HomePage_Banner
HomePage_Banner
HomePage_Banner
HomePage_Banner

ನಗರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಹಿನ್ನೆಲೆ ಪುರಸಭೆ, ನಗರಸಭೆಯ ಮಾಜಿ ಸದಸ್ಯರುಗಳ ಸಮ್ಮಿಲನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನಗರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಹಾಗೂ ಅಧಿಕಾರವನ್ನು ಮರು ಪಡೆಯುವ ಹಿನ್ನೆಲೆಯಲ್ಲಿ ಪುತ್ತೂರು ನಗರ ಪ್ರದೇಶದ ಎಲ್ಲಾ ವಾರ್ಡ್‌ಗಳಲ್ಲಿ ಈ ಹಿಂದೆ ಸದಸ್ಯರುಗಳಾಗಿ ಸೇವೆ ಸಲ್ಲಿಸಿರುವ ಹಿರಿಯ-ಕಿರಿಯ ಸದಸ್ಯರುಗಳ ಸಮ್ಮಿಲನ ಕಾರ್ಯವು ಆ.30 ರಂದು ಪುತ್ತೂರು-ಬಪ್ಪಳಿಗೆ ಆಶ್ಮಿ ಕಂಫರ್ಟ್‌ನಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿರವರ ಅಧ್ಯಕ್ಷತೆಯಲ್ಲಿ ಜರಗಿತು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಫಝಲ್ ರಹೀಂರವರು ಮಾತನಾಡಿ, ಪ್ರಸ್ತುತ ಏರ್ಪಡಿಸಿರುವ ಕಾರ್ಯಕ್ರಮ ತುಂಬಾ ಖುಷಿಯಾಯಿತು. ವಿವಿಧ ರೂಪಗಳಲ್ಲಿ ನಾವು ಆಗಾಗ್ಗೆ ಒಂದೆಡೆ ಒಂದಾಗುತ್ತಿದ್ದರೆ ಪಕ್ಷದ ಬೆಳವಣಿಗೆಗೆ ಪೂರಕವಾಗುತ್ತದೆ ಎಂದರು. ನಗರಸಭೆ ಮಾಜಿ ಸದಸ್ಯ ಸೂತ್ರಬೆಟ್ಟು ಜಗನ್ನಾಥ ರೈಯವರು ಮಾತನಾಡಿ, ಪಕ್ಷದ ಚಿಹ್ನೆಯಲ್ಲಿ ಸ್ಪರ್ಧಿಸಿ ಮಾಜಿಗಳಾದ ಬಳಿಕ ಕೇಳುವವರೇ ಇಲ್ಲದಾಗಿದೆ. ನಮಗೂ ಮನಸಿನಲ್ಲಿ ಒಂದು ನೋವಿತ್ತು. ಈಗ ತುಂಬಾ ಒಳ್ಳೆಯ ಕೆಲಸ ನಡೆದಿದೆ. ನಮಗೆ ಕೆಲವೊಂದು ಬೇಸರಗಳಿದೆ ಅದನ್ನು ಈಗ ಹೇಳುವುದಿಲ್ಲ ಎಂದು ಹೇಳಿದರು.

ನಗರಸಭೆ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಮಾತನಾಡಿ, ನಾವು ಹಲವಾರು ವರುಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ಆದರೆ ಅವಕಾಶ ಸಿಗುವುದು ಬಹಳ ಕಡಿಮೆ. ಬೇರೆ ಪಕ್ಷಗಳಲ್ಲಿ ತೊಡಗಿಸಿಕೊಂಡು ಹಲವಾರು ಅವಕಾಶ ಪಡೆದುಕೊಂಡವರು ನಮ್ಮ ಪಕ್ಷದ ಅಧಿಕಾರ ಪಡೆಯುವಂತಾಗಿದೆ. ಇದು ತುಂಬಾ ಬೇಸರವಾಗುತ್ತದೆ. ನಾವೆಲ್ಲ ಪಕ್ಷ ಉಳಿಸಿಕೊಳ್ಳಲು ಒಂದಾಗಬೇಕಿದೆ ಎಂದರು.

