುವುದಕ್ಕೂ ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದು ತೀರಾ ಸಂಕಷ್ಟ ಎದುರಿಸುವಂತಾಗಿದೆ ಎಂದು ಸ್ಥಳೀಯರು ಮತ್ತು ಕಾಲೋನಿ ನಿವಾಸಿಗಳು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಹಿರೇಬಂಡಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಈ ರಸ್ತೆ ಅಗರಿ ಪರಿಶಿಷ್ಠ ಜಾತಿ ಕಾಲೋನಿಗೆ ಇರುವ ಏಕೈಕ ರಸ್ತೆಯಾಗಿರುತ್ತದೆ. ಈ ರಸ್ತೆಯ ಬದಿಯಲ್ಲಿ ಚರಂಡಿ ಇಲ್ಲದೆ ಮಳೆ ನೀರು ರಸ್ತೆಯಲ್ಲೆ ಹರಿದಾಡುತ್ತಿದ್ದು, ಹೀಗಾಗಿ ರಸ್ತೆ ಸಂಪೂರ್ಣವಾಗಿ ಕೆಸರು ಗದ್ದೆಯಂತಾಗಿ ಮಾರ್ಪಾಡು ಹೊಂದಿರುವುರಿಂದಾಗಿ ಸಮಸ್ಯೆ ಕಾಡುತ್ತಿದೆ ಎಂದು ಗ್ರಾಮಸ್ಥರು ದೂರಿಕೊಂಡಿದ್ದಾರೆ.

ಕಾಲೋನಿ ಮಂದಿ ಅನಾರೋಗ್ಯಕ್ಕೆ ಒಳಗಾದರೆ ಆಟೋ ರಿಕ್ಷಾ ಸಹಿತ ಯಾವುದೇ ವಾಹನಗಳವರು ಈ ರಸ್ತೆಯಲ್ಲಿ ಬರುವುದಕ್ಕೆ ಒಪ್ಪುತ್ತಿಲ್ಲ, ಅದಾಗ್ಯೂ ತಿಂಗಳಿಗೊಮ್ಮೆ ವ್ಯವಸಾಯ ಸಹಕಾರಿ ಸಂಘದ ಸೊಸೈಟಿಗೆ ಹೋಗಿ ಅಕ್ಕಿ ತರುವುದಕ್ಕೂ ಸಮಸ್ಯೆ ಉಂಟಾಗಿದ್ದು, ಅಕ್ಕಿ ತರಬೇಕಾದರೆ ಕೊಲ-ಗಂಡಿಬಾಗಿಲು ಮೂಲಕ ಸುತ್ತು ಬಳಸಿ ಅಟೋ ರಿಕ್ಷಾಕ್ಕೆ ರೂಪಾಯಿ ೨೫೦ ಕೊಟ್ಟು ತರಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಗ್ರಾಮಸ್ಥರು ದೂರಿಕೊಂಡಿದ್ದಾರೆ.

ದುರಸ್ಥಿಯ ಮನವಿಗೆ ಸ್ಪಂಧಿಸದ ಗ್ರಾಮ ಪಂಚಾಯಿತಿ-ಬಾಬು ಅಗರಿ
ರಸ್ತೆ ದುರವಸ್ಥೆಯ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರುಗಳ ಗಮನಕ್ಕೆ ತರಲಾಗಿದೆ, ಆದರೆ ಯಾವುದೇ ರೀತಿಯ ಸ್ಪಂದನೆ ಲಭಿಸಿರುವುದಿಲ್ಲ, ಇಲ್ಲಿನ ಜನರ ಸಂಕಷ್ಟ ಹೇಳ ತೀರದಂತಾಗಿದೆ, ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿನ ಸಮಸ್ಯೆಗೆ ಪರಿಹಾರ ಕಂಡುಕೊಂಡು ರಸ್ತೆ ದುರಸ್ಥಿ ಮಾಡಿಕೊಡುವಂತೆ ಸ್ಥಳೀಯ ನಿವಾಸಿ ಬಾಬು ಅಗರಿ ಆಗ್ರಹಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.