HomePage_Banner
HomePage_Banner
HomePage_Banner
HomePage_Banner

ಸಂಸ್ಕಾರಭರಿತ & ಗುಣಮಟ್ಟದ ಶಿಕ್ಷಣಕ್ಕೆ ಹೆಸರುಮಾಡಿರುವ ಅಂಬಿಕಾ ಪಿಯು ಕಾಲೇಜು – ಆಧುನಿಕ ಶಿಕ್ಷಣದೊಂದಿಗೆ ಭಾರತೀಯ ಪರಂಪರೆ ಹಾಗೂ ಮೌಲ್ಯಗಳ ಪರಿಚಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: 2019-20ರಲ್ಲಿ ಶೇಕಡಾ 100 ಫಲಿತಾಂಶ, 2020-21ರಲ್ಲಿ 17 ಮಂದಿ ವಿದ್ಯಾರ್ಥಿಗಳಿಗೆ ಆರುನೂರಕ್ಕೆ ಆರುನೂರು ಅಂಕ, ಪರೀಕ್ಷೆ ಬರೆದ 288 ಜನ ವಿದ್ಯಾರ್ಥಿಗಳಲ್ಲಿ 198 ಜನಕ್ಕೆ ಡಿಸ್ಟಿಂಕ್ಷನ್, ಕಳದೆದ ಮೂರು ವರ್ಷಗಳಲ್ಲಿ ಒಂದು ಸಾವಿರ ರಾಂಕ್ ಒಳಗಡೆ ಸುಮಾರು 65 ಮಂದಿ ವಿದ್ಯಾರ್ಥಿಗಳಿಗೆ ಸ್ಥಾನ… ಹೀಗೆ ದಕ್ಷಿಣ ಕನ್ನಡದ ಪುತ್ತೂರಿನಲ್ಲಿರುವ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ಹಾಗೂ ವಸತಿಯುತ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ಸಾಧನೆಯ ಸಾಲು ಮುಂದುವರಿಯುತ್ತದೆ.

ಈ ಶಿಕ್ಷಣ ಸಂಸ್ಥೆಯಲ್ಲಿ ತರಗತಿ ಆರಂಭಗೊಳ್ಳುವುದಕ್ಕೆ ಮೊದಲು ಯೋಗಾಭ್ಯಾಸ ನಡೆಯುತ್ತದೆ. ಸೂರ್ಯನಮಸ್ಕಾರ, ಧ್ಯಾನ, ಪ್ರಾಣಾಯಾಮ ಇಲ್ಲಿನ ನಿತ್ಯ ಕಾಯಕ. ಇದರ ಜತೆಗೆ ದೇಶದ ಔನ್ನತ್ಯ, ದೇಶದ ಕುರಿತು ಹೆಮ್ಮೆ ಪಡಬಹುದಾದ ನೂರಾರು ವಿಷಯಗಳು, ದೇಶ ಕಂಡ ಮಹಾನ್ ವ್ಯಕ್ತಿಗಳು ಈ ಎಲ್ಲ ಸಂಗತಿಗಳ ಬಗೆಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಗುತ್ತದೆ. ನಮ್ಮ ದೇಸೀಯವಾದ ಆಚಾರ ವಿಚಾರಗಳನ್ನು ಹೇಳಿಕೊಡಲಾಗುತ್ತದೆ. ಶಿವರಾತ್ರಿ, ರಾಮನವಮಿ, ದೀಪಾವಳಿ, ಯುಗಾದಿಯೇ ಮೊದಲಾದ ನಮ್ಮ ಹಬ್ಬಗಳನ್ನು ವೈಭವದಿಂದ ಆಚರಿಸಲಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಆದ್ಯತೆ ನೀಡಲಾಗುತ್ತದೆ. ಗುಣಮಟ್ಟಕ್ಕೆ ಇನ್ನೊಂದು ಹೆಸರಾಗಿರುವ ಅಂಬಿಕಾ ಸಂಸ್ಥೆಗಳ ಆವರಣದಲ್ಲಿ ಒಂದು ಸಿಬಿಎಸ್‌ಇ ವಿದ್ಯಾಲಯ, ಎರಡು ಪಿಯು ಶಿಕ್ಷಣ ಸಂಸ್ಥೆಗಳು ಹಾಗೂ ಒಂದು ಪದವಿ ಕಾಲೇಜು ಕಾರ್ಯ ನಿರ್ವಹಿಸುತ್ತಿದ್ದು ವಿದ್ಯಾರ್ಥಿಗಳ ಕನಸನ್ನು ನನಸಾಗಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿವೆ.

