ಜಿಡೆಕಲ್ಲು ಶಾಲೆಯಲ್ಲಿ ಕಲಿಯುಗ ಸೇವಾ ಸಮಿತಿಯ ಮಹಾಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಲಿಯುಗ ಸೇವಾ ಸಮಿತಿಯ ಮಹಾಸಭೆ ಜಿಡೆಕಲ್ಲು ಶಾಲೆಯಲ್ಲಿ ನಡೆಯಿತು. ಗಣೇಶ್ ಆಚಾರ್ಯ ಬೆದ್ರಾಳರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕಳೆದ 15 ವರ್ಷಗಳಿಂದ ಸಾರ್ವಜನಿಕ ಹಿತಾಸಕ್ತಿಯಿಂದ ಕಾರ್ಯಾಚರಿಸುತ್ತಿರುವ ಸಂಸ್ಥೆ ಅನೇಕ ಜನೋಪಯೋಗಿ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ ಎಂದು ಹೇಳಿದರು.

ಭ್ರಷ್ಟಾಚಾರದ ವಿರುದ್ಧ ಕಾನೂನು ಚಕಟ್ಟಿನೊಳಗೆ ಹೋರಾಟ ನಡೆಸುವುದು. ಸಾರ್ವಜನಿಕರ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಸಂಸ್ಥೆ ಮೂಲಕ ಒದಗಿಸಿಕೊಡುವ ಪ್ರಯತ್ನಗಳನ್ನು ನಿರಂತರ ಮುಂದುವರೆಸಿಕೊಂಡು ಹೋಗಲು ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು. ರಘುನಾಥ ರೈ ವಾರ್ಷಿಕ ವರದಿ ವಾಚಿಸಿದರು. ಲಗೋರಿ ಸೆರಾವೋ ಲೆಕ್ಕಪತ್ರ ಮಂಡಿಸಿದರು.

ಸದಸ್ಯರಾದ ದೇವದಾಸ್, ಸುರೇಂದ್ರ ಪೂಜಾರಿ, ಸಂಜೀವ ರೈ, ಸಂತೋಷ್ ಆಚಾರ್ಯ, ಜಯರಾಮ ಪೂಜಾರಿ, ರಮೇಶ್ ಕೆಮ್ಮಾಯಿ, ಸಂಪತ್ ಕುಮಾರ್ ಜೈನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸುರೇಶ್ ರೈ ಸ್ವಾಗತಿಸಿ ಪದ್ಮನಾಭ ಪ್ರಭು ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.