HomePage_Banner
HomePage_Banner
HomePage_Banner
HomePage_Banner

ಮಕ್ಕಳಿಗಿದು ಗೊತ್ತಿಲ್ಲ, ಇನ್ಯಾರೂ ಹೇಳಲ್ಲ! – ‘ಬಿಎ – ಪತ್ರಿಕೋದ್ಯಮ’ ಅಧ್ಯಯನ ಕಲಾ ವಿದ್ಯಾರ್ಥಿಗಳಿಗೆ ಆಶಾಕಿರಣ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪಿಯುಸಿ ಮುಗಿಯಿತು, ಇನ್ನೇನು ಮಾಡುವುದು? ಪದವಿಯಲ್ಲಿ ಯಾವ ವಿಷಯವನ್ನು ಅಧ್ಯಯನ ಮಾಡಿದರೆ ಒಳ್ಳೆಯದು? ಏನು ಓದಿದರೆ ಮುಂದೆ ಖಚಿತ ಉದ್ಯೋಗಾವಕಾಶಗಳಿವೆ? ಈ ತೆರನಾದ ಪ್ರಶ್ನೆಗಳಿಗೆ ಇನ್ನೂ ಉತ್ತರ ಕಂಡುಕೊಳ್ಳದಿರುವ ಅನೇಕ ಮಂದಿ ಪಿಯು ವಿದ್ಯಾರ್ಥಿಗಳು ನಮ್ಮ ಸುತ್ತಮುತ್ತ ಇರುವುದನ್ನು ಗಮನಿಸಬಹುದು. ಪಿಯು ಹಂತದಲ್ಲಿ ವಿಜ್ಞಾನ ಹಾಗೂ ವಾಣಿಜ್ಯ ಓದಿದವರಿಗಿಂತ ಕಲಾ ವಿಭಾಗದಲ್ಲಿ ಅಧ್ಯಯನ ಮಾಡಿದವರಿಗೆ ಇಂತಹ ಗೊಂದಲಗಳು ತುಸು ಜಾಸ್ತಿಯೇ. ಆದರೆ ಇಂತಹ ಗೊಂದಲಗಳಿಗೆ ಮೂಲ ಕಾರಣ ತಮಗಿರುವ ಅವಕಾಶಗಳ ಬಗೆಗೆ ಕಲಾ ವಿದ್ಯಾರ್ಥಿಗಳಿಗೆ ಮಾಹಿತಿ ಇಲ್ಲದಿರುವುದು ಎಂದರೆ ನಿಮಗೆ ಅಚ್ಚರಿಯಾಗದಿರದು. ಹೌದು, ಕಲಾ ವಿಭಾಗದ ವಿದ್ಯಾರ್ಥಿಗಳಿಗೂ ಸಾಕಷ್ಟು ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡುವಂತಹ ಆಧುನಿಕ ಅಧ್ಯಯನ ವಿಷಯಗಳು ಇಂದು ಬೆಂಗಳೂರು, ಮಂಗಳೂರಿನಂತಹ ಮಹಾನಗರಗಳಲ್ಲಿ ಮಾತ್ರವಲ್ಲದೆ ಪುತ್ತೂರಿನಂತಹ ಪ್ರದೇಶಗಳಲ್ಲೂ ಜಾರಿಯಲ್ಲಿವೆ. ನಾವಿಂದು ಸಾಮಾನ್ಯವಾಗಿ ವಿಜ್ಞಾನ ಹಾಗೂ ವಾಣಿಜ್ಯ ವಿಷಯ ಓದಿದವರಿಗೆ ಪದವಿ ಹಂತದಲ್ಲೇ ಇರುವ ವೃತ್ತಿಪರ ಕೋರ್ಸ್‌ಗಳ (ಪದವಿ ಅಧ್ಯಯನ ಆದ ತಕ್ಷಣ ಉದ್ಯೋಗ ಕಲ್ಪಿಸಿಕೊಡುವಂತಹ ಕೋರ್ಸ್‌ಗಳು) ಬಗೆಗೆ ಮಾತನಾಡುತ್ತೇವೆ. ಆದರೆ ಬಿ.ಎ ಓದಿದವರಿಗೂ ಇಂತಹ ವೃತ್ತಿಪರ ಕೋರ್ಸ್‌ಗಳಿವೆ ಎಂಬುದು ಅನೇಕರಿಗೆ ತಿಳಿದಿಲ್ಲ!

