ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿಯ ಸ್ಥಾಪನಾ ದಿನಾಚರಣೆ | ಸಾಮಾಜಿಕ ಕಳಕಳಿಯ ಸಿಎಲ್‌ಸಿ ಸಂಸ್ಥೆ ಸೇವೆ ಶ್ಲಾಘನೀಯ-ವಂ|ಪ್ರಶಾಂತ್ ಫೆರ್ನಾಂಡೀಸ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ದೇವರು ಕೊಟ್ಟ ಜೀವನವನ್ನು ಇತರರ ಒಳಿತಿಗೋಸ್ಕರ ಮುಡುಪಾಗಿಡುವ ಮೂಲಕ ಜೀವಿಸಿದಾಗ ಅದು ಅರ್ಥಪೂರ್ಣವೆನಿಸುತ್ತದೆ. ಈ ನಿಟ್ಟಿನಲ್ಲಿ ಸಿಎಲ್‌ಸಿ ಸಂಸ್ಥೆಯು ಸಂಸ್ಥೆಯ ಪ್ರೇರಕ ಸಂತರ ಹೆಸರಿನಲ್ಲಿ ಸಾಮಾಜಿಕ ಕಳಕಳಿಯ ಸೇವೆಯಲ್ಲಿ ಕಾರ್ಯಪ್ರವೃತ್ತರಾಗಿರುವುದು ಶ್ಲಾಘನೀಯ ಎಂದು ಬನ್ನೂರು ಸಂತ ಅಂತೋನಿ ಚರ್ಚ್‌ನ ಪ್ರಧಾನ ಧರ್ಮಗುರುಗಳಾದ ವಂ|ಪ್ರಶಾಂತ್ ಫೆರ್ನಾಂಡೀಸ್‌ರವರು ಹೇಳಿದರು.

ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಜು.೩೧ ರಂದು ಮಾಯಿದೆ ದೇವುಸ್ ಚರ್ಚ್ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ(ಸಿಎಲ್‌ಸಿ)ಯ ಪ್ರೇರಕ ಸಂತರಾದ ಇಗ್ನೀಶಿಯಸ್ ಲೊಯೋಲಾರವರ ೪೪ನೇ ವರ್ಷದ ಸ್ಥಾಪನಾ ದಿನಾಚರಣೆಯ ಪ್ರಯುಕ್ತ ಅವರು ಮುಖ್ಯತಿಥಿಯಾಗಿ ಮಾತನಾಡಿದರು. ಸಂಸ್ಥೆಯ ಅಭಿವೃದ್ಧಿಗೋಸ್ಕರ ಸಂಸ್ಥೆಯು ಅನೇಕ ಕನಸು ಕಾಣುತ್ತದೆ. ಅನೇಕ ಯೋಜನೆಗಳನ್ನು ಹಾಕಿಕೊಳ್ಳುತ್ತದೆ. ಆದರೆ ಅದನ್ನು ನನಸು ಮಾಡಬೇಕಾಗಿರುವುದು ಸಂಸ್ಥೆಯಲ್ಲಿನ ಸದಸ್ಯರು. ಸಮಾನಮನಸ್ಕ ಸದಸ್ಯರು ಯಾವ ಸಂಘದಲ್ಲಿದ್ದಾರೋ ಆ ಸಂಘ ಬೆಳೆಯುತ್ತದೆ ಮತ್ತು ಒಳ್ಳೆಯ ಹೆಸರು ಗಳಿಸುತ್ತದೆ ಎನ್ನುವುದಕ್ಕೆ ಸಿಎಲ್‌ಸಿ ಸಂಸ್ಥೆ ಉದಾಹರಣೆಯಾಗಿದೆ. ಸಿಎಲ್‌ಸಿ ಸಂಸ್ಥೆಯ ಸದಸ್ಯರು ತಮ್ಮ ಕುಟುಂಬಗೋಸ್ಕರ ಚಿಂತಿಸದೆ ಇತರರ ನೋವಿಗೆ, ಹಸಿವಿಗೆ ಸ್ಪಂದಿಸುವ ಕಾರ್ಯವನ್ನು ಮಾಡುತ್ತಿದೆ ಎಂದು ಹೇಳಿ ಶುಭಹಾರೈಸಿದರು.

