ಅಧಿಕಾರಿಗಳಿಗೆ ಆದೇಶ ನೀಡುವ ಹಕ್ಕು ಶಾಸಕರಿಗಿಲ್ಲ: ಎಂ.ಬಿ ವಿಶ್ವನಾಥ ರೈ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಪುತ್ತೂರಿನಲ್ಲಿ ಕಾರ್ಯಾಂಗದ ಕೆಲಸಗಳನ್ನು ಶಾಸಕಾಂಗ ಮಾಡುತ್ತಿರುವುದು ವಿಷಾದನೀಯ:ಆಲಿ
  • ರಸ್ತೆಗೆ ಮಣ್ಣು ಸುರಿಯುವ ಮೊದಲು ವ್ಯಾಕ್ಸಿನೇಶನ್ ಮಾಡಿಸಲಿ-ಬಾಬು.ರೈ ಕೋಟೆ

ಪುತ್ತೂರು: ‘ಶಾಸಕರು ಕೇರಳದಿಂದ ಪುತ್ತೂರಿಗೆ ಬರುವ ಹದಿಮೂರು ರಸ್ತೆಗಳನ್ನು ಮಣ್ಣು ಹಾಕಿ ಬಂದ್ ಮಾಡುವಂತೆ ಆದೇಶಿಸಿದ್ದಾರೆ,ಅಧಿಕಾರಿಗಳಿಗೆ ಆದೇಶ ನೀಡುವ ಹಕ್ಕು ಶಾಸಕರಿಗೆ ಇಲ್ಲ,ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಅಧಿಸೂಚನೆ ಹೊರತು ಇನ್ನಿತರರಿಗೆ ಬಂದ್ ಮಾಡುವಂತೆ ಸೂಚನೆ ನೀಡುವಂತಿಲ್ಲ.ಆದರೆ ಶಾಸಕರು ಅಧಿಕಾರಿಗಳಿಗೆ ರಸ್ತೆ ಬಂದ್ ಮಾಡುವಂತೆ ಸೂಚನೆ ನೀಡಿ ಸರ್ವಾಧಿಕಾರಿ ಧೋರಣೆಯನ್ನು ತೋರಿದ್ದಾರೆ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ಹೇಳಿದರು.

ಅವರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆ.೫ ರಂದು ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
‘ಜಿಲ್ಲಾಧಿಕಾರಿ ಅಧಿಸೂಚನೆಯನ್ನು ಹೊರತು ಪಡಿಸಿ ಇನ್ನಿತರರು ಯಾವುದೇ ಸಂದರ್ಭದಲ್ಲಿ ರಸ್ತೆ ಬಂದ್ ಮಾಡುವ ಅವಕಾಶ ಇಲ್ಲ,ಶಾಸಕರು ಏಕಾಏಕಿ ರಸ್ತೆ ಬಂದ್‌ ಸೂಚನೆ ನೀಡಿರುವುದು ಎಷ್ಟು ಸರಿ?,ಅಧಿಕಾರಿಗಳು ಶಾಸಕರು ವರ್ಗಾವಣೆ ಮಾಡಬಹುದೆಂಬ ಭಯದಿಂದ ಅವರ ಸೂಚನೆಯನ್ನು ಪಾಲಿಸುತ್ತಿದ್ದಾರೆ.ಇದು ಕಾರ್ಯಾಂಗದ ವ್ಯವಸ್ಥೆ ಅಲ್ಲ.ಶಾಸಕರಿಗೆ ಪ್ರಗತಿ ಪರಿಶೀಲನೆ ಮಾಡುವ ಅವಕಾಶ ಇದೆಯೇ ಹೊರತು ಅಧಿಕಾರಿಗಳಿಗೆ ಆದೇಶ ನೀಡುವ ಅಧಿಕಾರ ಶಾಸಕರಿಗಿಲ್ಲ’ಎಂದು ಹೇಳಿದರು.

