ಮೊಟ್ಟೆತ್ತಡ್ಕ: ಪಾಳು ಬಿದ್ದ ಅಂಬೇಡ್ಕರ್ ಭವನ ಕಟ್ಟಡವನ್ನು ದುರಸ್ತಿಗೊಳಿಸಲು ಆಗ್ರಹಿಸಿ ಎಸ್.ಡಿ.ಪಿ.ಐನಿಂದ ನಗರಸಭೆಗೆ ಮನವಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮೊಟ್ಟೆತ್ತಡ್ಕದಲ್ಲಿರುವ ಅಂಬೇಡ್ಕರ್ ಭವನ ಕಟ್ಟಡ ಕುಸಿದು ಬೀಳುವ ಸ್ಥಿತಿಯಲ್ಲಿದ್ದು ನಾದುರಸ್ತಿಯಲ್ಲಿರುವ ಕಟ್ಟಡವನ್ನು ನಗರಸಭೆ ವತಿಯಿಂದ ಕೂಡಲೇ ದುರಸ್ತಿಗೊಳಿಸುವಂತೆ ಆಗ್ರಹಿಸಿ ಎಸ್.ಡಿ.ಪಿ.ಐ ಪುತ್ತೂರು ನಗರ ಸಮಿತಿ ಹಾಗೂ ಮೊಟ್ಟೆತ್ತಡ್ಕ ಬೂತ್ ಸಮಿತಿ ವತಿಯಿಂದ ಪುತ್ತೂರು ನಗರಸಭೆಗೆ ಪೌರಾಯುಕ್ತರಿಗೆ ಆ.2ರಂದು ಮನವಿ ಸಲ್ಲಿಸಿದ್ದಾರೆ.

ಕಟ್ಟಡದ ಹಂಚುಗಳು ಮುರಿದು ಬಿದ್ದಿದ್ದು ಕಟ್ಟಡದ ಒಳಗಡೆ ಯಾವುದೇ ಸ್ವಚ್ಛತೆ ಇಲ್ಲದೆ ದುರ್ವಾಸನೆ ಬೀರುತ್ತಿದೆ. ಹಾಗಾಗಿ ನಗರಸಭೆ ವತಿಯಿಂದ ಅಂಬೇಡ್ಕರ್ ಭವನ ಕಟ್ಟಡವನ್ನು ದುರಸ್ತಿಗೊಳಿಸಬೇಕು, ಮನವಿಗೆ ಸ್ಪಂದನೆ ದೊರೆಯದೇ ಇದ್ದಲ್ಲಿ ಅಂಬೇಡ್ಕರ್ ಭವನd  ಮುಂಭಾಗದಲ್ಲಿ ಪಕ್ಷದ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ಎಸ್.ಡಿ.ಪಿ.ಐ ಪುತ್ತೂರು ನಗರ ಸಮಿತಿ ಅಧ್ಯಕ್ಷ ಯಹ್ಯಾ ಕೂರ್ನಡ್ಕ, ಕೂರ್ನಡ್ಕ ವಾರ್ಡ್ ಕಾರ್ಯದರ್ಶಿ ಹಾರಿಸ್ ಪಟಾನ್, ಮೊಟ್ಟೆತ್ತಡ್ಕ ಬೂತ್ ಸಮಿತಿ ಅಧ್ಯಕ್ಷ ನಝೀರ್ ಮೊಟ್ಟೆತ್ತಡ್ಕ, ಕೋಶಾಧಿಕಾರಿ ಬದ್ರುದ್ದೀನ್, ಸದಸ್ಯ ಆಸಿಫ್ ಲೆಫ್ಟ್ ಮನವಿ ನೀಡುವ ನಿಯೋಗದಲ್ಲಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.