HomePage_Banner
HomePage_Banner
HomePage_Banner
HomePage_Banner

ಕೃಷಿಕರ ಬದುಕು ಯಾಂತ್ರಿಕರಣ ಆಗಬಾರದು ಕೃಷಿ ಯಾಂತ್ರಿಕರಣ ಆಗಬೇಕು ಪರಿಶಿಷ್ಟ ಜಾತಿ ಉಪಯೋಜನೆಯಡಿ ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೋವಿಡ್ ಸಂದರ್ಭದಲ್ಲಿ ಬದುಕುವುದೇ ಕಷ್ಟ ಎಂದಾಗ ಕೃಷಿಕ ನೆಮ್ಮದಿಯಿಂದ ಬದುಕುತ್ತಾನೆ. ಇದಕ್ಕೆ ಕಾರಣ ಆತನ ಕೃಷಿ. ಆ ಕೃಷಿ ಯಾಂತ್ರಿಕರಣವಾದಾಗ ಇನ್ನಷ್ಟು ಅಭಿವೃದ್ಧಿ ಕಾಣಬಹುದು. ಆದರೆ ಕೃಷಿಕರ ಬದುಕು ಯಾಂತ್ರಿಕರಣ ಆಗಬಾರದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಮೊಟ್ಟೆತ್ತಡ್ಕಲ್ಲಿರುವ ಕೇಂದ್ರ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ನಡೆದ ಪರಿಶಿಷ್ಟ ಜಾತಿ ಉಪಯೋಜನೆಯಡಿ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಣಿಜ್ಯ ಬೆಳೆ ಬೆಳೆಯುತ್ತಾರೆ. ಭತ್ತ ಬೆಳೆಯುವುದಿಲ್ಲ. ಇಂತಹ ಸಂದರ್ಭದಲ್ಲಿ ಹಡಿಲು ಭೂಮಿಯಲ್ಲಿ ಭತ್ತ ಬೆಳೆಯುವ ಪ್ರಯತ್ನ ಮಾಡಿದ್ದೇವೆ. ಅಕ್ಕಿ ಉತ್ಪಾದನೆಯಲ್ಲಿ ಸ್ವಾವಲಂಭಿಯಾಗಬೇಕೆಂಬುದು ನಮ್ಮ ಉದ್ದೇಶ. ಕೃಷಿಯಲ್ಲೂ ಬೇರೆ ಬೇರೆ ಬೆಳೆಗಳನ್ನು ಬೆಳೆಯುವ ಮೂಲಕ ಆರ್ಥಿಕತೆಯನ್ನು ಸುದಾರಿಸಲು ಸಾಧ್ಯ. ಇಂತಹ ಸಂದರ್ಭದಲ್ಲಿ ಕೃಷಿ ಚಟುವಟಿಕೆ ಸೇರಿದಂತೆ ಇತರ ಕೆಲಸದ ಮೂಲಕ ಸ್ವಾವಲಂಭಿಯಾಗಬೇಕೆಂದು ಸರಕಾರ ಒಂದಷ್ಟು ವಿಶೇಷ ಅನುದಾನ ನೀಡುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಬಂಧುಗಳ ಆರ್ಥಿಕ ಅಭಿವೃದ್ದಿ ಆಗಬೇಕೆಂದು ಸಂವಿಧಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾತಿ ನೀಡಿದ ಮಾನದಂಡದಂತೆ ಪ್ರತಿ ಇಲಾಖೆಯಲ್ಲೂ ಕೂಡಾ ಶೇಕಡವಾರು ಮೀಸಲಾತಿ ಪರಿಶಿಷ್ಟ ಜಾತಿ, ಪಂಗಡದವರಿಗೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಕೃಷಿ ಸಂಶೋಧನಾ ಕೇಂದ್ರಗಳಿಗೆ ಸರಕಾರ ನೀಡುವ ಅನುದಾದ ಒಂದಷ್ಟು ಸ್ಥಳೀಯ ಪರಿಶಿಷ್ಟ ಜಾತಿ ಬಂದುಗಳಿಗೆ ತಮ್ಮ ಜೀವನಕ್ಕೆ ವಿವಿಧ ಸೌಲಭ್ಯ ವಿತರಣೆ ಮಾಡಲಾಗುತ್ತಿದೆ. ಈ ಸೌಲಭ್ಯ ಪಡೆದ ಕುಟುಂಬ ನೂರಕ್ಕೆ ನೂರು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ನೋಡೆಲ್ ಅಧಿಕಾರಿ ಡಾ.