HomePage_Banner
HomePage_Banner
HomePage_Banner
HomePage_Banner

ನಗರಸಭಾ ವ್ಯಾಪ್ತಿಯ ಬನ್ನೂರು ವಾರ್ಡ್’ಗೆ ಎಸ್.ಡಿ.ಪಿ.ಐ ಜಿಲ್ಲಾ ನಿಯೋಗ ಭೇಟಿ- ಪ್ರಗತಿ ಪರಿಶೀಲನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಎಸ್.ಡಿ.ಪಿ.ಐ ಪಕ್ಷದ ಝೊಹರಾ ಅವರು ಪ್ರತಿನಿಧಿಸುತ್ತಿರುವ ಪುತ್ತೂರು ನಗರಸಭಾ ವ್ಯಾಪ್ತಿಯ ಬನ್ನೂರು ವಾರ್ಡಿಗೆ ಆ 31ರಂದು ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ಅಥಾವುಲ್ಲ ಜೋಕಟ್ಟೆ ನೇತೃತ್ವದ ಜಿಲ್ಲಾ ನಿಯೋಗವು ಭೇಟಿ ನೀಡಿ ವಾರ್ಡಿನಲ್ಲಿ ಕೈಗೊಂಡ ಕೆಲಸ ಕಾರ್ಯಗಳನ್ನು ವೀಕ್ಷಿಸಿ ಪ್ರಗತಿ ಪರಿಶೀಲನೆ ನಡೆಸಿದರು.

ನಂತರ ವಾರ್ಡಿನ ನಾಗರಿಕರೊಂದಿಗೆ ಸಮಾಲೋಚನೆ ನಡೆಸಿ ನಿಯೋಗವು ವಾರ್ಡ್ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದರು.

ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಾದ ಅನ್ವರ್ ಸಾದತ್ ಬಜತ್ತೂರು, ಜಮಾಲ್ ಜೋಕಟ್ಟೆ ನಿಯೋಗದಲ್ಲಿದ್ದರು.


ಈ ಸಂದರ್ಭದಲ್ಲಿ ಸ್ಥಳೀಯ ನಗರ ಸಭಾ ಸದಸ್ಯೆ ಝೊಹರಾ, ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಕೆ ಎ ಸಿದ್ದೀಕ್ ಪುತ್ತೂರು, ಉಪಾಧ್ಯಕ್ಷ ಇಬ್ರಾಹಿಂ ಸಾಗರ್, ಕಾರ್ಯದರ್ಶಿ ಅಶ್ರಫ್ ಬಾವು, ಸಮಿತಿ ಸದಸ್ಯ ಪಿಬಿಕೆ ಮುಹಮ್ಮದ್, ನಗರಸಭಾ ಸಮಿತಿ ಅಧ್ಯಕ್ಷ ಸಿರಾಜ್ ಎ.ಕೆ, , ಸ್ಥಳೀಯ ಮುಖಂಡರಾದ , ಜುನೈದ್ ಸಾಲ್ಮರ, ಲತೀಫ್ ಸಾಲ್ಮರ ಇಫಾಝ್ ಬನ್ನೂರು, ಶರೀಫ್ ಬನ್ನೂರು, ಇಬ್ರಾಹಿಂ ಕೆ ಎಂ ಹಾಗೂ ಇತರರು ಉಪಸ್ಥಿತರಿದ್ದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.