ಪುರಸಭೆ ಮಾಜಿ ಸದಸ್ಯ ಎನ್.ಕೆ ಜಗನ್ನೀವಾಸ್ ರಾವ್ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಎಲ್ಲಾ ಜಾತಿ, ಮತ, ಧರ್ಮದ ಜನರು ಒಟ್ಟಾಗಿ ಇರುವುದನ್ನು ಕಾಣುವ ಅವಕಾಶವಿದೆ. ಜಾತ್ಯಾತೀತ ನಿಲುವಿನಲ್ಲಿ ಬದ್ಧರಾಗಿ ಸಾಮಾಜಿಕ ನ್ಯಾಯ ಸಿಗಬೇಕಾದರೆ ಅದು ಕಾಂಗ್ರೆಸ್‌ನಿಂದ ಮಾತ್ರ ಸಾದ್ಯ. ನಾವು ಎಲ್ಲರೂ ಪಕ್ಷದ ಕೆಲಸವನ್ನು ನಿಯತ್ತಾಗಿ ಮಾಡೋಣ, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರೋಣ ಎಂದರು. ನಗರಸಭೆ ಮಾಜಿ ಅಧ್ಯಕ್ಷೆ ವಾಣಿ ಶ್ರೀಧರ್ ಮಾತನಾಡಿ, ಕಾಂಗ್ರೆಸ್ ಪಕ್ಷ ನಮಗೆ ಬೇಕು. ನಮ್ಮೊಳಗೆ ಯಾವುದೇ ಗುಂಪುಗಳು ಇರಬಾರದು. ಹಿರಿಯರು, ಎಲ್ಲರೂ ಇದಕ್ಕಾಗಿ ಕೆಲಸ ಮಾಡಬೇಕು ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಗಣೇಶ್ ರಾವ್ ಮಾತನಾಡಿ, ನನಗೆ ಹಿರಿಯ ಎಲ್ಲಾ ಮಾಜಿ ಸದಸ್ಯರನ್ನು ಒಟ್ಟು ಸೇರಿಸಬೇಕು ಎನ್ನುವ ಮನಸ್ಸಿತ್ತು. ಆದರೆ ಸಾಧ್ಯವಾಗಿಲ್ಲ. ಈಗ ಸಮಾಧಾನ ಆಗಿದೆ. ಎಲ್ಲ ಹಿರಿಯರನ್ನು ಮುಂಚೂಣಿಯಲ್ಲಿ ಇಟ್ಟುಕೊಂಡು ಪಕ್ಷ ಬೆಳೆಸುವ ಅಗತ್ಯವಿದೆ. ಪಕ್ಷದ ನಿಯಮ ಪ್ರಕಾರ ಪುರಸಭೆ ಮಾಜಿ ಅಧ್ಯಕ್ಷರುಗಳು ಕಡ್ಡಾಯವಾಗಿ ಪಕ್ಷದ ಸಭೆಗಳಿಗೆ ಕಡ್ಡಾಯ ಆಹ್ವಾನಿತರು. ಆದರೆ ನಮ್ಮನ್ನು ಯಾರೂ ಪರಿಗಣಿಸುತ್ತಿಲ್ಲ. ಇದನ್ನು ಕೇಳುವ ನಾಯಕರಿಲ್ಲದಾಗಿದೆ ಎಂದರು. ಪುರಸಭೆ ಮಾಜಿ ಅಧ್ಯಕ್ಷೆ ಲತಾ ಗಣೇಶ್ ರಾವ್ ಮಾತನಾಡಿ, ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲದೆ ಒಂದಾದರೆ ಪಕ್ಷ ಅಧಿಕಾರಕ್ಕೆ ಬರುತ್ತದೆ. ಗ್ರಾಮದಿಂದ ದಿಲ್ಲಿವರೆಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ಕೆಲಸ ಮಾಡುವ ಎಂದರು.

