ಗ್ರಾಮ ಸ್ವರಾಜ್ಯ ರಥಯಾತ್ರೆಗೆ ಅಡ್ಡಿ ಮಾಡಿದವರ ವಿರುದ್ದ ದೇಶದ್ರೋಹದ ಕೇಸ್ ದಾಖಲು ಮಾಡುವಂತೆ ಪರಿವಾರ ಸಂಘಟನೆಯಿಂದ ಕಬಕದಲ್ಲಿ ಪ್ರತಿಭಟಿಸಿ ಆಗ್ರಹ 

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
 • ನಾಳೆ ಆ.17 ರಂದು ನಡೆಯುವ ವೀರ ಸಾವರ್ಕರ್ ರಥ ಯಾತ್ರೆಯನ್ನು ತಾಕತ್ತಿದ್ದರೆ ತಡೆಯಲಿ – ಎಸ್ ಡಿ ಪಿ ಐ ಗೆ ಸವಾಲು

ಪುತ್ತೂರು: ಕಬಕದಲ್ಲಿ 75ನೇ ಸ್ವಾತಂತ್ರ್ಯ ಉತ್ಸವದ ಹಿನ್ನೆಲೆ ಸರಕಾರಿ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಆಯೋಜಿಸಿದ್ದ ಜನಜಾಗೃತಿ ಗ್ರಾಮ ಸ್ವರಾಜ್ಯ ರಥಯಾತ್ರೆ ಹೊರಟ್ಟಿದ್ದ ಸಂದರ್ಭದಲ್ಲಿ ರಥಕ್ಕೆಅಡ್ಡಿ ಪಡಿಸಿದ ದೇಶದ್ರೋಹಿ ಕೃತ್ಯ ಎಸಗಿದ್ದಾರೆ. ತಕ್ಷಣ ಆರೋಪಿಗಳ ವಿರುದ್ಧ ದೇಶದ್ರೋಹಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಬಿಜೆಪಿ ಮತ್ತು ಹಿಂದು ಪರಿವಾರ ಸಂಘಟನೆಯಿಂದ ಕಬಕ ಜಂಕ್ಷನ್ ಶ್ರೀ ಮಹಾದೇವಿ ದೇವಸ್ಥಾನದ ದ್ವಾರದ ಎದುರು ಪ್ರತಿಭಟನೆ ನಡೆಯಿತು.

ನಾಳೆ ಆ.17 ರಂದು ಪುತ್ತೂರಿನಲ್ಲಿ ವೀರ ಸಾವರ್ಕರ್ ರಥ ಯಾತ್ರೆಯನ್ನು ನಾವು ಮಾಡಲಿದ್ದು ಮುಂದಿನ ದಿನ ದೇಶ ವ್ಯಾಪಿಯಾಗಿ ರಥ ಯಾತ್ರೆ ಕೈಗೊಳ್ಳಲಾವುದು ತಾಕತ್ತಿದ್ದರೆ ಎಸ್ ಡಿ ಪಿ ಐ ರಥ ಯಾತ್ರೆಯನ್ನು ತಡೆಯಲಿ ಎಂದು ಪ್ರತಿಭಟನಾಕಾರರು ಸವಾಲು ಹಾಕಿದರು.

ಬಜರಂಗದಳ ದಕ್ಷಿಣ ಪ್ರಾಂತ ವಿಭಾಗ ಸಂಚಾಲಕ ಮುರಳಿಕೃಷ್ಣ ಹಸಂತಡ್ಕ, ಹಿಂದು ಜಾಗರಣ ವೇದಿಕೆ ಜಿಲ್ಲಾ ಮಾತೃಸುರಕ್ಷಾ ಪ್ರಮುಖ್ ಗಣರಾಜ್ ಭಟ್ ಕೆದಿಲ, ವಿಶ್ವಹಿಂದು ಪರಿಷರ್ ಮುಖಂಡ ಶರಣ್ ಪಂಪ್ ವೆಲ್, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಅಳ್ವ ಪ್ರತಿಭಟನೆಯಲ್ಲಿ ಮಾತನಾಡಿದರು. ಈ ಸಂದರ್ಭ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಹಿಂದು ಜಾಗರಣ ವೇದಿಕರಯ ಪ್ರಮುಖರಾದ ಅಜಿತ್ ಹೊಸಮನೆ, ಚಿನ್ಮಯ್ ರೈ ಈಶ್ವರಮಂಗಲ, ಕಬಕದ ಜಯರಾಮ, ವಿಶ್ವೇಶ್ವರ ಭಟ್ ಬಂಗಾರಡ್ಕ, ಪುರುಷೋತ್ತಮ ಮುಂಗ್ಲಿಮನೆ, ನಿತಿಶ್ ಕುಮಾರ್ ಶಾಂತಿವನ, ಬಜರಂಗದಳದ ಶ್ರೀಧರ್ ತೆಂಕಿಲ, ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ, ವಿಶಾಖ್ ರೈ, ನಗರಸಭೆ ಅಧ್ಯಕ್ಷ ಕೆ ಜೀವಂಧರ್ ಜೈನ್, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಬಿಜೆಪಿ ನಗರ ಯುವ ಮೋರ್ಚಾದ ಅಧ್ಯಕ್ಷ ಸಚಿನ್ ಶೆಣೈ, ಗ್ರಾಮಾಂತರ ಮಂಡಲದ ಅಧ್ಯಕ್ಷ ಸುನಿಲ್ ದಡ್ಡು, ಆರ್.ಸಿ.ನಾರಾಯಣ್, ಬಜರಂಗದಳದ ಹರೀಶ್ ದೋಳ್ಪಾಡಿ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