ಪಿಯು ಶಿಕ್ಷಣ ಕ್ರಾಂತಿ : ನಟ್ಟೋಜ ಫೌಂಡೇಶನ್ ಟ್ರಸ್ಟ್ ಮೊದಲಿಗೆ ಆರಂಭಿಸಿದ್ದು ಪಿಯು ಶಿಕ್ಷಣವನ್ನು. ಭಾರತೀಯ ಸಂಸ್ಕಾರ, ದೇಶಪ್ರೇಮದ ಜತೆಗೆ ಆಧುನಿಕ ಶಿಕ್ಷಣದ ಕಲ್ಪನೆಯಲ್ಲಿ ಅಡಿಯಿಟ್ಟ ಪಿಯು ಶಿಕ್ಷಣ ಇಡಿಯ ರಾಜ್ಯದಲ್ಲೇ ಇಂದು ಹೆಸರುವಾಸಿಯಾಗಿದೆ. ದೈನಂದಿನ ಓಡಾಟ ನಡೆಸುವವರಿಗಾಗಿ ಹಾಗೂ ಹಾಸ್ಟೆಲಲ್ಲಿ ಉಳಿದು ಅಧ್ಯಯನ ನಡೆಸುವವರಿಗಾಗಿ ಪ್ರತ್ಯೇಕ ಪ್ರತ್ಯೇಕವಾಗಿ ಎರಡು ಪಿಯು ಕಾಲೇಜುಗಳನ್ನು ಆರಂಭಿಸಿದ್ದು ನಟ್ಟೋಜ ಫೌಂಡೇಶನ್ ಟ್ರಸ್ಟ್‌ನ ಹೆಚ್ಚುಗಾರಿಕೆ.

ಅಂಬಿಕಾ ಪಿಯು ಸಂಸ್ಥೆಗಳು ಪ್ರತಿ ವರ್ಷ ಜೆಇಇ, ನೀಟ್ ಹಾಗೂ ಸಿಇಟಿ ಪರೀಕ್ಷೆಯಲ್ಲಿ ಅನೇಕ ರ್‍ಯಾಂಕ್‌ಗಳನ್ನು ತನ್ನದಾಗಿಸಿಕೊಳ್ಳುತ್ತಿವೆ. ಅತ್ಯುತ್ತಮ ಶಿಕ್ಷಕರಿಂದ ನಿಗದಿತ ಶಿಕ್ಷಣ ಒದಗಿಸುತ್ತಿರುವುದಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಿಂದ ತಜ್ಞರು ಆಗಮಿಸಿ ಜೆಇಇ, ನೀಟ್ ನಂತಹ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿದ್ದಾರೆ. ದೇಶದ ಪ್ರತಿಷ್ಟಿತ ಸಂಸ್ಥೆಯಾದ ಆಕಾಶ್ ಕೋಚಿಂಗ್ ಇನ್‌ಸ್ಟಿಟ್ಯೂಟ್ ಜತೆಗೆ ಶೈಕ್ಷಣಿಕ ತರಬೇತಿ ಒಪ್ಪಂದ ಹೊಂದಿರುವ ಅಂಬಿಕಾ ಪಿಯು ಸಂಸ್ಥೆಗಳು ಇಂದು ಆಕಾಶ್ ವತಿಯಿಂದಲೂ ಕೋಚಿಂಗ್ ಒದಗಿಸಿಕೊಟ್ಟು ವಿದ್ಯಾರ್ಥಿಗಳ ರ್‍ಯಾಂಕಿಂಗ್ ಉತ್ತಮವಾಗುವಲ್ಲಿ ಶ್ರಮಿಸುತ್ತಿವೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಸುಮಾರು ಇಪ್ಪತ್ತಕ್ಕೂ ಅಧಿಕ ಮಂದಿ ಜೆಇಇ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವುದು, ಹಾಗೆಯೇ ಹದಿನೈದಕ್ಕೂ ಮಿಕ್ಕ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ತೇರ್ಗಡೆಗೊಂಡಿರುವುದು ಅಂಬಿಕಾ ಶಿಕ್ಷಣ ಸಂಸ್ಥೆಯ ಮುಕುಟಕ್ಕೇರಿದ ಹೆಮ್ಮೆಯ ಗರಿಗಳು.

ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳ ಬಗೆಗೆ ವಿಶೇಷ ನಿಗಾವಿರಿಸಿ ಅವರನ್ನು ಅತ್ಯುತ್ತಮ ಅಂಕಗಳಿಸುವಂತೆ ಮಾಡುತ್ತಿರುವುದು ಸಂಸ್ಥೆಯ ವಿಶೇಷತೆಯೆನಿಸಿದೆ. ಪ್ರಥಮ ಪಿಯುಸಿಯಿಂದ ದ್ವಿತೀಯ ಪಿಯುಸಿಗೆ ಬರುವ ಹೊತ್ತಿಗೆ ನಡೆಸುವ ಬ್ರಿಡ್ಜ್ ಕೋರ್ಸ್, ಜೆಇಇ, ನೀಟ್, ಸಿಇಟಿಗೆ ಸಂಬಂಧಿಸಿದಂತೆ ಹಿಂದಿನ ಪರೀಕ್ಷೆಗಳನ್ನು ಆಧರಿಸಿ, ಸಾಧ್ಯತೆಯನ್ನು ಗಮನಿಸಿ ಸಂಸ್ಥೆಯಲ್ಲೇ ರೂಪಿಸಿ ಒದಗಿಸಿಕೊಡಲಾಗುತ್ತಿರುವ ಅಧ್ಯಯನ ಪುಸ್ತಿಕೆಗಳು ವಿದ್ಯಾರ್ಥಿಗಳಿಗೆ ವರದಾನವೆನಿಸುತ್ತಿವೆ. ವಿದ್ಯಾರ್ಥಿಗಳ ಬೆಳವಣಿಗೆಗಳನ್ನು ಗಮನಿಸುವುದಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಓರ್ವ ಮಾರ್ಗದರ್ಶೀ ಉಪನ್ಯಾಸಕರಿದ್ದು, ತಂತ್ರಜ್ಞಾನ ಆಧಾರಿತ ತರಗತಿಗಳು, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ವ್ಯವಸ್ಥೆ ಈ ಶಿಕ್ಷಣ ಸಂಸ್ಥೆಯಲ್ಲಿದೆ. ಮಾತ್ರವಲ್ಲದೆ ವಿಶಾಲವಾದ ಕ್ರೀಡಾಂಗಣ, ಉತ್ಕೃಷ್ಟ ಗ್ರಂಥಾಲಯ, ವ್ಯವಸ್ಥಿತ ಪ್ರಯೋಗಾಲಯಗಳು, ಹುಡುಗರು ಮತ್ತು ಹುಡುಗಿಯರಿಗಾಗಿ ಅತ್ಯುತ್ತಮ ಹಾಸ್ಟೆಲ್ ಹಾಗೂ ಗುಣಮಟ್ಟದ ಸಸ್ಯಾಹಾರಿ ಆಹಾರ ವ್ಯವಸ್ಥೆಯೇ ಮೊದಲಾದವುಗಳು ಸಂಸ್ಥೆಯನ್ನು ಮತ್ತಷ್ಟು ಆಪ್ತವೆನಿಸುವಂತೆ ಮಾಡಿವೆ. ಹಾಸ್ಟೆಲ್‌ನಲ್ಲೂ ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಹಕಾರಿಯಾಗುವ ಹಿನ್ನೆಲೆಯಲ್ಲಿ ಉಪನ್ಯಾಸಕರು ಲಭ್ಯರಿರುವುದು ವಿದ್ಯಾರ್ಥಿಗಳಿಗೆ ವರದಾನವೆನಿಸಿದೆ.
ಅಂಬಿಕಾ ಸಂಸ್ಥೆಯಲ್ಲಿ ಪಿಯು ಕಾಮರ್ಸ್ ಶಿಕ್ಷಣವನ್ನೂ ಒದಗಿಸಿಕೊಡಲಾಗುತ್ತಿದೆ. ಪಿಯುಸಿಯಿಂದಲೇ ಸಿಎ, ಸಿ.ಎಸ್ ತರಬೇತಿಯನ್ನು ಕಾಮರ್ಸ್ ಶಿಕ್ಷಣದೊಂದಿಗೆ ಸೇರಿಸಲಾಗಿದೆ. ಮುಂದೆ ಬಿ.ಕಾಂ ಕೂಡ ಅಂಬಿಕಾ ಪದವಿ ಕಾಲೇಜಿನಲ್ಲಿ ಲಭ್ಯ ಇರುವುದರಿಂದ ಐದು ವರ್ಷಗಳ ಇಂಟಗ್ರೇಟೆಡ್ (ಸಿ.ಎ/ಸಿ.ಎಸ್ ಸಮೇತ) ಶಿಕ್ಷಣ ಪಡೆಯುವ ಅವಕಾಶವೂ ವಿದ್ಯಾರ್ಥಿಗಳಿಗೆ ಲಭ್ಯವಿದೆ. ಇದರೊಂದಿಗೆ ಬ್ಯಾಂಕಿಂಗ್ ಉದ್ಯೋಗಕ್ಕೆ ಸಂಬಂಧಿಸಿದಂತೆ ಐಬಿಪಿಎಸ್ ಪರೀಕ್ಷಾ ತರಬೇತಿಯನ್ನೂ ಒದಗಿಸಿಕೊಡಲಾಗುತ್ತಿರುವುದು ವಿದ್ಯಾರ್ಥಿಗಳಿಗೆ ಉಪಯುಕ್ತವ ಎನಿಸಿದೆ.

