HomePage_Banner
HomePage_Banner
HomePage_Banner
HomePage_Banner

ಪುತ್ತೂರು ತಾಲೂಕು ಬಂಟರ ಸಂಘದ ವತಿಯಿಂದ ಹಿರೇಬಂಡಾಡಿಯ ಅನುರಾಧಾ ಆರ್. ಶೆಟ್ಟಿಯವರಿಗೆ ಕೃಷಿ ಪ್ರಶಸ್ತಿ ಪ್ರದಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಬಂಟರ ಸಂಘ ಪುತ್ತೂರು ತಾಲ್ಲೂಕು ಸಮಿತಿ ಕೊಡ ಮಾಡುವ ಕೃಷಿ ಪ್ರಶಸ್ತಿಗೆ ಹಿರೇಬಂಡಾಡಿ ಗ್ರಾಮದ ದರ್ಬೆ ನಿವಾಸಿ, ಉಪ್ಪಿನಂಗಡಿಯ ಜವುಳಿ ಉದ್ಯಮಿಯಾಗಿ, ಜೇಸಿ ಸಂಸ್ಥೆಯಲ್ಲಿ ಗುರುತಿಸಿಕೊಂಡಿದ್ದ ದಿವಂಗತ ರಾಜೇಂದ್ರ ಶೆಟ್ಟಿಯವರ ಪತ್ನಿ ಶ್ರೀಮತಿ ಅನುರಾಧಾ ಆರ್. ಶೆಟ್ಟಿ ಆಯ್ಕೆಯಾಗಿದ್ದು, ಇವರಿಗೆ ಪ್ರಶಸ್ತಿ ಪ್ರದಾನ ಕಾರ‍್ಯಕ್ರಮ ಸೆ. 1ರಂದು ಜರಗಿತು.

ಕೋವಿಡ್ ನಿಯಮಾನುಸಾರ ರವೀಂದ್ರ ದರ್ಬೆಯವರ ಮನೆಯಲ್ಲಿ ನಡೆದ ಸರಳ ಕಾರ‍್ಯಕ್ರಮದಲ್ಲಿ ಪುತ್ತೂರು ತಾಲ್ಲೂಕು ಬಂಟರ ಸಂಘದ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಪ್ರಶಸ್ತಿ ಪ್ರದಾನ ಮಾಡಿದರು.

ಸಮಾರಂಭದಲ್ಲಿ ಬಂಟರ ಸಂಘದ ಪದಾಧಿಕಾರಿಗಳಾದ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಕಡಮಜಲು ಸುಭಾಸ್ ರೈ, ನಿತ್ಯಾನಂದ ಶೆಟ್ಟಿ ಮನವಳಿಕೆ, ಎನ್. ಚಂದ್ರಹಾಸ ಶೆಟ್ಟಿ, ಅಶೋಕ್ ಕುಮಾರ್ ರೈ ನೆಕ್ಕರೆ, ಜಗಜೀವನ್‌ದಾಸ್ ರೈ ಚಿಲ್ಮೆತ್ತಾರು, ದಯಾನಂದ ರೈ ಮನವಳಿಕೆ, ರೋಷನ್ ರೈ, ಜಯರಾಜ್ ಭಂಡಾರಿ, ಬಾರಿಕೆ ನಾರಾಯಣ ರೈ, ವಿಕ್ರಂ ಶೆಟ್ಟಿ, ಜಯಕುಮಾರ್ ರೈ, ಸಬಿತಾ ಭಂಡಾರಿ, ಮಾಧವಿ ರೈ ಬಿ., ವಿವೇಕಾನಂದ ಶೆಟ್ಟಿ, ಜಯರಾಮ ರೈ ಮಿತ್ರಂಪಾಡಿ, ರಂಜಿನಿ ಮತ್ತು ಪ್ರಶಸ್ತಿ ಪುರಸ್ಕೃತ ಅನುರಾಧಾ ಶೆಟ್ಟಿಯವರ ಅತ್ತೆ ಯಶೋಧ ಶೆಟ್ಟಿ ಉಪಸ್ಥಿತರಿದ್ದರು. ರಾಕೇಶ್ ರೈ ಕೆಡೆಂಜಿ ಸ್ವಾಗತಿಸಿ, ರವೀಂದ್ರ ದರ್ಬೆ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.