ಪುತ್ತೂರಿನಲ್ಲಿ ಕಾರ್ಯಾಂಗದ ಕೆಲಸಗಳನ್ನು ಶಾಸಕಾಂಗ ಮಾಡುತ್ತಿರುವುದು ವಿಷಾದನೀಯ:ಆಲಿ
ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ ಮಾತನಾಡಿ ‘ರಸ್ತೆ ಬಂದ್ ಮಾಡುವ ಅಧಿಕಾರ ಪುತ್ತೂರಿನ ಶಾಸಕರಿಗಿದೆಯೇ ಎಂಬ ಜಿಜ್ಞಾಸೆ ಮೂಡಿದೆ.ಆಡಳಿತ ವ್ಯವಸ್ಥೆಯಲ್ಲಿ ಶಾಸಕಾಂಗ,ಕಾರ್ಯಾಂಗ,ನ್ಯಾಯಾಂಗ ವ್ಯವಸ್ಥೆ ಇದೆ.ಅವು ತಮ್ಮದೇ ಆದ ಜವಬ್ದಾರಿಗಳನ್ನು ನಿರ್ವಹಿಸುತ್ತವೆ.ಆದರೆ ಪುತ್ತೂರಿನಲ್ಲಿ ಶಾಸಕರು ತಾವೇ ಸಭೆಗಳನ್ನು ನಡೆಸುವುದು,ಅಧಿಕಾರಿಗಳಿಗೆ ರಸ್ತೆ ಬಂದ್ ಮಾಡುವಂತೆ ಸೂಚನೆ ನೀಡುವುದನ್ನು ಕಂಡಾಗ ಇಲ್ಲಿ ಕಾರ್ಯಾಂಗದ ಕೆಲಸಗಳನ್ನು ಶಾಸಕಾಂಗವೇ ಮಾಡುತ್ತಿರುವಂತೆ ಕಾಣುತ್ತದೆ.ಇದು ವಿಷಾದನೀಯ.ತಮ್ಮ ಅಧಿಕಾರಗಳ ಅರಿವಿಲ್ಲದೆ ಶಾಸಕರ ಸೂಚನೆಗಳಿಗೆ ತಲೆಬಾಗುವ ಅಧಿಕಾರಿಗಳು ಮೂರ್ಖರು.ಕೋವಿಡ್ ಸಮಯದಲ್ಲಿ ಸಹಾಯಕ ಆಯುಕ್ತರು ಯಾವುದೇ ಸಭೆಗಳನ್ನು ನಡೆಸಿಲ್ಲ,ಬದಲಾಗಿ ಶಾಸಕರೇ ಎಲ್ಲಾ ಸಭೆಗಳನ್ನು ನಡೆಸಿದ್ದಾರೆ,ಶಾಸಕರಿಗೆ ಸಭೆ ನಡೆಸಲು ಅಧಿಕಾರ ಕೊಟ್ಟವರು ಯಾರು?,ಅಷ್ಟೇ ಅಲ್ಲದೆ ಒಂದು ಬಾರಿ ಬಂದ್ ಮಾಡಿ ಎಂದ ಶಾಸಕರು ಮರುದಿನ ರಸ್ತೆ ತೆರವು ಮಾಡಿ ಎಂದು ಸೂಚನೆ ನೀಡಿ ಜನರನ್ನು ಗೊಂದಲಕ್ಕೀಡಾಗುವಂತೆ ಮಾಡಿದ್ದಾರೆ.ಶಾಸಕರ ಈ ಜನವಿರೋಧಿ ಕ್ರಮ ಕಾನೂನು ಬಾಹಿರ,ಈ ವ್ಯವಸ್ಥೆ ಸರಿಯಾಗದಿದ್ದರೆ ಕಾನೂನು ರೀತಿಯ ಹೋರಾಟ ನಡೆಸಲಿದ್ದೇವೆ ಎಂದರು.