ಪುರಸಭೆ ನಾಮ ನಿರ್ದೇಶಿತ ಮಾಜಿ ಸದಸ್ಯ ಚಿದಾನಂದ ಬೈಲಾಡಿ ಮಾತನಾಡಿ, ಕಾಂಗ್ರೆಸ್‌ನ ನಮ್ಮ ಎಲ್ಲಾ ಹಿರಿಯರು ಬಹಳಷ್ಟು ಕೆಲಸ ಮಾಡಿದ್ದಾರೆ. ಅದರಿಂದಾಗಿ ನಾವೆಲ್ಲ ಇಂದು ಪಕ್ಷದಲ್ಲಿದ್ದೇವೆ. ನಾವೆಲ್ಲ ಒಟ್ಟಾಗಿ ಕೆಲಸ ಮಾಡೋಣ ಎಂದರು. ನಗರಸಭಾ ಮಾಜಿ ಸದಸ್ಯ ಅನ್ವರ್ ಖಾಸಿಂ ಮಾತನಾಡಿ, ಪಕ್ಷದಲ್ಲಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟವರು ಹೇಮನಾಥ್ ಶೆಟ್ಟಿಯವರು. ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದೇನೆ. ಪಕ್ಷಕ್ಕಾಗಿ ನಿರಂತರವಾಗಿ ಕೆಲಸ ಮಾಡುತ್ತಿದ್ದೇನೆ. ಆದರೆ ಇಂದಿನ ದಿನ ಪಕ್ಷದ ನಾಯಕರ ವರ್ತನೆ, ನಮ್ಮನ್ನು ಕಡೆಗಣಿಸುವ ರೀತಿ ನೋಡುವಾಗ ತುಂಬಾ ನೋವಾಗುತ್ತಿದೆ. ನಾವೆಲ್ಲಾ ಒಟ್ಟಾಗಿ ಸೇರಿ ಪಕ್ಷಕ್ಕಾಗಿ ಕೆಲಸ ಮಾಡಬೇಕು ಎನ್ನುವುದು ನಮ್ಮ ಅಭಿಲಾಷೆ ಎಂದರು.

ಪುರಸಭೆ ಮಾಜಿ ಉಪಾಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್ ಮಾತನಾಡಿ, ಆಗಾಗ್ಗೆ ಬೇರೆ ಬೇರೆ ಕಾರಣಗಳಿಂದ ಸೇರುತ್ತಿದ್ದರೆ ನಮ್ಮೊಳಗಿರುವ ಅಭಿಪ್ರಾಯ ವ್ಯತ್ಯಾಸಗಳು ದೂರವಾಗುತ್ತದೆ. ಅದಕ್ಕೆ ಈ ಸಮ್ಮಿಲನ ಕೂಟ ಪೂರಕವಾಗಿದೆ. ಹೇಮನಾಥ್ ಶೆಟ್ಟಿಯವರ ನಾಯಕತ್ವ ಪಕ್ಷಕ್ಕೆ ಅಗತ್ಯವಿದೆ. ಪಕ್ಷದಲ್ಲಿ ಯಾರೂ ಯಾರನ್ನೂ ದೂರ ಮಾಡುವುದು ಸರಿಯಲ್ಲ. ಎಲ್ಲರೂ ಸೇರಿ ಕೆಲಸ ಮಾಡಿದರೆ ಬಿಜೆಪಿ ದುರಾಡಳಿತವನ್ನು ದೂರ ಮಾಡಬಹುದು ಎಂದರು. ಪುರಸಭೆ ಮಾಜಿ ಸದಸ್ಯ ಇಸಾಕ್ ಸಾಲ್ಮರ ಮಾತನಾಡಿ, ಪಕ್ಷಕ್ಕೆ ಅನ್ಯಾಯ ಮಾಡಿದವರಿಂದ ಪಾಠ ಕೇಳಿಸಿಕೊಳ್ಳುವ ಪರಿಸ್ಥಿತಿ ಪಕ್ಷದಲ್ಲಿ ನಿರ್ಮಾಣವಾಗಿದೆ. ಪಕ್ಷದೊಳಗೆ ಗುಂಪುಗಾರಿಕೆ ನಡೆಯುತ್ತಿದೆ. ಈ ಸಭೆ ನಿರಂತರವಾಗಿ ನಡೆಯಬೇಕು. ನಗರಸಭೆಗೆ ಸ್ಪರ್ಧಿಸಿ ಸೋಲನುಭವಿಸಿದವರನ್ನೂ ಸೇರಿಸಿಕೊಂಡು ವಿಶ್ವಾಸದಿಂದ ಪಕ್ಷ ಸಂಘಟನೆ ಮಾಡೋಣ ಎಂದರು.