ಪತ್ರಿಕೋದ್ಯಮ ಎಂಬ ಅವಕಾಶಗಳ ಆಗರ: ಕಲಾ ವಿದ್ಯಾರ್ಥಿಗಳಿಗೆ ಬಿಎ ಪದವಿಯಲ್ಲಿ ಪತ್ರಿಕೋದ್ಯಮ ವಿಷಯದ ಅಧ್ಯಯನ ಹೊಸ ಬದುಕನ್ನು ಕಟ್ಟಿಕೊಡಬಲ್ಲದು. ಪದವಿ ಓದಿದ ತಕ್ಷಣದಲ್ಲೇ ಮಾಧ್ಯಮ ಕ್ಷೇತ್ರದಲ್ಲಿನ ಅಪಾರ ಅವಕಾಶಗಳು ವಿದ್ಯಾರ್ಥಿಗಳನ್ನು ಅರಸಿ ಬರುತ್ತಿವೆ. ದಿನಪತ್ರಿಕೆಗಳು, ೨೪*೭ ಸುದ್ದಿ ವಾಹಿನಿಗಳು, ಮನರಂಜನಾ ವಾಹಿನಿಗಳು, ಸಿನೆಮಾ ಧಾರಾವಾಹಿ ಕ್ಷೇತ್ರ, ಜಾಹೀರಾತು ಹಾಗೂ ಸಾರ್ವಜನಿಕ ಸಂಪರ್ಕ ರಂಗಗಳು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಇನ್ನಿಲ್ಲದ ಅವಕಾಶಗಳನ್ನು ಒದಗಿಸಿಕೊಡುತ್ತಿವೆ. ಬಿಎಯಲ್ಲಿ ಪತ್ರಿಕೋದ್ಯಮವನ್ನು ಒಂದು ವಿಷಯವಾಗಿ ಅಧ್ಯಯನ ನಡೆಸಿ ಹೊರಬರುವಾಗಲೇ ಇಂತಹ ಅವಕಾಶಗಳು ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತಿರುವುದು ಅದೃಷ್ಟವೇ ಸರಿ. ಇಂದು ಅನೇಕ ಮಂದಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪತ್ರಿಕೋದ್ಯಮ ಅಧ್ಯಯನದ ಮೂಲಕ ಪುತ್ತೂರು – ಸುಳ್ಯದಂತಹ ಸ್ಥಳಗಳಿಂದ ತೊಡಗಿ ರಾಜ್ಯ, ರಾಷ್ಟ್ರದ ರಾಜಧಾನಿಯವರೆಗೂ ತಮ್ಮ ಬದುಕನ್ನು ವಿಸ್ತರಿಸಿಕೊಂಡು ಉತ್ಕೃಷ್ಟ ಬಾಳುವೆಯನ್ನು ಕಟ್ಟಿಕೊಂಡಿರುವುದು ಗಮನಾರ್ಹ.

