HomePage_Banner
HomePage_Banner
HomePage_Banner
HomePage_Banner

ಕಾವು: ನನ್ಯ ಶಾಲಾ ನಿವೃತ್ತ ಸಹಶಿಕ್ಷಕ ಕೃಷ್ಣಮುರಾರಿ ಇವರಿಗೆ ಬೀಳ್ಕೊಡುಗೆ ಸಮಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಕಾವು:ದಕ್ಷಿಣ ಕನ್ನಡ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆ ನನ್ಯ ದಲ್ಲಿ ಸುಮಾರು 16 ವರ್ಷಗಳ ಕಾಲ ಸಹಶಿಕ್ಷಕರಾಗಿ ಸೇವೆ ಸಲ್ಲಿಸಿ ಇಂದು ಸೇವಾ ನಿವೃತ್ತಿ ಗೊಂಡ ಕೃಷ್ಣ ಮುರಾರಿ.ಬಿ ಇವರಿಗೆ ಸನ್ಮಾನ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮ ಆ 31 ರಂದು ನನ್ಯ ಶಾಲೆಯಲ್ಲಿ ನಡೆಯಿತು.
ಪುತ್ತೂರು ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾದ ಲಕ್ಷ್ಮಣ ನಾಯ್ಕ ಮಾತನಾಡಿ ನಿವೃತ್ತ ಸಹ ಶಿಕ್ಷಕರ ಸಮಯಪ್ರಜ್ಞೆ, ಕರ್ತವ್ಯ ನಿಷ್ಠೆ,ಪ್ರಾಮಾಣಿಕತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ನಿವೃತ್ತ ಜೀವನಕ್ಕೆ ಶುಭಾಹಾರೈಸಿದರು.

ಕ್ಷೇತ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ತನುಜಾ ಹಾಗೂ ಕಾವು ಮೇನಾಲ ಕ್ಲಸ್ಟರ್ ನ ಸಿಆರ್ ಪಿ ಜಯಂತಿ ಇವರು ಇಲಾಖಾ ವತಿಯಿಂದ ಹಾಗೂ ಸರಕಾರಿ ನೌಕರರ ಸಂಘದ ಶಿಕ್ಷಕರ ಪ್ರತಿನಿಧಿ ರಾಮಣ್ಣ ರೈ ಶುಭಹಾರೈಸಿದರು. ನನ್ಯ ಶಾಲಾ ಮುಖ್ಯಗುರುಗಳಾದ ನಾಗವೇಣಿ ಕೆ ಇವರು ಪ್ರಾಸ್ತಾವಿಕ ಮಾತುಗಳೊಂದಿಗೆ ಅಭಿನಂದನೆ ತಿಳಿಸಿ ನಿವೃತ್ತರ ಕಿರುಪರಿಚಯ ಮಾಡಿದರು. ನಿವೃತ್ತ ಸಹಶಿಕ್ಷಕ ಕೃಷ್ಣ ಮುರಾರಿ ಸೇವಾ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.

ಸನ್ಮಾನ ಕಾರ್ಯಕ್ರಮ : ಶಾಲಾ ವತಿಯಿಂದ ನಿವೃತ್ತರಿಗೆ ಶಾಲು ಹೊದಿಸಿ ,ಫಲಪುಷ್ಪ ಸ್ಮರಣಿಕೆ ನೀಡಿ ಗೌರವಿಸಲಾಯಿತು ಹಾಗೂ ಪುತ್ತೂರು ತಾಲೂಕು ಶಿಕ್ಷಕರ ಸಂಘದ ವತಿಯಿಂದ ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಲಾಯಿತು ಮತ್ತು ಅಕ್ಷರ ದಾಸೋಹ ಸಿಬ್ಬಂದಿಗಳಾದ ಗಾಯತ್ರಿ ಹಾಗೂ ಕವಿತಾ ನಿವೃತ್ತರಿಗೆ ನೆನಪಿನ ಕಾಣಿಕೆ ನೀಡಿದರು.

ಕಂಪ್ಯೂಟರ್ ಕೊಡುಗೆ ಸುಮಾರು 16 ವರ್ಷಗಳ ಕಾಲ ಸಹ ಶಿಕ್ಷಕರಾಗಿ ಸೇವಾ ಸಲ್ಲಿಸಿದ ನನ್ಯ ಶಾಲೆಗೆ ತಮ್ಮ ನೆನಪಿನ ಕಾಣಿಕೆಯಾಗಿ ಕಂಪ್ಯೂಟರ್ ಯಂತ್ರವನ್ನು ಕೃಷ್ಣಮುರಾರಿ ಯವರು ಶಾಲೆಗೆ ಹಸ್ತಾಂತರ ಮಾಡಿದರು
ಎಸ್ ಡಿ ಯಂ ಸಿ ಅಧ್ಯಕ್ಷರಾದ ಪ್ರತಿಮಾ ನಿಧಿಮುಂಡ ಪ್ರಾರ್ಥಿಸಿದರು, ನನ್ಯ ಶಾಲಾ ಸಹಶಿಕ್ಷಕಿ ಮಮತಾ ಹೆಚ್ ಸ್ವಾಗತಿಸಿದರು,ಸಹ ಶಿಕ್ಷಕಿ ಭವಾನಿ ಎಂ ವಂದಿಸಿದರು. 

ಕಾರ್ಯಕ್ರಮ ದಲ್ಲಿ ತಾಲೂಕು ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ವೇದಾವತಿ ಹಾಗೂ ಪ್ರತಿನಿಧಿಗಳಾದ ನಾಗೇಶ್ ಪಾಟಾಳಿ,ಶಾಂತಿ ಮೊರಾಶ್, ಕಾವು ಮಾದರಿ ಶಾಲೆಯ ಪದವಿದರೇತರ ಮುಖ್ಯಗುರುಳಾದ ಹುಕ್ರಪ್ಪ ನಾಯ್ಕ ಸಹ ಶಿಕ್ಷಕ ಭಾಸ್ಕರ ಎನ್ , ಅಂಗನವಾಡಿ ಕಾರ್ಯಕರ್ತೆ ಸೀತಾರಾತ್ನ ಹಾಗೂ ಸಹಾಯಕಿ ಶಾರದಾ ಉಪಸ್ಥಿತರಿದ್ದರು

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.