ಉದ್ಯಮಿ ಪುಣಚ ದಿ.ದಿನೇಶ್ ರೈ ಬೈಲುಗುತ್ತು ಸ್ಮರಣಾರ್ಥ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಬೋಳೋಡಿ ಸಂದೇಶ್ ರೈಯವರಿಂದ ಕೆದಂಬಾಡಿಯಲ್ಲಿ ಆಹಾರ ಕಿಟ್ ವಿತರಣೆ
  • ಆಹಾರ ಕಿಟ್ ವಿತರಣೆ ಮೂಲಕ ನೆನಪನ್ನು ಶಾಶ್ವತವಾಗಿಸುವ ಕೆಲಸ ಶ್ಲಾಘನೀಯ: ಮಠಂದೂರು

ಪುತ್ತೂರು: ಕೋವಿಡ್ ೧೯ ಸಂಕಷ್ಟ ಕಾಲದಲ್ಲಿ ಬಹಳಷ್ಟು ಮಂದಿ ಆಹಾರ ಕಿಟ್ ವಿತರಿಸುವ ಮೂಲಕ ಬಡ ಜನರ ಕಣ್ಣೀರು ಒರೆಸುವ ಕೆಲಸವನ್ನು ಮಾಡಿದ್ದಾರೆ. ಆದರೆ ಸಂದೇಶ್ ರೈ ಬೋಳೋಡಿಯವರು ಕೋವಿಡ್‌ಗೆ ಬಲಿಯಾದ ತನ್ನ ಬಾವ ದಿನೇಶ್ ರೈಯವರ ನೆನಪಲ್ಲಿ ತನ್ನ ಗ್ರಾಮದ ಒಂದಷ್ಟು ಬಡ ಕುಟುಂಬಕ್ಕೆ ಆಹಾರ ಕಿಟ್ ವಿತರಿಸುವ ಕೆಲಸ ಮಾಡಿದ್ದು ಶ್ಲಾಘನೀಯ. ಕೋವಿಡ್‌ಗೆ ತುತ್ತಾಗಿ ಅಕಾಲಿಕವಾಗಿ ಮೃತಪಟ್ಟ ಪುಣಚದ ಉದ್ಯಮಿ ದಿನೇಶ್ ರೈಯವರ ಆತ್ಮಕ್ಕೆ ದೇವರು ಚಿರಶಾಂತಿ ಕರುಣಿಲಿ ಎಂದು ಶಾಸಕ ಸಂಜೀವ ಮಠಂದೂರುರವರು ಪ್ರಾರ್ಥಿಸಿದರು.

ಅವರು ದಿ.ದಿನೇಶ್ ರೈ ಬೈಲುಗುತ್ತುರವರ ಸ್ಮರಣಾರ್ಥ ದಿನೇಶ್ ರೈಯವರ ಬಾವ ಸಂದೇಶ್ ರೈ ಬೋಳೋಡಿಯವರ ವತಿಯಿಂದ ಇತ್ತೀಚೆಗೆ ಕೆದಂಬಾಡಿ ಗ್ರಾಪಂ ಸಭಾಂಗಣದಲ್ಲಿ ನಡೆದ ಕೆದಂಬಾಡಿ ಗ್ರಾಮದ ೫೫ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿಯವರು ಮಾತನಾಡಿ, ದಿನೇಶ್ ರೈಯವರು ತನ್ನ ಶ್ರಮದಿಂದಲೇ ಉದ್ಯಮದಲ್ಲಿ ಯಶಸ್ಸು ಸಾಧಿಸಿದವರು. ಇಂತಹ ಓರ್ವ ಉದ್ಯಮಿ ಕೋವಿಡ್‌ಗೆ ಬಲಿಯಾಗಿದ್ದು ದುರಂತ. ಅವರ ನೆನಪನ್ನು ಶಾಶ್ವತವಾಗಿಸುವ ನಿಟ್ಟಿನಲ್ಲಿ ಅವರ ಬಾವ ಸಂದೇಶ್ ರೈಯವರು ಆಹಾರ ಕಿಟ್ ನೀಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು. ಬಂಟ್ವಾಳ ತಾಲೂಕು ಕೊಳ್ನಾಡು ಜಿಪಂ ಕ್ಷೇತ್ರದ ನಿಕಟಪೂರ್ವ ಸದಸ್ಯ ಎಂ.ಎಸ್.ಮಹಮ್ಮದ್‌ರವರು ಉದ್ಯಮಿ ದಿ.ದಿನೇಶ್ ರೈಯವರು ಉದ್ಯಮದ ಬಗ್ಗೆ ಮಾತನಾಡುತ್ತಾ, ರೈಯವರ ಓರ್ವ ಶ್ರಮಜೀವಿ, ತನ್ನ ಶ್ರಮದಿಂದಲೇ ಉದ್ಯಮ ಮತ್ತು ಕೃಷಿ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದವರು ಎಂದು ಹೇಳಿದರು.

