ಪುತ್ತೂರಿಗೆ ಕೋಟಿ ಕೋಟಿ ಅನುದಾನ – ಶಾಸಕ ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೇಂದ್ರ ಮತ್ತು ಕರ್ನಾಟಕ ಸರಕಾರ ಪುತ್ತೂರಿಗೆ ಕೋಟಿ ಕೋಟಿ ಅನುದಾನ ಕೊಡುತ್ತಿದೆ. ಕರ್ನಾಟಕ ಸರಕಾರದ ಯಡಿಯೂರಪ್ಪ ಅವರ 2ನೇ ವರ್ಷದ ಕೊನೆಯಲ್ಲಿ ನಮಗೆ ರೂ. 92.11 ಕೋಟಿ ಅಭಿವೃದ್ಧಿ ಅನುದಾನ ಈ ಆರ್ಥಿಕ ವರ್ಷದಲ್ಲಿ ಮಂಜೂರುಗಳಿಸಿದ್ದಾರೆ. ಮುಂದಿನ ತಿಂಗಳಲ್ಲಿ ಕಾರ್ಯಗಳು ಅನುಷ್ಠಾನವಾಗಲಿದೆ. ಶ್ರಾವಣ ಮಾಸದಲ್ಲಿ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಲಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.

ಅವರು ಪುತ್ತೂರು ಬಿಜೆಪಿ ಕಚೇರಿಯಲ್ಲಿ ಆ.2ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ 2ನೇ ವರ್ಷದ ಅವಧಿಯಲ್ಲಿ ಪುತ್ತೂರಿನ ಸರ್ವಾಂಗೀನ ಅಭಿವೃದ್ಧಿಗೆ ಸಹಕರಿಸಿದಕ್ಕೆ ಅಭಿನಂದನೆ ಸಲ್ಲಿಸಿದ ಅವರು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮೂಲಭೂತವಾಗಿ ರಸ್ತೆ, ಕುಡಿಯುವ ನೀರು, ಸಮಾಜದ ಕಟ್ಟಕಡೆಯ ವ್ಯಕ್ತಿಗೆ, ಕಾಲೋನಿಗಳಿಗೆ ಒತ್ತು ಕೊಟ್ಟು ಅನುದಾನವನ್ನು ವಿನಿಯೋಗ ಮಾಡುತ್ತಿದ್ದೇವೆ.

ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಪುತ್ತೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಇನ್ನಷ್ಟು ಅನುದಾನ ಮಂಜೂರು ಮಾಡುವ ಭರವಸೆ ನೀಡಿದ್ದಾರೆ. ವಿಶೇಷ ಮಂಜೂರಾತಿ ಕಾರ್ಯಕ್ರಮದಡಿ ಗ್ರಾಮೀಣ ಅಭಿವೃದ್ದಿ ಇಲಾಖೆಯ ಮೂಲಕ ಗ್ರಾಮೀಣ ರಸ್ತೆಗಳ ಸೇತುವೆ ಮತ್ತು ಕಾಂಕ್ರೀಟಿಕರಣ ಹಾಗು ಡಾಮರೀಕರಣ ರಸ್ತೆಗಾಗಿ ರೂ. 18 ಕೋಟಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗಾಗಿ ಇರುವ ಮುಖ್ಯರಸ್ತೆ ಸಡಕ್ ರಸ್ತೆಯಲ್ಲಿ 12 ಕಿ.ಮೀ ರಸ್ತೆ ಅಭಿವೃದ್ಧಿಗೆ ರೂ. 10 ಕೋಟಿ, ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಪುತ್ತೂರು ವಿಧಾನಸಭಾಕ್ಷೇತ್ರಕ್ಕೆ ರೂ. 1.46ಲಕ್ಷ, ಗ್ರಾಮ ಬಂಧು ಯೋಜನೆಯಡಿ 22 ಕಾಲು ಸಂಕ ರಚನೆಗಾಗಿ ರೂ. 4 ಕೋಟಿ, ಮಳೆಹಾನಿ ಅನುದಾನದಡಿ 20 ರಸ್ತೆ ಅಭಿವೃದ್ಧಿಗಾಗಿ ಒಟ್ಟು ರೂ. 1 ಕೋಟಿ, ಕೇಂದ್ರ ಸರಕಾರ ಕೊಡಮಾಡಿದ 15ನೇ ಹಣಕಾಸು ಯೋಜನೆಯಡಿಯಲ್ಲಿ ತಾಲೂಕಿನಲ್ಲಿ ರೂ. 1.54 ಕೋಟಿಯಲ್ಲಿ ಶಾಲಾ ಕಟ್ಟಡ, ಹೈಮಾಸ್ಟ್, ಕುಡಿಯುವ ನೀರು ವಿವಿಧ ಯೋಜನೆ ಪುತ್ತೂರು ಮತ್ತು ಬಂಟ್ವಾಳ ತಾಲೂಕಿನ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಅನುದಾನ ಹಂಚಿಕೆ ಆಗಿದೆ. ಜಿಲ್ಲಾ ಪಂಚಾಯತ್ ರಸ್ತೆ ಅಭಿವೃದ್ಧಿಗಾಗಿ ರೂ. ರೂ.3 ಕೋಟಿ, ಕೆದಂಬಾಡಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ರೂ. 5 ಕೋಟಿ, ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ಅಭಿವೃದ್ಧಿಗಾಗಿ ರೂ. 2 ಕೋಟಿ ಅನುದಾನ ಮಂಜೂರಾಗಿದ್ದು, ಅಲ್ಲಿ 11 ಕೊಠಡಿಗಳು ತೆರೆಯಲಾಗುವುದು. ವಿಧಾನಸಭಾ ಕ್ಷೇತ್ರದ 102 ಕೊರಗ ಕುಟುಂಬಗಳ ಅಭಿವೃದ್ಧಿಗಾಗಿ ರೂ. 2.55 ಕೋಟಿ, ಪ್ರಗತಿ ಕೋಲೊನಿಗಳ ರಸ್ತೆ ಕಾಂಕ್ರೀಟಿಕರಣ ಅಭಿವೃದ್ಧಿಗಾಗಿ ರೂ.2.60 ಕೋಟಿ, ಜಲಜೀವನ್ ಮಿಶನ್ ಯೋಜನೆಯಡಿ ಪ್ರತಿ ಮನೆ ಮನೆಗೆ ಗಂಗೆ ರೂ. 40.92 ಕೋಟಿ ಅನುದಾನ ಮಂಜೂರಾಗಿದೆ ಎಂದು ವಿವರಿಸಿದರು.

ಮೂರುನಾಲ್ಕು ವರ್ಷದಿಂದ ಬಾಕಿಯಾದ ವಸತಿಯೋಜನೆಗೆ ಕಾಯಕಲ್ಪ:
ರಾಜೀವ ಗಾಂಧಿ ವಸತಿ ನಿಗಮದಿಂದ ಸುಮಾರು ಮೂರೂನಾಲ್ಕು ವರ್ಷಗಳಿಂದ ಮನೆಗಳು ಬಂದಿಲ್ಲವಾಗಿತ್ತು. ಈ ಭಾರಿ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಒಟ್ಟು 1260 ಆಶ್ರಯ ಮನೆಗಳು ಮಂಜೂರಾಗಿದ್ದು ಪ್ರತೀ ಗ್ರಾಮ ಪಂಚಾಯತ್‌ಗಳಿಗೆ ತಲಾ 35 ಮನೆಗಳಂತೆ ಮಂಜೂರು ಮಾಡಲಾಗುವುದು. ಈಗಾಗಲೆ ಪಿಡಿಒ ಮೂಲಕ ವಸತಿಗೆ ಪಟ್ಟಿ ರಚನೆ ಮಾಡಲಾಗಿದೆ ಎಂದು ಶಾಸಕರು ತಿಳಿಸಿದರು.