ಎಸಿ ಕ್ಲಾಸ್, ಈಜುಕೊಳದ ವ್ಯವಸ್ಥೆ: ದಕ್ಷಿಣ ಕನ್ನಡ ತುಸು ಸೆಕೆಯ ವಾತಾವರಣವನ್ನು ಹೊಂದಿದ ಪ್ರದೇಶವಾಗಿರುವುದರಿಂದ ಅಂಬಿಕಾ ಪಿಯು ಸಂಸ್ಥೆಗಳಲ್ಲಿ ಎ.ಸಿ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಗಾಗಿ ವಿದ್ಯಾರ್ಥಿಗಳು ತುಂಬಾ ಆಹ್ಲಾದಕರ ವಾತಾವರಣದಲ್ಲಿ ಅಧ್ಯಯನ ನಡೆಸುವುದಕ್ಕೆ ಸಾಧ್ಯವಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಎಸಿ ತರಗತಿ ರೂಪಿಸಿದ ಮೊದಲ ಶಿಕ್ಷಣ ಸಂಸ್ಥೆ ಎಂಬ ಖ್ಯಾತಿಗೂ ಅಂಬಿಕಾ ಪಿಯು ಸಂಸ್ಥೆಗಳು ಪಾತ್ರವಾಗಿವೆ. ಹಾಗೆಯೇ ಹಾಸ್ಟೆಲ್ ವಿದ್ಯಾರ್ಥಿಗಳ ವಿದ್ಯಾರ್ಥಿಗಳ ಒತ್ತಡ ನಿವಾರಣೆಗಾಗಿ ಈಜುಕೊಳವನ್ನು ನಿರ್ಮಿಸಿ ಈಜಾಟದ ಮೂಲಕ ಹೊಸಹುರುಪನ್ನು ಪಡೆಯುವಂತೆ ಮಾಡಿಕೊಡಲಾಗಿದೆ.

ಎನ್‌ಡಿಎ ಕೋಚಿಂಗ್ : ಭಾರತೀಯ ಸೇನೆಗೆ ಆಯ್ಕೆಯಾಗುವುದು ಅನೇಕ ಯುವಜನರ ಕನಸು. ಅದರಲ್ಲೂ ಆಫೀಸರ್ ಆಗಿ ಆಯ್ಕೆಯಾಗುವುದೆಂದರೆ ಬಹುದೊಡ್ಡ ಹೆಮ್ಮೆಯ ವಿಚಾರವೂ ಹೌದು. ಹಾಗಾಗಿಯೇ ನ್ಯಾಶನಲ್ ಡಿಫೆನ್ಸ್ ಅಕಾಡೆಮಿಗೆ ವಿದ್ಯಾರ್ಥಿಗಳನ್ನು ಕಳುಹಿಸುವ ಬಗೆಗೆ ಅಂಬಿಕಾ ಪಿಯು ಕಾಲೇಜಿನಲ್ಲಿ ಸಿದ್ಧತೆ ನಡೆದಿದೆ. ಕಳೆದ ಶೈಕ್ಷಣಿಕ ವರ್ಷದಿಂದ ಎನ್ ಡಿ ಎ ಪರೀಕ್ಷೆಗಳಿಗೆ ಅಂಬಿಕಾ ಪಿಯು ಕಾಲೇಜಿನಲ್ಲಿ ತರಬೇತಿ ನೀಡಲಾಗುತ್ತದೆ. ಇಂತಹ ತರಬೇತಿ ನೀಡುತ್ತಿರುವ ದೇಶದ ಕೆಲವೇ ಕೆಲವು ಸಂಸ್ಥೆಗಳಲ್ಲಿ ಅಂಬಿಕಾ ಪಿಯು ಕಾಲೇಜೂ ಸೇರಿದೆ ಎಂಬುದು ಗಮನಾರ್ಹ ವಿಚಾರ. ಸೇನೆಯಲ್ಲಿ ವಿವಿಧ ಹುದ್ದೆಯಲ್ಲಿದ್ದವರು ಆಗಾಗ್ಗೆ ಬಂದು ತರಬೇತಿ ನೀಡುತ್ತಿರುವುದೂ ಉಲ್ಲೇಖಾರ್ಹ.