 

 

ಕಬಕ ಗ್ರಾ.ಪಂನಲ್ಲಿ ಗ್ರಾಮ ಸ್ವರಾಜ್ಯ ರಥ ಅಡ್ಡಿ – ಮೂವರು ವಶಕ್ಕೆ

ಕಬಕ ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯ ರಥಕ್ಕೆ ಎಸ್.ಡಿ.ಪಿ.ಐ ಕಾರ್ಯಕರ್ತರಿಂದ ತಡೆ – ಸ್ಥಳಕ್ಕೆ ಪುತ್ತೂರು ನಗರ ಠಾಣಾ ಪೊಲೀಸರ ಆಗಮನ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

 1. Faizal bellare

  ಕಾಲ್ಕೆರೆದು ಸಮಾಜದ ಸ್ವಾಸ್ಥ್ಯವನ್ನು ಹಾಲು ಮಾಡುವುದು ಅದರಿಂದ ರಾಜಕೀಯ ಲಾಭ ಪಡೆಯುವುದು ಸಂಘಪರಿವಾರದ ವಾಡಿಕೆ. ನಿವು ರಥ ಯಾತ್ರೆ ಮಾಡಿ ಸಾವರ್ಕರ್ ನೊಂದಿಗೆ ಗೋಡ್ಸೆಯನ್ನು ಸೇರಿಸಿ.ಪಂಥಹ್ವಾನ ಮಾಡುವಾಗ ಯಾರೊಂದಿಗೆ ಎಂಬ ನೆನಪಿರಲಿ. ನಿಮ್ಮ ಸವಾಲನ್ನು ದೌರ್ಜನ್ಯಕ್ಕೊಳಪಟ್ಟವರಿಗೆ ಸಂವಿಧಾನ ನೀಡಿದ ಹಕ್ಕನ್ನು ಉಪಯೋಗಿಸಿ ಸೋಶಿತ ಸಮುದಾಯ ಸ್ವೀಕರಿಸಲಿದೆ.
  ನಿಮ್ಮಲ್ಲಿ ಅಧಿಕಾರ ಇದೆ……
  ನಮ್ಮಲ್ಲಿ ನ್ಯಾಯ ಇದೆ…….
  ನಿಮ್ಮಲ್ಲಿ ಸುಳ್ಳಿನಿಂದ ಕಟ್ಟಿದ ಗೋಪುರ ಇದೆ….
  ನಮ್ಮಲ್ಲಿ ಸತ್ಯದ ಮೇಲೆ ಇರುವ ಬದ್ಧತೆ ಇದೆ…..
  ಹೋರಾಟ ಮುಂದುವರಿಯಲಿ….
  ನಿಮ್ಮ ಸುಳ್ಳಿನ ಗೋಪುರದ ಮುಂದೆ ಸತ್ಯ ಎಂಬ ಬೆಳಕು ಪ್ರಜ್ವಲಿಸಲಿದೆ….ಆ ದಿನ ಸಾವರ್ಕರ್ ಸಂತತಿಗಳು ಜನರ ಮುಂದೆ ಮುಖ ತೋರಿಸಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ…..
  ಕಳೆದ ಪ್ರಪಂಚದ ಇತಿಹಾಸದ ಪುಟಗಳು ಸಾರುವುದೂ ಇದನ್ನೇ ಆಗಿದೆ….ಮುಂದಿನ ಇತಿಹಾಸ ನಡೆಯಲಿರುವುದೂ ಇದೇ ಆಗಿದೆ…..
  ಮಿಥ್ಯೆಯ ವಿರುದ್ಧ ದ ಹೋರಾಟ ಇನ್ನೂ ತೀವ್ರಗೊಳ್ಳಲಿದೆ.

  Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.