HomePage_Banner
HomePage_Banner
HomePage_Banner
HomePage_Banner

ಪರ್ಪುಂಜ: ಸ್ನೇಹ ಯುವಕ ಮಂಡಲ, ಮಹಿಳಾ ಮಂಡಲದಿಂದ ಕೃಷ್ಣಜನ್ಮಾಷ್ಠಮಿ ಆಚರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಒಳಮೊಗ್ರು ಗ್ರಾಮದ ಪಪರ್ಪುಂಜ ಸ್ನೇಹ ಯುವಕ ಮಂಡಲ ಮತ್ತು ಸ್ನೇಹ ಮಹಿಳಾ ಮಂಡಲದ ಆಶ್ರಯದಲ್ಲಿ ೧೭ ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸಲಾಯಿತು. ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಕೋಟಿ ಚೆನ್ನಯ ಗರಡಿಯಲ್ಲಿ ಪೂಜೆ ನಡೆದು ಗರಡಿಯ ಆಡಳಿತ ಮೊಕ್ತೇಸರ ಸಂಜೀವ ಪೂಜಾರಿ ಕೂರೇಲುರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಗರಡಿಯ ಅರ್ಚಕ ಹರೀಶ್ ಶಾಂತಿ, ಸ್ನೇಹ ಯುವಕ ಮಂಡಲದ ಗೌರವ ಸಲಹೆಗಾರ ಮಿತ್ರದಾಸ್ ರೈ ಡೆಕ್ಕಳ, ಪ್ರೇಮ್‌ರಾಜ್ ರೈ ಪರ್ಪುಂಜ, ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಕೆ.ಪಲ್ಲತ್ತಾರು, ಉಪಾಧ್ಯಕ್ಷೆ ಸುಂದರಿ, ಸ್ನೇಹ ಯುವಕ ಮಂಡಲ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಕಾರ್ಯದರ್ಶಿ ಜೀವನ್ ಅಮೀನ್, ಸ್ನೇಹ ಮಹಿಳಾ ಮಂಡಲ ಅಧ್ಯಕ್ಷೆ ರೇಖಾ ರೈ, ಕಾರ್ಯದರ್ಶಿ ಪವಿತ್ರ ಹಾಗೂ ಪದಾಧಿಕಾರಿಗಳು ಸದಸ್ಯರುಗಳು, ಸ್ಥಳೀಯರಾದ ಬಾರಿಕೆ ನಾರಾಯಣ ರೈ, ಗುತ್ತಿಗೆದಾರ ಯುವರಾಜ್ ಶೆಟ್ಟಿ ಮೇರ್ಲ,ಸಂತೋಷ್ ಕುಮಾರ್ ರೈ ಕೈಕಾರ, ಅನಿಲ್ ರೈ ಬಾರಿಕೆ, ಯಮುನಾ, ಗಂಗಾಧರ್, ರಾಜೀವಿ,ಮೋಹನಾಂಗಿ,ಚಂದ್ರಾವತಿ, ಗ್ರೇಟಾ, ಪ್ರೇಮಾ, ಉಪಸ್ಥಿತರಿದ್ದರು. ಕೋವಿಡ್ 19 ನಿಯಮದಂತೆ ಕಾರ್ಯಕ್ರಮ ನಡೆಯಿತು. ಅಂಗನವಾಡಿ ಪುಟಾಣಿಗಳಿಂದ ಹಿಡಿದು ಶಾಲಾ ಕಾಲೇಜುಗಳ, ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ನಡೆಯಿತು. ವಿಜೇತ ಸ್ಪರ್ಧಿಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು. ಕಾರ್ಯಕ್ರಮದ ನಡುವಲ್ಲಿ ಆಗಮಿಸಿದ ಪುತ್ತೂರು ಶಾಸಕ ಸಂಜೀವ ಮಠಂದೂರುರವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಶುಭ ಹಾರೈಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.