ಇಷ್ಟಲ್ಲದೆ ಪತ್ರಿಕೋದ್ಯಮ ವಿಷಯ ಫೋಟೋಗ್ರಫಿ, ವೀಡಿಯೋಗ್ರಫಿಯಂತಹ ಕಲೆಗಳೊಂದಿಗೆ ಫೊಟೋ ಹಾಗೂ ವೀಡಿಯೋ ಎಡಿಟಿಂಗ್‌ಗಳನ್ನೂ ಕಲಿಸಿಕೊಡುವುದರಿಂದ ಸ್ವ ಉದ್ಯೋಗ ರೂಪಿಸಿಕೊಳ್ಳುವುದಕ್ಕೂ ಅನುಕೂಲ ಮಾಡಿಕೊಡುತ್ತಿದೆ. ಎಷ್ಟೋ ಮಂದಿ ವಿದ್ಯಾರ್ಥಿಗಳು ಸ್ವಂತ ಸ್ಟುಡಿಯೋ, ಮಲ್ಟಿಮೀಡಿಯಾ ಸೆಂಟರ್ ಇಟ್ಟುಕೊಳ್ಳುವುದಕ್ಕೆ ಪತ್ರಿಕೋದ್ಯಮ ಬೀಜಮಂತ್ರವಾಗಿ ಪರಿಣಮಿಸಿದೆ. ಪತ್ರಿಕೋದ್ಯಮ ತರಗತಿಯಲ್ಲಿ ಮಾತನಾಡುವ ಹಾಗೂ ಬರವಣಿಗೆಯ ಕಲೆಯನ್ನು ನಿರಂತರವಾಗಿ ಕಲಿಸಿಕೊಡುವುದರಿಂದ ಟಿವಿಯಲ್ಲಿ ಆಂಕರ್‌ಗಳಾಗಿ, ವರದಿಗಾರರಾಗಿ ಕೆಲಸ ಮಾಡುವುದಕ್ಕೆ ಸುಲಭಸಾಧ್ಯವೆನಿಸುತ್ತದೆ. ಈ ನಡುವೆ ಸ್ನಾತಕೋತ್ತರ ಪತ್ರಿಕೋದ್ಯಮವನ್ನೂ ಪದವಿಯ ನಂತರ ಅಧ್ಯಯನ ನಡೆಸಿದಲ್ಲಿ ಪತ್ರಿಕೋದ್ಯಮ ಉಪನ್ಯಾಸಕರಾಗಿಯೂ ಕಾರ್ಯನಿರ್ವಹಿಸಬಹುದು.

ಇಂಗ್ಲಿಷ್ ಐಚ್ಚಿಕ : ಇಂಗ್ಲಿಷ್‌ನಲ್ಲಿ ಸರಾಗವಾಗಿ ಮಾತನಾಡಬೇಕು, ವ್ಯವಹರಿಸಬೇಕೆಂಬುದು ಅನೇಕ ವಿದ್ಯಾರ್ಥಿಗಳ ಬಹುದೊಡ್ಡ ಕನಸು. ಬಿಎ ಪದವಿಯಲ್ಲಿ ಇಂಗ್ಲಿಷ್ ಅನ್ನು ಒಂದು ಐಚ್ಚಿಕ ವಿಷಯವಾಗಿ ಅಧ್ಯಯನ ನಡೆಸುವುದರಿಂದ ವಿದ್ಯಾರ್ಥಿಗಳ ಕನಸಿಗೆ ಗೊಬ್ಬರ ನೀರು ದೊರೆತಂತಾಗಬಹುದು. ಇದಕ್ಕಿಂತಲೂ ಮುಖ್ಯವಾಗಿ ಇಂದು ಒಂದನೆಯ ತರಗತಿಯಿಂದ ಸ್ನಾತಕೋತ್ತರ ಪದವಿ ಹಂತದವರೆಗೂ ಇಂಗ್ಲಿಷ್ ಶಿಕ್ಷಕರು ಬೇಕಾಗಿರುವುದರಿಂದ ಬಿಎ ಯಲ್ಲಿ ಇಂಗ್ಲಿಷ್ ಐಚ್ಚಿಕ ಓದಿ ಎಂ.ಎ ಇಂಗ್ಲಿಷ್ ಓದಿದವರನ್ನು ಬೋಧನಾ ಕ್ಷೇತ್ರ ಕೈಬೀಸಿ ಕರೆಯುತ್ತದೆ. ಜತೆಗೆ ಬಿಎಡ್ ಅಧ್ಯಯನ, ಮಾರ್ಕೆಟಿಂಗ್, ಕಂಟೆಂಟ್ ರೈಟಿಂಗ್, ಭಾಷಾಂತರ ಕ್ಷೇತ್ರಗಳಲ್ಲೂ ಇಂಗ್ಲಿಷ್ ಐಚ್ಚಿಕ ಓದಿದವರಿಗೆ ಮುಕ್ತ ಅವಕಾಶಗಳಿವೆ. ಅದರಲ್ಲೂ ಪತ್ರಿಕೋದ್ಯಮದೊಂದಿಗೆ ಇಂಗ್ಲಿಷ್ ಅನ್ನೂ ಓದುವ ಅವಕಾಶ ಸಿಗುವುದು ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ದ್ವಿಗುಣಗೊಳಿಸುತ್ತದೆ.