ನಗರಸಭೆ ಮಾಜಿ ಸದಸ್ಯ ಮುಖೇಶ್ ಕೆಮ್ಮಿಂಜೆ ಮಾತನಾಡಿ, ತುಂಬಾ ದಿನಗಳ ಬಳಿಕ ನಾವೆಲ್ಲಾ ಒಂದಾಗುವ ಅವಕಾಶ ಸಿಕ್ಕಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳೋಣ. ಪಕ್ಷ ಸಂಘಟನೆಗೆ ಸಕ್ರಿಯರಾಗೋಣ ಎಂದರು. ನಗರಸಭೆ ಮಾಜಿ ಸದಸ್ಯ ನವೀನ್ ನಾಕ್ ಮಾತನಾಡಿ, ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿದ್ದ ನನಗೆ ನಗರಸಭಾ ಸದಸ್ಯನಾಗಲು ಕಾವು ಹೇಮನಾಥ್ ಶೆಟ್ಟಿಯವರು ಕಾರಣ. ಬಹಳ ಕಷ್ಟದಿಂದ ಗೆದ್ದೆ. ಪಕ್ಷ ಸಂಘಟನೆ ಮಾಡುವುದು, ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಉದ್ದೇಶವಾಗಬೇಕು ಎಂದರು. ನಗರಸಭೆ ಮಾಜಿ ಸದಸ್ಯ ಮಹೇಶ್ ಕಲ್ಲೇಗ ಮಾತನಾಡಿ, ಬಿಜೆಪಿ ಪಕ್ಷವನ್ನು ಪ್ರಬಲವಾಗಿ ವಿರೋಧಿಸುವ ಅಗತ್ಯವಿದೆ. ದೇಶ ಪ್ರೇಮದ ಬಗ್ಗೆ ಅವರಿಂದ ಕಲಿಯುವ ಅನಿವಾರ್ಯತೆ ಇಲ್ಲ. ನಾವು ನಗರದ ಎಲ್ಲಾ ವಾರ್ಡ್‌ಗಳಲ್ಲಿ ಸಂಘಟನೆ ಮಾಡೋಣ ಎಂದರು.

ಪುರಸಭೆ ನಾಮ ನಿರ್ದೇಶಿತ ಮಾಜಿ ಸದಸ್ಯ ಕೇಶವ ಪೂಜಾರಿ ಬೆದ್ರಾಳ ಮಾತನಾಡಿ, ನನ್ನನ್ನು ಕಾಂಗ್ರೆಸ್‌ನಿಂದ ಚುನಾವಣೆಗೆ ನಿಲ್ಲುವಂತೆ ಅವಕಾಶ ಮಾಡಿಕೊಟ್ಟದ್ದು ನಮ್ಮ ನಾಯಕರು. ನಮಗೆ ಪಕ್ಷ ಸೋಲುವುದನ್ನು ಸಹಿಸಲು ಸಾಧ್ಯವಿಲ್ಲ. ನಾವೆಲ್ಲ ಪಕ್ಷಕ್ಕಾಗಿ ಕೆಲಸಮಾಡೋಣ ಎಂದರು. ಪುರಸಭೆ ಮಾಜಿ ನಾಮ ನಿರ್ದೇಶಿತ ಸದಸ್ಯ ದಿಲೀಪ್ ಕುಮಾರ್ ಮಾತನಾಡಿ, ನನಗೆ ಒಂದು ಮನೆಯನ್ನು ನಿರ್ಮಿಸಲು ಅವಕಾಶವಾಗಿಲ್ಲ. ಪಕ್ಷದ ಮೇಲೆ ತುಂಬಾ ಬೇಸರವಿದೆ. ಇವತ್ತು ನನ್ನನ್ನು ಆಹ್ವಾನ ನೀಡಿರುವುದು ತುಂಬಾ ಸಂತೋಷವಾಗಿದೆ ಎಂದರು. ನಗರಸಭೆ ಮಾಜಿ ಅಧ್ಯಕ್ಷೆ ಕಮಲ ಆನಂದ್ ಮಾತನಾಡಿ, ನಾನು ಕಾಂಗ್ರೆಸ್ ಪಕ್ಷದವಳೇ, ಇನ್ನು ಮುಂದೆಯೂ ಕಾಂಗ್ರೆಸ್‌ನಲ್ಲಿಯೇ ಇರುತ್ತೇನೆ ಎಂದರು.