ಕೆದಂಬಾಡಿ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರರವರು ಸಂದರ್ಭೋಚಿತವಾಗಿ ಮಾತನಾಡಿ ನುಡಿನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಅಸ್ಮ, ಕೃಷ್ಣ ಕುಮಾರ್, ಕಾಂಗ್ರೆಸ್ ಮುಖಂಡರಾದ ಮನೋಹರ ರೈ ಎಂಡೆಸಾಗು, ಪುರಂದರ ರೈ ಕೋರಿಕ್ಕಾರು, ಚಾವಡಿ ಸೀತಾರಾಮ ರೈ, ಹಬೀಬುಲ್ಲಾ ಕಣ್ಣೂರು ತಿಂಗಳಾಡಿ, ಭಾಸ್ಕರ ಕೊಡಂಕೀರಿ ಮತ್ತಿತರರು ಉಪಸ್ಥಿತರಿದ್ದರು. ದಿ.ದಿನೇಶ್ ರೈ ಬೈಲುಗುತ್ತುರವರ ಮಾವ ಬೋಳೋಡಿ ಚಂದ್ರಹಾಸ ರೈಯವರು ಪ್ರಾಸ್ತಾವಿಕವಾಗಿ ಮಾತನಾಡಿ, ದಿನೇಶ್ ರೈಯವರು ಪುಣಚದಲ್ಲಿ ಸಾಯಿನಾಥ ಎಂಟರ್‌ಪ್ರೈಸಸ್ ಎಂಬ ಹಾರ್ಡ್‌ವೇರ್ ಉದ್ಯಮದೊಂದಿಗೆ ಕೃಷಿ ಕಾರ್ಯದಲ್ಲೂ ತನ್ನನ್ನು ತೊಡಗಿಸಿಕೊಂಡವರು. ಓರ್ವ ಸರಳ ಸಜ್ಜನಿಕ ವ್ಯಕ್ತಿಯಾಗಿ ಎಲ್ಲರ ಪ್ರೀತಿಯನ್ನು ಗಳಿಸಿಕೊಂಡವರಾಗಿದ್ದರು. ಅವರ ಅಗಲಿಕೆ ಇಡೀ ಗ್ರಾಮಕ್ಕೆ ಅಪಾರ ನಷ್ಟ ತಂದಿದೆ. ಅವರ ನೆನಪಲ್ಲಿ ನನ್ನ ಪುತ್ರ, ದಿನೇಶ್ ರೈಯವರ ಬಾವ ಸಂದೇಶ್ ರೈಯವರು ಪುಣಚ ಮತ್ತು ಕೆದಂಬಾಡಿ ಗ್ರಾಮದ ಬಡ ಕುಟುಂಬಕ್ಕೆ ಆಹಾರ ಕಿಟ್ ವಿತರಿಸಿದ್ದಾರೆ ಎಂದು ಹೇಳಿದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ ಸ್ವಾಗತಿಸಿದರು. ಬ್ಲಾಕ್ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷ ಮೆಲ್ವಿನ್ ಮೊಂತೆರೋ ವಂದಿಸಿದರು.’

55 ಕುಟುಂಬಕ್ಕೆ ಕಿಟ್ ವಿತರಣೆ
ಕೆದಂಬಾಡಿ ಗ್ರಾಮದ ಒಟ್ಟು ೫೫ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಮಾಡಲಾಯಿತು. ಪುಣಚದಲ್ಲಿ ೬೫ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಮಾಡಲಾಗಿದೆ. ಪುಣಚ ಮತ್ತು ಕೆದಂಬಾಡಿ ಎರಡು ಗ್ರಾಮದಲ್ಲಿ ಒಟ್ಟು ೧೨೦ ಕುಟುಂಬಗಳಿಗೆ ಕಿಟ್ ವಿತರಿಸಲಾಗಿದೆ..

ನನ್ನ ಬಾವನವರಾದ ದಿ.ದಿನೇಶ್ ರೈ ಬೈಲುಗುತ್ತುರವರು ಪುಣಚದಲ್ಲಿ ಸಾಯಿನಾಥ ಎಂಟರ್‌ಪ್ರೈಸಸ್ ಹಾರ್ಡ್‌ವೇರ್ ಉದ್ಯಮವನ್ನು ನಡೆಸುತ್ತಿದ್ದರು. ಗ್ರಾಮದಲ್ಲಿ ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿದ್ದರು. ಕೋವಿಡ್‌ನ ಅಟ್ಟಹಾಸಕ್ಕೆ ಬಲಿಯಾದ ಬಾವನವರ ಆತ್ಮಕ್ಕೆ ಶಾಂತಿ ಸಿಗಬೇಕು ಹಾಗೂ ಅವರ ಉತ್ತರ ಕ್ರಿಯಾಧಿ ಕಾರ್ಯದಲ್ಲಿ ಕೋವಿಡ್‌ನ ನಿಯಮಾವಳಿಯಂತೆ ಜನರಿಗೆ ಊಟ ಕೊಡಿಸಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಬಾವನವರ ಹೆಸರನ್ನು ಶಾಶ್ವತವಾಗಿ ನಿಟ್ಟಿನಲ್ಲಿ ಅವರ ಹೆಸರಲ್ಲಿ ಪುಣಚ ಮತ್ತು ಕೆದಂಬಾಡಿ ಗ್ರಾಮದ ಒಂದಷ್ಟು ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲು ಪುಟ್ಟ ಕಾರ್ಯ ಮಾಡಿದ್ದೇವೆ – ಸಂದೇಶ್ ರೈ ಬೋಳೋಡಿ, ದಿ.ದಿನೇಶ್ ರೈಯವರ ಬಾವ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.