ಮನಃಶಾಸ್ತ್ರ : ಸಮಾಜದ ಸದೃಢತೆಯನ್ನು ಕಾಪಾಡಿಕೊಳ್ಳುವಲ್ಲಿ ಮನಃಶಾಸ್ತ್ರಜ್ಞರ ಕೊಡುಗೆ ಅಪಾರ. ಇಂದು ಸರ್ಕಾರಿ ಆಸ್ಪತ್ರೆಗಳಲ್ಲಿ ಮನಃಶಾಸ್ತ್ರಜ್ಞರು ಇರಬೇಕೆಂದು ಸರ್ಕಾರ ನಿರ್ಧರಿಸಿರುವುದರಿಂದ ಮನಃಶಾಸ್ತ್ರ ಓದಿದವರು ಆಪ್ತಸಮಾಲೋಚಕರಾಗಿ ಆಯ್ಕೆಯಾಗುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲೂ ಇಂತಹದ್ದೇ ಅವಕಾಶಗಳು ಮುಕ್ತವಾಗಿವೆ. ಈ ನಡುವೆ ಔದ್ಯೋಗಿಕ ಮನಃಶಾಸ್ತ್ರ ಎಂಬ ಕಲ್ಪನೆ ಹೆಚ್ಚು ಪ್ರಚಲಿತಕ್ಕೆ ಬರುತ್ತಿದ್ದು ಪ್ರತಿಯೊಂದು ಕಂಪೆನಿಗಳಲ್ಲೂ ಮನಃಶಾಸ್ತ್ರಜ್ಞರ ನೇಮಕವಾಗುತ್ತಿದೆ. ಹಾಗೆಯೇ ನೂತನ ಶಿಕ್ಷಣ ನೀತಿಯು ಪ್ರತಿಯೊಂದು ವಿದ್ಯಾಸಂಸ್ಥೆಯಲ್ಲೂ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯವನ್ನು ಸುಸ್ಥಿರವಾಗಿಟ್ಟುಕೊಳ್ಳುವುದಕ್ಕೆ ಕ್ರಮ ಕೈಗೊಳ್ಳಬೇಕೆಂಬ ವಿಷಯಕ್ಕೆ ಆದ್ಯತೆ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಮನಃಶಾಸ್ತ್ರ ಓದಿದ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಲ್ಲಿ ಆಪ್ತಸಮಾಲೋಚಕರಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ. ಹೆಚ್ಚಿನ ಆ ಈ ನಡುವೆ ಕೌನ್ಸೆಲಿಂಗ್ ಸೆಂಟರ್‌ಗಳನ್ನು ಆರಂಭಿಸಿ ಆಪ್ತಸಮಾಲೋಚಕರಾಗಿ ಸ್ವ ಉದ್ಯೋಗ ಕೈಗೊಳ್ಳುವುದಕ್ಕೂ ಅವಕಾಶಗಳಿವೆ. ಬೋಧನಾ ಕ್ಷೇತ್ರವೂ ಮುಕ್ತವಾಗಿಯೇ ಇದೆ.
ಅಂಬಿಕಾದಲ್ಲಿದೆ ಉಚಿತ ಶಿಕ್ಷಣ ಮತ್ತು ವಿಶಿಷ್ಟ ಅವಕಾಶಗಳು : ನಗರದ ನಟ್ಟೋಜ ಫೌಂಡೇಶನ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಮಹಾವಿದ್ಯಾಲಯ ಬಿಎ ವಿಭಾಗದಲ್ಲಿ ಪತ್ರಿಕೋದ್ಯಮ, ಇಂಗ್ಲಿಷ್, ಕನ್ನಡ, ಮನಃಶಾಸ್ತ್ರ, ಸಂಸ್ಕೃತ ಹಾಗೂ ತತ್ವಶಾಸ್ತ್ರ ಹೀಗೆ ನಾನಾ ಅಧ್ಯಯನ ವಿಷಯಗಳನ್ನು ಬಿ.ಎ ವಿದ್ಯಾರ್ಥಿಗಳಿಗೆ ಒದಗಿಸಿಕೊಡುತ್ತಿದೆ. ಬಿಎ ಹಾಗೂ ಬಿಎಸ್ಸಿಯಲ್ಲಿ ಕೆಲವು ಕಾಂಬಿನೇಶನ್‌ಗಳಿಗೆ ಉಚಿತ ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗಕ್ಕೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವಂತಹ ಮಹತ್ತರ ಕಾರ್ಯಕ್ಕೆ ಅಂಬಿಕಾ ಕಾಲೇಜು ಅಡಿಯಿಡುತ್ತಿದೆ.

