HomePage_Banner
HomePage_Banner
HomePage_Banner
HomePage_Banner

ಗುಂಡ್ಯ: ನಿಲ್ಲಿಸಿದ್ದ ಲಾರಿಯ ಮೇಲಿಂದ ಬಿದ್ದು ನಿರ್ವಾಹಕ ಸಾವು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಚಾಲಕ ತಮಿಳುನಾಡಿಗೆ ತೆರಳಿದ್ದ ವೇಳೆ ಲಾರಿಯಿಂದ ಲಕ್ಷಾಂತರ ರೂ.ಮೌಲ್ಯದ ರಬ್ಬರ್ ಶೀಟ್ ಕಳವು

ನೆಲ್ಯಾಡಿ: ಗುಂಡ್ಯದಲ್ಲಿ ನಿಲ್ಲಿಸಿದ್ದ ಲಾರಿಯೊಂದರ ಮೇಲಿಂದ ಬಿದ್ದು ತಮಿಳುನಾಡು ಮೂಲದ ನಿರ್ವಾಹಕ ಸಾವನ್ನಪ್ಪಿದ್ದು, ಆ ಬಳಿಕ ನಿರ್ವಾಹಕನ ಮೃತದೇಹದೊಂದಿಗೆ ಲಾರಿ ಚಾಲಕ ತಮಿಳುನಾಡಿಗೆ ತೆರಳಿದ್ದ ವೇಳೆ ಲಾರಿಯಲ್ಲಿದ್ದ ಲಕ್ಷಾಂತರ ರೂ.,ಮೌಲ್ಯದ ರಬ್ಬರ್‌ಶೀಟ್ ಕಳವುಗೊಂಡಿರುವ ಪ್ರಕರಣವೊಂದು ೧೦ ದಿನಗಳ ಹಿಂದೆ ನಡೆದಿರುವುದು ವರದಿಯಾಗಿದೆ. ಇದರ ತನಿಖೆ ಕೈಗೊಂಡಿದ್ದ ಪೊಲೀಸರು ರಬ್ಬರ್ ಶೀಟ್ ವಶಪಡಿಸಿಕೊಂಡಿದ್ದರೂ ಆರೋಪಿಗಳ ಬಂಧನವಾಗದೇ ಇರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರ ವಿರುದ್ಧ ಪರ ವಿರೋಧ ಚರ್ಚೆಯಾಗುತ್ತಿದೆ.

ಉಜಿರೆಯಿಂದ ತಮಿಳುನಾಡಿಗೆ ರಬ್ಬರ್ ಶೀಟ್ ಸಾಗಾಟ ಮಾಡುತ್ತಿದ್ದ ಲಾರಿ(ಟಿಎನ್ ೭೩, ಎಂ ೩೪೯೯)ಯನ್ನು ಜು.೨೫ರಂದು ದೋಣಿಗಲ್‌ನಲ್ಲಿ ರಸ್ತೆ ಕುಸಿತಗೊಂಡು ಸಂಚಾರ ಸಾಧ್ಯವಾಗದೇ ಇದ್ದ ಹಿನ್ನೆಲೆಯಲ್ಲಿ ಅದರ ಚಾಲಕ ಗುಂಡ್ಯದಲ್ಲಿ ನಿಲ್ಲಿಸಿದ್ದರು. ಮರು ದಿನ ಬೆಳಿಗ್ಗೆ ತಮಿಳುನಾಡು ಮೂಲದವರಾದ ಲಾರಿಯ ನಿರ್ವಾಹಕ ಲಾರಿಗೆ ಅಳವಡಿಸಲಾಗಿದ್ದ ಟರ್ಪಾಲ್‌ನಲ್ಲಿ ನಿಂತಿದ್ದ ನೀರು ತೆಗೆಯಲೆಂದು ಲಾರಿಯ ಮೇಲೆ ಹತ್ತಿದ್ದು ಅಲ್ಲಿಂದ ಆಯತಪ್ಪಿ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಅಲ್ಲಿಂದ ತಕ್ಷಣ ಅವರನ್ನು ಕಾರೊಂದರಲ್ಲಿ ಆಸ್ಪತ್ರೆಗೆಂದು ಕರೆತಂದಿದ್ದು ದಾರಿಮಧ್ಯೆ ರಿಜು ಎಂಬವರ ಆಂಬುಲೆನ್ಸ್‌ಗೆ ಗಾಯಾಳುವನ್ನು ಶಿಫ್ಟ್ ಮಾಡಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಗಂಭೀರ ಗಾಯಗೊಂಡಿದ್ದ ನಿರ್ವಾಹಕ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಬಳಿಕ ನಿರ್ವಾಹಕನ ಮೃತದೇಹವನ್ನು ಚಾಲಕ ತಮಿಳುನಾಡಿಗೆ ಕೊಂಡೊಯ್ದು ಕುಟುಂಬಸ್ಥರಿಗೆ ಒಪ್ಪಿಸಿ ಮರುದಿನ ಲಾರಿ ನಿಲ್ಲಿಸಿದ್ದ ಗುಂಡ್ಯಕ್ಕೆ ಬಂದ ವೇಳೆ ಲಾರಿಯಿಂದ ಅರ್ಧದಷ್ಟು ರಬ್ಬರ್ ಶೀಟ್ ಕಳವುಗೊಂಡಿದ್ದು ಗಮನಕ್ಕೆ ಬಂದಿದೆ. ಈ ಬಗ್ಗೆ ಲಾರಿ ಚಾಲಕ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.

ಕಳವುಗೈದ ಸೊತ್ತು ವಶ ?
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಲಾರಿಯಿಂದ ಕಳವುಗೈದ ರಬ್ಬರ್ ಶೀಟ್‌ಗಳನ್ನು ಬೆಳ್ತಂಗಡಿ ಸಮೀಪ ತೋಟವೊಂದರ ಕರೆಯೊಂದರಲ್ಲಿ ಅಡಗಿಸಿಟ್ಟಿರುವುದನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಕಳವುಗೈಯ್ಯಲು ಉಪಯೋಗಿಸಿದ ಜೀಪು ಸಹ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಪ್ರಕರಣದ ಆರೋಪಿಗಳ ಬಂಧನವಾಗದೇ ಇರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಯಾಗುತ್ತಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.