ಈರ್ ದಾಸಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಭಾರತೀಯ ಕೃಷಿ ಸಂಶೋಧನಾ ಯೋಜನೆಯಡಿಯಲ್ಲಿ ೨೦೨೦-೨೧ ರಲ್ಲಿ ಬಿಡುಗಡೆಗೊಂಡ ಅನುದಾನದಲ್ಲಿ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಮಾಡುತ್ತಿದ್ದೇವೆ. ಕಳೆ ತೆಗೆಯುವ ಯಂತ್ರ, ಏಣಿ, ಔಷಧಿ ಸಂಪಡಣೆ ಯಂತ್ರ, ಹೊಲಿಗೆ ಮೆಷಿನ್, ಸೋಲಾರ್ ಲ್ಯಾಂಪ್, ಹಾಳೆ ತಟ್ಟೆ ಮಾಡುವ ಮೆಷಿನ್ ವಿತರಣೆ ಮಾಡುತ್ತೆವೆ. ಹಂತ ಹಂತವಾಗಿ ಸೌಲಭ್ಯ ವಿತರಣೆ ನಡೆಯುತ್ತಿದ್ದು, ಒಟ್ಟು ೨೫ ಕಳೆ ಕತ್ತರಿಸುವ ಯಂತ್ರ, ೩೫ ಸ್ಪ್ರೇಯರ‍್ಸ್, ೧೦ ಪವರ್ ಪೇಡರ್, ೩ ಗಟರ್ ಸ್ಪ್ರೇಯರ್, ೮ ಅಲ್ಯುಮೀನಿಯಂ ಏಣಿ, ೫೫ ಹೊಲಿಗೆ ಯಂತ್ರ, ೯ ಹಾಳೆತಟ್ಟೆ ಮಾಡುವ ಯಂತ್ರ, ೬೫ ಸೋಲರ್ ಲ್ಯಾಂಪ್, ೨೫೦ ನೀರಿನ್ ಟ್ಯಾಂಕ್ ಖರೀದಿಸಲಾಗಿದೆ. ಈಗಾಗಲೇ ಹೈನುಗಾರಿಕೆಯಲ್ಲಿ ಗೋವನ್ನು ತೊಳೆಯಲು ಬ್ರಶ್, ಕೆಚ್ಚಳು ಯಂತ್ರ ದ್ರಾವಣ, ಬಕೇಟ್ ಕೊಡುವ ಯೋಜನೆಗೆ ಫಲಾನುಭವಿಗಳ ಆಯ್ಕೆ ನಡೆಯುತ್ತಿದೆ. ಕೈ ತೋಟಕ್ಕಾಗಿ ಹಣ್ಣು, ತರಕಾರಿ ಬೀಜಗಳು, ಪೈಪ್ ಸಲಕರಣೆಗಳು ಸಿಗಲಿದ.ಎ ಈ ಯೋಜನೆಯಲ್ಲಿ ರೂ. ೨೫ ಲಕ್ಷ ಅನುದಾನ ಬಿಡಗಡೆಯಾಗಿದೆ ಎಂದು ಅವರು ಮಾಹಿತಿ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಗಾಯತ್ರಿ ಅವರು ಫಲಾನುಭವಿಗಳ ಆಯ್ಕೆಗೆ ಸಂಬಂಧಿಸಿ ವಿವಿಧ ಮಾಹಿತಿ ನೀಡಿದರು. ಡಾ.ಜೆ ಡಿ ಅಡಿಗ, ಡಾ.ಬಬ್ಲಿಮೋಗ್ ಅತಿಥಿಗಳನ್ನು ಗೌರವಿಸಿದರು. ಗೇರು ಸಂಶೋಧನಾಲಯದ ಪ್ರಧಾನ ವಿಜ್ಞಾನಿ ಪಿ.ಎನ್ ರವಿಪ್ರಸಾದ್ ಸ್ವಾಗತಿಸಿದರು. ವಿಜ್ಞಾನಿ ಡಾ.ರಾಜ್ಯಶೇಖರ್ ವಂದಿಸಿದರು. ಗೇರು ಸಂಶೋಧನಾಲಯದ ತಾಂತ್ರಿಕ ಅಧಿಕಾರಿ ಪ್ರಕಾಶ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ದ್ಯೇಯಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತ್ತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.