ತತ್ವಶಾಸ್ತ್ರ ಹಾಗೂ ಸಂಸ್ಕೃತ : ಭಾರತೀಯ ಪಾರಂಪರಿಕ ಜ್ಞಾನವನ್ನು ಪಸರಿಸುವಲ್ಲಿ ವಿಶೇಷ ಕಾಳಜಿ ಹೊಂದಿರುವ ಅಂಬಿಕಾ ಪದವಿ ಕಾಲೇಜು ತತ್ವಶಾಸ್ತ್ರ ವಿಷಯವನ್ನು ಬಿಎ ಹಾಗೂ ಬಿಎಸ್ಸಿ ಪದವಿಯಲ್ಲಿ ಒಂದು ಅಧ್ಯಯನ ವಿಷಯವಾಗಿ ಒದಗಿಸಿಕೊಡುತ್ತಿದೆ. ಅದರಲ್ಲೂ ಬಿಎಸ್ಸಿಯಲ್ಲಿ ತತ್ವಶಾಸ್ತ್ರ ಬೋಧಿಸುತ್ತಿರುವ ದೇಶದ ಏಕೈಕ ಕಾಲೇಜೆಂಬ ಹೆಗ್ಗಳಿಕೆಗೆ ಸಂಸ್ಥೆ ಪಾತ್ರವಾಗಿದೆ. ಇಂದು ವಿದೇಶಗಳಲ್ಲಿ ಭಾರತೀಯ ತತ್ವಜ್ಞಾನಕ್ಕೆ ವಿಶೇಷ ಬೇಡಿಕೆ ಬರುತ್ತಿದ್ದು ತತ್ವಶಾಸ್ತ್ರ ಅಧ್ಯಯನ ನಡೆಸಿದ ವಿದ್ಯಾರ್ಥಿಗಳು ವಿದೇಶದಲ್ಲಿಯೂ ಉದ್ಯೋಗ ಗಳಿಸುವುದಕ್ಕೆ ಅವಕಾಶವಾಗಲಿದೆ. ಭಾರತೀಯ ತತ್ವಶಾಸ್ತ್ರ ಕಲೆ, ವಿಜ್ಞಾನ ಎರಡಕ್ಕೂ ಮೂಲಧಾತುವಾಗಿರುವುದರಿಂದ ತತ್ವಶಾಸ್ತ್ರ ಸಮೇತವಾದ ಬಿಎ ಅಥವ ಬಿಎಸ್ಸಿ ಪದವಿ ಅಧ್ಯಯನ ನಡೆಸುವುದರಿಂದ ವಿದ್ಯಾಥಿಗಳ ಜ್ಞಾನದ ಮಟ್ಟವೂ ಔನ್ನತ್ಯಕ್ಕೇರುವುದರಲ್ಲಿ ಅನುಮಾನವಿಲ್ಲ. ಹಾಗೆಯೇ ಪುತ್ತೂರು ಪರಿಸರದಲ್ಲಿ ಐಚ್ಚಿಕ ಸಂಸ್ಕೃತವನ್ನು ಬೋಧಿಸುತ್ತಿರುವ ಏಕೈಕ ಕಾಲೇಜೆಂಬ ಹೆಮ್ಮೆಯೂ ಅಂಬಿಕಾ ಕಾಲೇಜಿಗೆ ಸಲ್ಲುತ್ತದೆ. ಸಂಸ್ಕೃತ ಐಚ್ಚಿಕ ವಿಷಯವು ಭಾಷೆ, ಜ್ಞಾನ, ವಿದ್ವತ್ ದೃಷ್ಟಿಯಿಂದಲೂ ಅತ್ಯುತ್ತಮ ಆಯ್ಕೆ ಎನಿಸಬಲ್ಲುದು.