ಪಾಣಾಜೆ ಗ್ರಾಂ.ಪಂ ಸದಸ್ಯ ನಾರಾಯಣ ನಾಯಕ್ ಮಾತನಾಡಿ ‘ಶಾಸಕರಿಂದ ಸೂಚನೆ ಬಂದ ಹಿನ್ನೆಲೆಯಲ್ಲಿ ರಸ್ತೆ ಬಂದ್ ಮಾಡುವ ಕುರಿತು ಪಾಣಾಜೆ ಗ್ರಾಂ.ಪಂನಲ್ಲಿ ನಡೆದ ಸಭೆಯಲ್ಲಿ ನಾನು ರಸ್ತೆ ಬಂದ್ ಮಾಡುವುದು ಬೇಡ ಎಂದು ವಿರೋಧಿಸಿದ್ದೆ ಆದರೆ ಪಿಡಿಒ ಹಾಗೂ ಅಧಿಕಾರಿಗಳು ಶಾಸಕರ ಸೂಚನೆಯಂತೆ ರಸ್ತೆ ಬಂದ್ ಮಾಡಿದ್ದಾರೆ.ಇದರಿಂದ ನಮ್ಮೂರಿನಿಂದ ಕೇರಳ ಭಾಗಕ್ಕೆ ಕೆಲಸಕ್ಕೆ ಹೋಗುವ ಕೂಲಿ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ’ಎಂದು ಹೇಳಿದರು.

ಪಾಣಾಜೆ ಕಾಂಗ್ರೆಸ್ ವಲಯ ಸಮಿತಿ ಅಧ್ಯಕ್ಷ ಬಾಬು.ರೈ ಕೋಟೆ ಮಾತನಾಡಿ ‘ಪಾಣಾಜೆ ಗ್ರಾಮದಲ್ಲಿ ಸುಮಾರು ೪೦ರಷ್ಟು ಆಟೋ ರಿಕ್ಷಾಗಳಿವೆ,ಹತ್ತರಷ್ಟು ಪಿಕಪ್‌ಗಳಿವೆ,ಲಾರಿಗಳು ಮತ್ತು ದಿನನಿತ್ಯ ಕೆಲಸಕ್ಕೆ ಹೋಗಿ ಬದುಕುವ ಕೂಲಿ ಕಾರ್ಮಿಕರಿದ್ದಾರೆ,ಇವರಿಗೆಲ್ಲ ಗಡಿಯಿಂದಾಚೆ ಬಾಡಿಗೆಗೆ,ಕೆಲಸಕ್ಕೆ ತೆರಳುವುದು ಅನಿವಾರ್ಯವಾಗಿರುತ್ತದೆ ಆದರೆ ಈ ರೀತಿ ರಸ್ತೆಗೆ ಮಣ್ಣು ಹಾಕಿದಾಗ ಈಗಾಗಲೇ ಲಾಕ್ಡೌನ್‌ನಿಂದ ಬೇಸತ್ತ ಜನರು ಮತ್ತಷ್ಟು ತೊಂದರೆಗೆ ಸಿಲುಕಿದಂತಾಗುತ್ತದೆ.ಕೊರೋನ ನಿಯಂತ್ರಸಲು ರಸ್ತೆ ಬಂದ್ ಒಂದೇ ಪರಿಹಾರವಲ್ಲ ಶಾಸಕರು ರಸ್ತೆ ಬಂದ್ ಮಾಡಲು ಸೂಚಿಸುವುದಕ್ಕಿಂತ ವ್ಯಾಕ್ಸಿನ್ ದೊರೆಯುವಂತೆ ಮಾಡಲಿ,ಗ್ರಾಮದ ಎಲ್ಲರಿಗೂ ಕೋವಿಡ್ ಟೆಸ್ಟ್ ಮಾಡಲಿ ಅದನ್ನು ಹೊರತುಪಡಿಸಿ ರಸ್ತೆ ಬಂದ್ ಮಾಡುವುದನ್ನು ನಾವು ಖಂಡಿಸುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಕೂರ್ ಹಾಜಿ,ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರಿಸ್ ಮಸ್ಕರೇನಸ್,ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ,ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಉಮಾನಾಥ್.ನಗರಸಭೆ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು,ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಶಾರದಾ ಅರಸ್,ಮಾಜಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು,ಕಾರ್ಯಕರ್ತ ರವಿ.ಎನ್ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.