ಅಧ್ಯಕ್ಷತೆ ವಹಿಸಿದ ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ಹಾಗೂ ಸಿಎಲ್‌ಸಿ ಸಂಸ್ಥೆಯ ಆತ್ಮೀಕ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಮಾತನಾಡಿ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಎಲ್‌ಸಿ ಸಂಸ್ಥೆಯಲ್ಲಿ ಪ್ರಾಮಾಣಿಕ ಹಾಗೂ ಸೇವಾ ಮನೋಭಾವದ ಸದಸ್ಯರಿದ್ದರಿಂದಲೇ ಅವರು ಮಾಡುವ ಪ್ರತಿಯೊಂದು ಕಾರ್ಯವು ಯಶಸ್ವಿಯಾಗುತ್ತದೆ. ಕೆಲವು ಸಂಘಗಳು ನಾಮಕಾವಸ್ಥೆಗೆ ಮಾತ್ರ ಕೆಲಸ ಮಾಡುತ್ತದೆ. ಆದರೆ ಈ ಸಿಎಲ್‌ಸಿ ಸಂಘವು ತನ್ನ ಯಾವುದೇ ಕಾರ್ಯವನ್ನು ಹಮ್ಮಿಕೊಂಡು ಕೊನೆಗೊಂಡ ಬಳಿಕ ಸಭಾಂಗಣದ ತೆರವಿಗೆ ಬೇಕಾಗುವ ಕೆಲಸ-ಕಾರ್ಯಗಳನ್ನು ಸದಸ್ಯರೇ ಮಾಡಿ ಮುಗಿಸುವುದು ಹೆಮ್ಮೆಯ ವಿಚಾರ ಎಂದರು.

ಸಿಎಲ್‌ಸಿ ಸಂಸ್ಥೆಯ ಎಜ್ಯುಕೇರ್ ಸಮಿತಿಯ ಗೌರವಾಧ್ಯಕ್ಷ ಸಿಎ ಆಲ್ವಿನ್ ರೊಡ್ರಿಗಸ್ ಮಾತನಾಡಿ, ಯೋಜನೆ ಹಾಕಿಕೊಳ್ಳುವುದು ಸುಲಭ ಆದರೆ ಯೋಜನೆಯನ್ನು ಜಾರಿಗೆ ತರುವುದು ಬಹಳ ಕಷ್ಟ. ನಾನು ಮತ್ತು ನನ್ನ ಸಹೋದರ ರೊಡ್ರಿಗಸ್ ಚಿಕನ್ಸ್‌ನ ಲ್ಯಾನ್ಸಿ ರೊಡ್ರಿಗಸ್‌ರವರು ಫಲಾನುಭವಿ ವಿದ್ಯಾರ್ಥಿಗಳಿಗೆ ನೆರವಾಗಲು ಎಂದು ಇಂತಿಷ್ಟು ಮೊತ್ತವನ್ನು ಸಿಎಲ್‌ಸಿ ಸಂಸ್ಥೆಗೆ ನೀಡುವ ಮೂಲಕ ಸಿಎಲ್‌ಸಿಯಿಂದ ಯೋಜನೆಯನ್ನು ಜಾರಿಗೆ ತರಲು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಸಿಎಲ್‌ಸಿ ಸಂಸ್ಥೆಯು ಫಲಾನುಭವಿಗಳನ್ನು ಗುರುತಿಸಿ ಅವರಿಗೆ ನೆರವಿನ ಹಸ್ತ ನೀಡುವಲ್ಲಿ ಸೈ ಎನಿಸಿಕೊಂಡಿದೆ ಎಂದರು.