ವಿಶೇಷ ಅನುದಾನದಡಿ ನಗರಸಭೆ ನೂತನ ಕಚೇರಿ:
ಪುತ್ತೂರು ನಗರಸಭಾ ನೂತನ ಕಚೇರಿಯ ಕಾಮಗಾರಿಗಾಗಿ ಒಟ್ಟು ರೂ. ೧೪ ಕೋಟಿ ಖರ್ಚಾಗಲಿದ್ದು ನಗರಸಭೆಯ ಬಳಿ ರೂ. ೪ಕೋಟಿ ಅನುದಾನವಿದೆ. ಉಳಿದ ರೂ. ೧೦ ಕೋಟಿಯನ್ನು ವಿಶೇಷ ಅನುದಾನದಡಿ ಮಂಜೂರುಗೊಳಿಸಲಾಗುವುದು. ಈ ಕುರಿತು ಜಿಲ್ಲಾಧಿಕಾರಿಗಳು ಒಂದೇ ಬಾರಿ ಅನುಮತಿ ಕೊಡುವ ನಿಟ್ಟಿನಲ್ಲಿ ನಗರಸಭೆಯಿಂದ ಬ್ಯಾಂಕ್ ಸಾಲ ಮೂಲಕ ಕಾಮಗಾರಿಗಳನ್ನು ನಡೆಸಲಾಗುವುದು ಎಂದು ಅವರಿಗೆ ತಿಳಿಸಲಾಗಿತ್ತು. ಮುಂದೆ ವಿಶೇಷ ಅನುದಾನ ಮಂಜೂರುಗೊಂಡರೆ ಸಾಲ ಮಾಡುವ ಅಗತ್ಯವಿರುವುದಿಲ್ಲ ಎಂದು ಶಾಸಕರು ತಿಳಿಸಿದರು.

.ಕ. ಜಿಲ್ಲೆಗೆ ೪ ರೈತ ಸಂಪರ್ಕ ಕೇಂದ್ರಗಳು ಮಂಜೂರಾಗಿದ್ದು ಈ ಪೈಕಿ ೩ ಕೇಂದ್ರಗಳು ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಮಂಜೂರುಗೊಂಡಿವೆ. ತಲಾ ರೂ. ೫೦ ಲಕ್ಷ ವೆಚ್ಚದಲ್ಲಿ ಉಪ್ಪಿನಂಗಡಿ, ಪುತ್ತೂರು, ವಿಟ್ಲಗಳಲ್ಲಿ ರೈತ ಸಂಪರ್ಕ ಕೇಂದ್ರಗಳು ನಿರ್ಮಾಣಗೊಳ್ಳಲಿವೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಪಶ್ಚಿಮ ವಾಹಿನಿ ಯೋಜನೆಗೆ ಸಂಬಂಧಿಸಿದಂತೆ ರೂ. ೫೦ ಕೋಟಿಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ರೂ. ೪೦ ಕೋಟಿ ಮಂಜೂರಾಗಿದೆ ಎಂದು ವಿವರಿಸಿದರು.

ರೈಲ್ವೇ ಅಂಡರ್‌ಪಾಸ್‌ಗೆ ಕೇಂದ್ರ ಸಚಿವರ ಭೇಟಿ
ಪುತ್ತೂರು ಎಪಿಎಂಸಿ ರೈಲ್ವೇ ಅಂಡರ್‌ಪಾಸ್ ಯೋಜನೆಗೆ ಹೆಚ್‌ಎಂಆರ್‌ಡಿಸಿಯವರು ಹಣಕಾಸಿನ ಸಮಸ್ಯೆ ಇದೆ. ಹುಬ್ಬಳಿ ರೈಲ್ವೇಗೆ ಮಾತನಾಡಲು ಹೇಳಿದ್ದರು. ಹೀಗೆ ಮುಂದುವರಿಯುತ್ತಿದ್ದಂತೆ ನಾವು ಸಂಸದರಾದ ನಳಿನ್ ಕುಮಾರ್ ಕಟೀಲ್, ಡಿ.ವಿ.ಸದಾನಂದ ಗೌಡರಲ್ಲಿ ಮಾತನಾಡಿದಾಗ ಕೇಂದ್ರ ರೈಲ್ವೇ ಸಚಿವರಲ್ಲೇ ಮಾತುಕತೆ ನಡೆಸಲಿದ್ದೇವೆ. ನಾನು ಮತ್ತು ಎಪಿಎಂಸಿ ಅಧ್ಯಕ್ಷರು ಅತಿ ಶೀಘ್ರದಲ್ಲಿ ದೆಹಲಿಗೆ ತೆರಳಿದ್ದೇವೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ತಾ.ಪಂ ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪ್ರಧಾನ ಕಾರ್ಯದರ್ಶಿಗಳಾದ ನಿತೀಶ್ ಶಾಂತಿವನ, ಜಯಶ್ರೀ ಎಸ್ ಶೆಟ್ಟಿ, ಯುವರಾಜ್ ಪೆರಿಯತ್ತೋಡಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.