ಆನ್‌ಲೈನ್ ದಾಖಲಾತಿ ಆರಂಭ : ಅಂಬಿಕಾ ಪದವಿಪೂರ್ವ ಕಾಲೇಜಿನಲ್ಲಿ ೨೦೨೧-೨೨ರ ಶೈಕ್ಷಣಿಕ ವರ್ಷಕ್ಕೆ ಆನ್‌ಲೈನ್ ಹಾಗೂ ಆಫ್‌ಲೈನ್ ದಾಖಲಾತಿ ಆರಂಭಗೊಂಡಿದೆ. ಈಗಾಗಲೇ ಅನೇಕ ಮಂದಿ ವಿದ್ಯಾರ್ಥಿಗಳು ದಾಖಲಾತಿ ಮಾಡಿಸಿಕೊಂಡಿದ್ದಾರೆ. ಆನ್‌ಲೈನ್ ದಾಖಲಾತಿಗಾಗಿ www.ambikavidyalaya.com <http://www.ambikavidyalaya.com> ಈ ವೆಬ್‌ಸೈಟ್ ವಿಳಾಸವನ್ನು ಕ್ಲಿಕ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ 9448835488 ಸಂಖ್ಯೆಯನ್ನು ಸಂಪರ್ಕಿಸಬಹುದು.

ಸಂಸ್ಥೆಯ ವಿಶೇಷತೆಗಳು:
ಅಂಬಿಕಾ ಸಂಸ್ಥೆಯ ಮೂಲಕ ಪುತ್ತೂರಿನಲ್ಲಿ ಅಮರ್ ಜವಾನ್ ಜ್ಯೋತಿ ನಿರ್ಮಿಸಲಾಗಿದೆ. ಇಡಿಯ ದೇಶದಲ್ಲೇ ಖಾಸಗಿ ಸಂಸ್ಥೆಯೊಂದು ಇಂತಹ ಸ್ಮಾರಕ ರೂಪಿಸಿರುವುದು ಇದೇ ಮೊದಲು.

ಯೋಧರ ಮಕ್ಕಳಿಗೆ ಶುಲ್ಕದಲ್ಲಿ ಕಡಿತ ನೀಡಿರುವ ಸಂಸ್ಥೆ
ಪ್ರತಿಭಾನ್ವಿತರಾಗಿರುವ ಅರ್ಹ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ
ತಾಲೂಕಿನಲ್ಲಿಯೇ ಈಜುಕೊಳ ರೂಪಿಸಿರುವ ಮೊದಲ ಶಿಕ್ಷಣ ಸಂಸ್ಥೆ
ಯೋಗವನ್ನು ಪಠ್ಯಕ್ರಮದಲ್ಲಿ ಅಳವಡಿಸಿರುವ ರಾಜ್ಯದ ಮೊದಲ ಸಂಸ್ಥೆ
ಹುಡುಗರ ಮತ್ತು ಹುಡುಗಿಯರ ಪ್ರತ್ಯೇಕ ಹಾಸ್ಟೆಲ್ ಹಾಗೂ ಅತ್ಯುತ್ತಮ ಗುಣಮಟ್ಟದ ಆಹಾರ
ರಾಜ್ಯದ ನಾನಾ ಭಾಗದಿಂದ ಆಗಮಿಸಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿ – ವಿದ್ಯಾರ್ಥಿನಿಯರು
ಆಧುನಿಕ ಶಿಕ್ಷಣದೊಂದಿಗೆ ದೇಶಪ್ರೇಮ, ಸಂಸ್ಕೃತಿ, ಸಂಸ್ಕಾರ ತುಂಬುವ ಕಾರ್ಯ
ವಿದ್ಯಾರ್ಥಿಗಳನ್ನು ಭಾರತೀಯ ಸಂಸ್ಕೃತಿಯ ರಾಯಭಾರಿಗಳನ್ನಾಗಿಸುವ ಪ್ರಯತ್ನ
ಗೌಜು ಗದ್ದಲಗಳಿಂದ ದೂರ ಇರುವ ಶಿಕ್ಷಣ ಸಂಸ್ಥೆ, ಕಲಿಕೆಯ ಪ್ರಶಾಂತ ವಾತಾವರಣ
ದಿನನಿತ್ಯ ವಿದ್ಯಾರ್ಥಿಗಳ ಕಲಿಕೆ, ಬೆಳವಣಿಗೆಗಳ ಬಗೆಗೆ ನಿಗಾ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.