ಇದರೊಂದಿಗೆ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಉದ್ಯೋಗಗಳಾದ ಎಫ್‌ಡಿಎ ಹಾಗೂ ಎಸ್‌ಡಿಎ ಪರೀಕ್ಷೆಗಳಿಗೆ ಯಾವುದೇ ಹೆಚ್ಚಿನ ಶುಲ್ಕ ವಿಧಿಸದೆ ತರಬೇತಿ ನೀಡಲಿದೆ. ನಮ್ಮ ರಾಜ್ಯದ ಪಿಯುಸಿಯಲ್ಲಿ ಸಾಮಾನ್ಯವಾಗಿ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಹಾಗೂ ಸಮಾಜಶಾಸ್ತ್ರ ಹೀಗೆ ನಾಲ್ಕು ವಿಷಯಗಳನ್ನು ವಿದ್ಯಾರ್ಥಿಗಳು ಅಧ್ಯಯನ ನಡೆಸಿದರೆ (ಕೆಲವು ಪಿಯು ಕಾಲೇಜುಗಳಲ್ಲಿ ಬೇರೆ ಕಾಂಬಿನೇಶನ್ ಇರಲೂಬಹುದು) ಪದವಿಗೆ ಬಂದಾಗ ನಾಲ್ಕರ ಬದಲಾಗಿ ಯಾವುದಾದರೂ ಮೂರು ವಿಷಯಗಳನ್ನು ಅಧ್ಯಯನಕ್ಕೆ ಆರಿಸಿಕೊಳ್ಳಬೇಕಾಗುತ್ತದೆ. ಹೀಗಿರುವಾಗ ಅಂಬಿಕಾ ಕಾಲೇಜಿನಲ್ಲಿ ವಿದ್ಯಾರ್ಥಿಗಳು ತತ್ವಶಾಸ್ತ್ರದೊಂದಿಗೆ ಪತ್ರಿಕೋದ್ಯಮ, ಇಂಗ್ಲಿಷ್, ಸಂಸ್ಕೃತ, ಮನಃಶಾಸ್ತ್ರಗಳಿಂದ ನಿಗದಿಪಡಿಸಲಾದ ಎರಡು ವಿಷಯಗಳನ್ನು ಆಯ್ಕೆ ಮಾಡಿಕೊಂಡಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ಘೋಷಿಸಿರುವುದು, ಮನಃಶಾಸ್ತ್ರವನ್ನು ಕೂಡ ಒಂದು ಅಧ್ಯಯನ ವಿಷಯವಾಗಿ ಇಟ್ಟುಕೊಂಡಿರುವುದು ಪುತ್ತೂರು ವ್ಯಾಪ್ತಿಯಲ್ಲಿ ಮೊದಲ ಹಾಗೂ ಸ್ವಾಗತಾರ್ಹ ನಡೆಯೆನಿಸಿದೆ. ಅದರಲ್ಲೂ ಪತ್ರಿಕೋದ್ಯಮ, ಇಂಗ್ಲಿಷ್, ಮನಃಶಾಸ್ತ್ರ ಮತ್ತು ಪತ್ರಿಕೋದ್ಯಮ, ಕನ್ನಡ, ಮನಃಶಾಸ್ತ್ರ ಎಂಬ ಎರಡು ಕಾಂಬಿನೇಶ್‌ಗಳನ್ನು ಅಂಬಿಕಾ ಸಂಸ್ಥೆ ಒದಗಿಸಿಕೊಡುತ್ತಿರುವುದು ಅನೇಕ ಹೆತ್ತವರ ಹಾಗೂ ವಿದ್ಯಾರ್ಥಿಗಳ ಸಂತಸಕ್ಕೆ ಕಾರಣವೆನಿಸಿದೆ.

ರಾಕೇಶ್ ಕುಮಾರ್ ಕಮ್ಮಜೆ ಮುಖ್ಯಸ್ಥರು, ಪತ್ರಿಕೋದ್ಯಮ ವಿಭಾಗ ಅಂಬಿಕಾ ಪದವಿ ಕಾಲೇಜು, ಪುತ್ತೂರು ಮೊ: 9449102082

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.