ವಿಟ್ಲಪಡ್ನೂರು : 5 ಕೋಟಿ 35 ಲಕ್ಷ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ, 94 ಸಿ.ಹಕ್ಕುಪತ್ರ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಹಂತ ಹಂತವಾಗಿ ಗ್ರಾಮವನ್ನು ಅಭಿವೃದ್ದಿ ಪಡಿಸುತ್ತೇನೆ: ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು

ವಿಟ್ಲ: ಗ್ರಾಮದ ಪ್ರತಿಯೊಂದು ಮನವಿಗಳನ್ನು ಸ್ವೀಕರಿಸಿ ಹಂತಹಂತವಾಗಿ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತೇನೆ, ಈ ಬಗ್ಗೆ ಯಾವುದೇ ಸಂಶಯಬೇಡ  ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ರವರು ಹೇಳಿದರು.

 
ಅವರು ಆ.2ರಂದು ವಿಟ್ಲಪಡ್ನೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಒಟ್ಟು 5ಕೋಟಿ 35 ಲಕ್ಷ ರೂಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿ ಗಳ ಉದ್ಘಾಟಿಸಿದ ಬಳಿಕ ಅವರು ವಿಟ್ಲ ಪಡ್ನೂರು ಗ್ರಾ.ಪಂ.ನ ಸಭಾಂಗಣದಲ್ಲಿ 94 ಸಿ.ಹಕ್ಕುಪತ್ರ ವಿತರಿಸಿ ಮಾತನಾಡಿದರು.

ಶಾಸಕನಾಗಿ ನನ್ನ ಕ್ಷೇತ್ರದ ಪ್ರತಿಯೊಬ್ಬ ಪ್ರಜೆಯ ಕ್ಷೇಮವನ್ನು ಕಾಯುವುದು ನನ್ನ ಧರ್ಮವಾಗಿದೆ. ಕ್ಷೇತ್ರದ ಜನರಿಗೆ ಯಾವುದೇ ಚ್ಯುತಿ ಬಾರದ ರೀತಿಯಲ್ಲಿ ರಾಜ ಧರ್ಮ ನ್ನು ಪಾಲಿಸಿಕೊಂಡು ಪ್ರಾಮಾಣಿಕವಾಗಿ ಅಭಿವೃದ್ಧಿ ಕಾರ್ಯ ಮಾಡುತ್ತೇನೆ ಎಂದು ಅವರು ಹೇಳಿದರು.  ಕ್ಷೇತ್ರದ ಅಭಿವೃದ್ದಿಯ ಜೊತೆ ಶಾಂತಿ , ನೆಮ್ಮದಿಯ ಹಾಗೂ ವಿಶ್ವಾಸ ಪ್ರೀತಿಯ ಜೀವನವನ್ನು  ಮಾಡಲು ಅವಕಾಶ ಮಾಡಿಕೊಡುವುದೇ ನನ್ನ ಗುರಿಯಾಗಿದೆ. ಸಾವಿರಕ್ಕೂ ಅಧಿಕ ರಸ್ತೆಗಳ ಕಾಮಗಾರಿ ಮುಗಿದಿದ್ದು ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ಸರಕಾರ ಅನುದಾನವನ್ನು ನೀಡುತ್ತಿದೆ ಎಂದರು. ಬಹಳಷ್ಟು ಸಂತೋಷದಿಂದ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಹಲವಾರು ವರ್ಷಗಳಿಂದ ಮನೆಕಟ್ಟಿ ಹಕ್ಕುಪತ್ರ ಪಡೆಯದೆ ಕತ್ತಲಲ್ಲಿ ಬದುಕು ಸಾಗಿಸುತ್ತಿದ್ದ ಕುಟುಂಬಗಳಿಗೆ ಅರಣ್ಯ ಇಲಾಖೆಯ ಸಮಸ್ಯೆಗಳನ್ನು ಕಾನೂನಾತ್ಮಕವಾಗಿ ಬಗೆಹರಿಸಿ ಹಕ್ಕುಪತ್ರ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಅವರು ಹೇಳಿದರು.  ಇನ್ನು ಉಳಿದಿರುವ ಎಲ್ಲಾ ಫಲಾನುಭವಿಗಳಿಗೆ ಸಮಸ್ಯೆ ಬಗೆಹರಿಸಿ ಹಕ್ಕುಪತ್ರವನ್ನು ನೀಡುತ್ತೇನೆ ಎಂಬ ಭರವಸೆ ನೀಡಿದರು. ಕ್ಷೇತ್ರದ ಪ್ರತಿಯೊಬ್ಬರ ಋಣ ಪ್ರೀತಿ ಇದೆ. ಎಲ್ಲವನ್ನು ತಿಳಿದುಕೊಂಡು ಆಭಿವೃದ್ದಿ ಕಾರ್ಯಗಳನ್ನು ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.   ತಾಲೂಕಿನಲ್ಲಿ ಎರಡು ಆಕ್ಸಿಜನ್ ಘಟಕ ಹಾಗೂ ಸರಕಾರಿ ಆಸ್ಪತ್ರೆಯಲ್ಲಿ ಸಂಪೂರ್ಣ ವ್ಯವಸ್ಥೆ ಗಳನ್ನು ಅಳವಡಿಸಿಲಾಗಿದೆ ಎಂದರು.