ಪುರಸಭೆ ಮಾಜಿ ನಾಮ ನಿರ್ದೇಶಿತ ಸದಸ್ಯ ವೆಂಕಪ್ಪ ದರ್ಬೆ ಮಾತನಾಡಿ, ನಾವೆಲ್ಲ ಕಾಂಗ್ರೆಸ್‌ನಲ್ಲಿ ಇದ್ದೇವೆ ಎಂಬುದೇ ಈಗಿನ ಕೆಲವರಿಗೆ ಗೊತ್ತಿಲ್ಲ. ನನ್ನನ್ನು ಕರೆದು ಈ ಸಭೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟದ್ದು ಖುಷಿಯಾಯಿತು. ನಾನು ಸಾಯುವವರೆಗೆ ಕಾಂಗ್ರೆಸಿಗನೇ. ನಾವೆಲ್ಲ ಸೇರಿ ಮತ್ತೊಮ್ಮೆ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರೋಣ ಎಂದರು. ಪುರಸಭೆ ನಾಮ ನಿರ್ದೇಶಿತ ಮಾಜಿ ಸದಸ್ಯ ಅಬ್ದುಲ್ ರಹಿಮಾನ್ ಮಾತನಾಡಿ, ಕೆಲವರೆಲ್ಲ ೩೦-೪೦ ವರ್ಷದಿಂದ ಪಕ್ಷಕ್ಕಾಗಿ ಕೆಲಸ ಮಾಡಿದವರ ಅಗತ್ಯ ಇಲ್ಲ ಎನ್ನುವ ರೀತಿಯಲ್ಲಿ ಬೇರೆ ಬೇರೆ ವೇದಿಕೆಯಲ್ಲಿ ಹೇಳ್ತಾರೆ. ಅದೆಲ್ಲ ಸರಿ ಅಲ್ಲ. ಎಲ್ಲರೂ ಒಟ್ಟಿಗಿದ್ದರೆ ಮಾತ್ರ ಕಾಂಗ್ರೆಸ್ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರಸಭೆ ಮಾಜಿ ಸದಸ್ಯೆ ಸ್ವರ್ಣಲತಾ ಹೆಗ್ಡೆ ಮಾತನಾಡಿ, ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿಯುತ್ತಿದ್ದ ಹಲವು ಕಾರ್ಯಕರ್ತರಲ್ಲಿ ಇತ್ತೀಚಿಗಿನ ಪಕ್ಷದ ಬೆಳವಣಿಗೆಯಿಂದ ಭ್ರಮನಿರಸನ ಉಂಟಾಗಿದೆ. ಹಲವಾರು ಕಾರ್ಯಕರ್ತರು ಪಕ್ಷ ಚಟುವಟಿಕೆಗಳಿಂದ ದೂರವಿರಲು ಚಿಂತಿಸುತ್ತಿದ್ದಾರೆ. ಈ ಬಗ್ಗೆ ನಾವು ಚಿಂತನೆ ನಡೆಸಿ ಅವರನ್ನು ಜೊತೆಗೂಡಿಸಿ ಪಕ್ಷದಲ್ಲಿ ಉಳಿಸಿಕೊಳ್ಳುವ ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಇವತ್ತು ನಡೆದ ಈ ಕಾರ್ಯಕ್ರಮ ನಾಂದಿಯಾಗಲಿ. ನಮ್ಮೆಲ್ಲರ ಬಹಳಷ್ಟು ನೋವನ್ನು ಛಲವಾಗಿ ಪರಿವರ್ತಿಸಿ ಒಗ್ಗಟ್ಟಾಗಿ ಹೋರಾಡಬೇಕಾಗಿದೆ ಎಂದರು.

ನಗರಸಭೆ ಮಾಜಿ ಸದಸ್ಯೆ ರೇಖಾ ಯಶೋಧರ್ ಮಾತನಾಡಿ, ನಾನು ನಗರಸಭೆ ಸದಸ್ಯೆಯಾದ ಬಳಿಕ ಸಕ್ರಿಯವಾಗಿ ಪಕ್ಷದ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ನಮ್ಮವರಿಂದಲೇ ತುಂಬಾ ಸಮಸ್ಯೆ ಅನುಭವಿಸಿದ್ದೇನೆ. ಆದರೂ ಸಹಿಸಿಕೊಂಡಿದ್ದೇನೆ. ಈಗಿನ ಬೆಳವಣಿಗೆ ನೋಡುವಾಗ ಪಕ್ಷವೇ ಬೇಡ ಎನ್ನುವ ಭಾವನೆ ಬಂದು ಮನೆಯಲ್ಲೆ ಇದ್ದೆ. ಈ ಸಭೆ ಪಕ್ಷದ ಬೆಳವಣಿಗೆಗೆ ಹೊಸ ಉತ್ಸಾಹ ನೀಡಿದೆ ಎಂದರು.
ಕಾರ್ಯಕ್ರಮದಲ್ಲಿ ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರವಿಪ್ರಸಾದ್ ಶೆಟ್ಟಿ ವಂದಿಸಿದರು.

