ಪುತ್ತೂರು: ಸ್ಮಾರ್ಟ್ ಲಿವಿಂಗ್ ಫೌಂಡೇಶನ್ (ಇಂಟರ್ ನ್ಯಾಷನಲ್) ಆಯೋಜಿಸಿದ ಪ್ರಥಮ ಶೈಖ್ ಝಾಇದ್ ಅವಾರ್ಡ್ ವಿದ್ವಾಂಸರೂ ಸಾಮಾಜಿಕ ಕಾಳಜಿಯುಳ್ಳ ಕಾರ್ಯಕರ್ತರೂ ಆದ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಲ ಅವರಿಗೆ ಪ್ರದಾನ ಮಾಡಲಾಯಿತು.
ಮರ್ಕಝ್ ನಾಲೆಜ್ ಸಿಟಿ ಸಿಇಒ ಹಾಗೂ ಪ್ರಶಸ್ತಿ ಸಮಿತಿಯ ಚೆಯರ್ ಮೆನ್ ಡಾ.ಅಬ್ದುಸ್ಸಲಾಂ ಮುಹಮ್ಮದ್ ಈ ಪ್ರಶಸ್ತಿ ಘೋಷಿಸಿದ್ದರು. ಊರಿನಲ್ಲಿ ಹಾಗೂ ಗಲ್ಫ್ ರಾಷ್ಟ್ರ ಗಳಲ್ಲಿ ಜನಸಾಮಾನ್ಯರಿಗೆ ಖುರ್ಆನಿನ ಆಶಯಗಳನ್ನು ತಲುಪಿಸುವವರಿಗೆ ಹಾಗೂ ಸಮುದಾಯದ ಸೇವೆ ಮಾಡುವವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ ಎಂದು ಸ್ಮಾರ್ಟ್ ಲಿವಿಂಗ್ ಫೌಂಡೇಶನ್ ಕೋ- ಆರ್ಡಿನೇಟರ್ ಗಳಾದ ಪಿ.ಸಿ.ಮುಹಮ್ಮದ್ ಜಾಫರ್ ಹಾಗೂ ಸಿರಾಜ್ ಪುತ್ತನ್ಪಳ್ಳಿ ತಿಳಿಸಿದರು. ಕಾರ್ಯಕ್ರಮದಲ್ಲಿ ಶೌಕತ್ ಬುಖಾರಿ ಅಲ್ ನಈಮಿ ಪ್ರಶಸ್ತಿ ಪ್ರದಾನ ಮಾಡಿದರು.
ಅಬ್ದುಲ್ ಹಮೀದ್ ಸಅದಿರವರು ರಾಜ್ಯ ಎಸ್.ಎಸ್.ಎಫ್ ಇದರ ಸ್ಥಾಪಕ ಕಾರ್ಯದರ್ಶಿ, ಎರಡು ಬಾರಿ ಕೆ.ಸಿ.ಎಫ್. ಯು.ಎ.ಇ. ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾಗಿದ್ದರು. ಪ್ರಸ್ತುತ ಕೆ.ಸಿ.ಎಫ್ ಅಂತರಾಷ್ಟ್ರೀಯ ಸಮಿತಿಯ ಹಣಕಾಸು ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಬುದಾಬಿ ಸರಕಾರದ ಔಕಾಫ್ ಅಧೀನದಲ್ಲಿರುವ ಮುಸಫ್ಫ ಶಾಬಿಯ ಮಸೀದಿಯಲ್ಲಿ ಇಮಾಮ್ ಹಾಗೂ ಖತೀಬ್ ಆಗಿ ಸೇವೆಸಲ್ಲಿಸುತ್ತಿದ್ದಾರೆ. ಯು.ಎ.ಇ.ಯ ಹಲವಾರು ಸುನ್ನಿ ಸಂಘ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯಚರಿಸುತ್ತಿದ್ದಾರೆ.