ವಿಟ್ಲಪಡ್ನೂರು  ಗ್ರಾ.ಪಂ.ಅಧ್ಯಕ್ಷೆ ರೇಶ್ಮಾಶಂಕರಿ ಬಳಿಪಗುಳಿ ಕಾರ್ಯಕ್ರಮ ದ ಅಧ್ಯಕ್ಷ ತೆ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ನಾಗೇಶ್ ಶೆಟ್ಟಿ, ಮಾಜಿ ಅಧ್ಯಕ್ಷ ರವೀಶ್ ಶೆಟ್ಟಿ ಕರ್ಕಳ, ಮಾಜಿ ತಾ.ಪಂ.ಸದಸ್ಯರಾದ ಧರ್ಮಾವತಿ ಗೌಡ,  ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಾದವಮಾವೆ, ಎ.ಪಿ.ಎಂ.ಸಿ.ಅಧ್ಯಕ್ಷ ನೇಮಿರಾಜ್ ರೈ, ಗ್ರಾ.ಪಂ.ಸದಸ್ಯರಾದ ಜಯಂತ್, ಶರೀಫ, ಅನಿತಾ ಗೌಡ, ಪ್ರೇಮಲತಾ, ಹರಿಕಿಶೋರ್, ಜಯಭಾರತಿ, ರೇಖಾ,  ಜಯಲಕ್ಮೀ, ಸಂದೇಶ್ ಶೆಟ್ಟಿ, ಮೈಮುದ್, ಅವ್ವಮ್ಮ, ನಬೀಶಾ , ಅಮಿತಾ, ಹರ್ಷಾದ್,  ಪ್ರಮುಖರಾದ ಪುಷ್ಪರಾಜ ಚೌಟ, ಅಭಿಷೇಕ್ ರೈ , ಅರವಿಂದ ರೈ, ವಿನೀತ್ ಶೆಟ್ಟಿ ಪೆರಾಜೆ, ಉಮೇಶ್ ಶೆಟ್ಟಿ, ಸುಂದರಶೆಟ್ಟಿ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಪ್ರಸನ್ನ , ಜಿ.ಪಂ.ಇಂಜಿನಿಯರ್ ನಾಗೇಶ್ ,  ಗ್ರಾ.ಪಂ.ಪಿಡಿಒ ಸುಜಯ,ಗ್ರಾಮ ಕರಣೀಕೆ ವೈಶಾಲಿ ಮೊದಲಾದವರು ಉಪಸ್ಥಿತರಿದ್ದರು.

ಮಾಜಿ ಅಧ್ಯಕ್ಷ ರವೀಶ್ ಶೆಟ್ಟಿ ಕರ್ಕಳ ಸ್ವಾಗತಿಸಿದರು. ಗಣೇಶ್ ರೈ ಬಾರೆಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

  • ಉದ್ಘಾಟನೆ ಗೊಂಡ  ಕಾಮಗಾರಿಗಳ ವಿವರ
  • 3 ಕೋಟಿ ರೂಪಾಯಿ ವೆಚ್ಚದಲ್ಲಿ ಕಡುಂಬು – ಅನಿಲಕಟ್ಟೆ – ಪೂರ್ಲಪಾಡ್ಡಿ ಕಾಂಕ್ರೀಟ್ ರಸ್ತೆ ಉದ್ಘಾಟನೆ
  • 2 ಕೋಟಿ ರೂಪಾಯಿ ವೆಚ್ಚದಲ್ಲಿ ಎರ್ಮೆನಿಲೆ ಸೇತುವೆ ಹಾಗೂ ಕಿಂಡಿಅಣೆಕಟ್ಟು ನಿರ್ಮಾಣದ ಉದ್ಘಾಟನೆ
  • 10 ಲಕ್ಷ ರೂಪಾಯಿ ವೆಚ್ಚದಲ್ಲಿ ಕೋಡಪದವು – ಕುಕ್ಕಿಲ  ರಸ್ತೆ ಡಾಮರೀಕರಣದ ಉದ್ಘಾಟನೆ
  • 25  ಲಕ್ಷ ರೂಪಾಯಿ ವೆಚ್ಚದಲ್ಲಿ ಕೋಡಪದವು – ದಿವಾಣ – ಮಜಿ ಕಾಂಕ್ರೀಟ್  ರಸ್ತೆ ಉದ್ಘಾಟನೆ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.