ಕಾಂಗ್ರೆಸ್‌ನ ಏಕ ವ್ಯಕ್ತಿ ಕೂಡಾ ಕಾಂಗ್ರೆಸ್‌ನಿಂದ ದೂರ
ಇರಬಾರದು, ಪಕ್ಷ ಸಂಘಟನೆಯೇ ನಮ್ಮ ಉದ್ಧೇಶ..
ನಗರ ಪ್ರದೇಶದ ಎಲ್ಲಾ ವಾರ್ಡ್‌ಗಳಲ್ಲಿ ಕಾಂಗ್ರೆಸ್ ಬಲಿಷ್ಠಗೊಳ್ಳಬೇಕಾದರೆ ಎಲ್ಲಾ ಮಾಜಿ ಸದಸ್ಯರುಗಳ ಸಹಕಾರ ಬೇಕು, ಅವರನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವಾಗಿ ಈ ಸಮ್ಮಿಲನ ಕೂಟ ಏರ್ಪಡಿಸಲಾಗಿದೆ. ಬಹಳಷ್ಟು ಜನ ಮಾಜಿ ಸದಸ್ಯರು ಪಕ್ಷದ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದಿಲ್ಲ ಮಾತ್ರವಲ್ಲದೆ ನಮಗೆ ಯಾವುದೇ ಮಾಹಿತಿ ಬರುವುದಿಲ್ಲ ಎನ್ನುವ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ನಮ್ಮ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್‌ರವರು ಪಕ್ಷದ ಚಟುವಟಿಕೆಯಿಂದ ದೂರ ಇರುವ ಹಿರಿಯ ಹಾಗೂ ಕಿರಿಯರನ್ನು ಪಕ್ಷದಲ್ಲಿ ಸಕ್ರಿಯಗೊಳಿಸುವ ಕೆಲಸ ಮಾಡುವಂತೆ ನಮಗೆಲ್ಲ ಹೇಳಿದ್ದಾರೆ. ಆ ಪ್ರಕಾರ ನಮ್ಮ ಪಕ್ಷದ ಹಿತೈಷಿಗಳ ಸಲಹೆಯಂತೆ ಈ ಸಮ್ಮಿಲನ ಕೂಟ ಏರ್ಪಾಡಾಗಿದೆ. ಇದರಲ್ಲಿ ಯಾವುದೇ ಅನ್ಯಥಾ ವಿಚಾರವಿಲ್ಲ. ಪಕ್ಷ ಸಂಘಟನೆಯೇ ನಮಗೆ ಮುಖ್ಯ. ಕೈ ಚಿಹ್ನೆಯ ಧ್ವಜದಡಿಯಲ್ಲಿ ನಾವೆಲ್ಲ ಒಂದಾಗೋಣ. ನಮ್ಮ ಎಲ್ಲಾ ಕಾರ್ಯಕ್ರಮಗಳ ಮಾಹಿತಿಯನ್ನು ಜಿಲ್ಲಾ ಕಾಂಗ್ರೆಸ್ ಮತ್ತು ಕೆಪಿಸಿಸಿಗೆ ವರದಿ ಮಾಡ್ತೇವೆ. ಕಾಂಗ್ರೆಸ್‌ನ ಏಕ ವ್ಯಕ್ತಿ ಕೂಡಾ ಕಾಂಗ್ರೆಸ್‌ನಿಂದ ದೂರ ಇರಬಾರದು ಎನ್ನುವ ರೀತಿಯ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಆಯೋಜನೆಗೊಳ್ಳಲಿದೆ -ಕಾವು ಹೇಮನಾಥ ಶೆಟ್ಟಿ, ಮಾಜಿ ಅಧ್ಯಕ್ಷರು, ಪುತ್ತೂರು ಬ್ಲಾಕ್ ಕಾಂಗ್ರೆಸ್

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.