ಫಿಲೋಮಿನಾ ಕಾಲೇಜಿನ ಫಿಸಿಕ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ವಂ|ಆಂಟನಿ ಪ್ರಕಾಶ್ ಮೊಂತೇರೋ, ಸಿಎಲ್‌ಸಿ ಸಂಸ್ಥೆಯ ಸ್ಥಾಪಕಾಧ್ಯಕ್ಷ ಮೌರಿಸ್ ಗೊನ್ಸಾಲ್ವಿಸ್ ಬನ್ನೂರು, ನಗರಸಭಾ ಸದಸ್ಯ ರಾಬಿನ್ ಸಾಲ್ಮರ, ಬಲ್ನಾಡು ಗ್ರಾಮ ಪಂಚಾಯತ್ ಸದಸ್ಯ ಆಂಬ್ರೋಸ್ ಡಿ’ಸೋಜ, ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಜೋಕಿಂ ಡಿ’ಸೋಜ ಬನ್ನೂರು, ಧರ್ಮಭಗಿನಿಯರು, ವಾಳೆಯ ಗುರಿಕಾರರು, ವಿವಿಧ ಸಂಘ-ಸಂಸ್ಥೆಯು ಅಧ್ಯಕ್ಷರು, ದಾನಿಗಳು, ಸಿಎಲ್‌ಸಿ ಸಂಸ್ಥೆಯ ಕುಟುಂಬಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಿಎಲ್‌ಸಿ ಅಧ್ಯಕ್ಷ ಸ್ಟ್ಯಾನಿ ಪ್ರವೀಣ್ ಮಸ್ಕರೇನ್ಹಸ್ ಸ್ವಾಗತಿಸಿ, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಎಲ್ಯಾಸ್ ಪಿಂಟೋ ವಂದಿಸಿದರು. ಕಾರ್ಯದರ್ಶಿ ಮಾರ್ಟಿನ್ ಡಿ’ಸೋಜ ವರದಿ ವಾಚಿಸಿದರು. ಹಿರಿಯ ಸದಸ್ಯ ಜೋನ್ ಪಿಂಟೋ ಕಾರ್ಯಕ್ರಮ ನಿರೂಪಿಸಿದರು.

ಸೇವೆಯೇ ಸಂಸ್ಥೆಯ ಶೃಂಗಾರ…
ಆಯಾ ಸಮುದಾಯದಲ್ಲಿ ಧರ್ಮಗುರುಗಳು ಮತ್ತು ಭಕ್ತರು ಒಂದೇ ನಾಣ್ಯದ ಎರಡು ಮುಖಗಳಿದ್ದಾರೆ. ಎರಡೂ ಒಟ್ಟಾಗಿ ಸಾಗಿದಾಗ ಸಮುದಾಯ ಬೆಳೆಯುತ್ತದೆ. ಕೇವಲ ೪೦ ಮಂದಿ ಸದಸ್ಯರಿರುವ ಈ ಸಿಎಲ್‌ಸಿ ಸಂಸ್ಥೆಯು ಸಮುದಾಯಲ್ಲಿನ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ನಿರಂತರವಾಗಿ ನೀಡುವ ಸೇವೆ ಶ್ಲಾಘನೀಯ ಮಾತ್ರವಲ್ಲದೆ ಇತರ ಸಂಘಟನೆಗಳಿಗೆ ಮೇಲ್ಪಂಕ್ತಿಯಾಗಿಯೂ ಶೋಭಿಸುತ್ತಿದೆ. ಎಲ್ಲರೂ ನಮ್ಮ ಕುಟುಂಬ ಎಂಬಂತೆ ಸೇವೆ ನೀಡುವ ಈ ಸಿಎಲ್‌ಸಿ ಸಂಸ್ಥೆಗೆ ಸೇವೆಯೇ ಸಂಸ್ಥೆಯ ಶೃಂಗಾರವಾಗಿದೆ ಮೌರಿಸ್ ಮಸ್ಕರೇನ್ಹಸ್, ಉಪಾಧ್ಯಕ್ಷರು, ಮಾಯಿದೆ ದೇವುಸ್ ಚರ್ಚ್

ಬಲಿಪೂಜೆ…
ಸಭಾ ಕಾರ್ಯಕ್ರಮದ ಮೊದಲು ಮಾಯಿದೆ ದೇವುಸ್ ಚರ್ಚ್‌ನಲ್ಲಿ ಸಿಎಲ್‌ಸಿಯ ಸ್ಥಾಪನಾ ದಿನಾಚರಣಾ ಪ್ರಯುಕ್ತ ಜರಗಿದ ದಿವ್ಯ ಬಲಿಪೂಜೆಯನ್ನು ಚರ್ಚ್‌ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ವಹಿಸಿದ್ದರು. ಸಹಾಯಕ ಧರ್ಮಗುರು ವಂ|ಕೆವಿನ್ ಲಾರೆನ್ಸ್ ಡಿ’ಸೋಜರವರು ಸಂದೇಶ ನೀಡಿದರು. ಬನ್ನೂರು ಸಂತ ಅಂತೋನಿ ಚರ್ಚ್ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್, ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ, ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ|ವಿಜಯ್ ಲೋಬೊ, ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ವಂ|ಅಶೋಕ್ ರಾಯನ್ ಕ್ರಾಸ್ತಾರವರು ಸಹಪೂಜೆಯಲ್ಲಿ ಪಾಲ್ಗೊಂಡರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.