HomePage_Banner
HomePage_Banner
HomePage_Banner
HomePage_Banner

ವಾರ್ಡ್ 19ರಲ್ಲಿ ಕೋವಿಡ್ ಟಾಸ್ಕ್‌ಫೋರ್ಸ್ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು : ನಗರಸಭೆ ವಾರ್ಡ್-19ರ ಟಾಸ್ಕ್‌ಫೋರ್ಸ್ ಸಭೆ ಪರ್ಲಡ್ಕ ಹಿ.ಪ್ರಾ.ಶಾಲೆಯಲ್ಲಿ ಜರುಗಿತು. ನಗರಸಭಾ ಉಪಾಧ್ಯಕ್ಷೆ ವಿದ್ಯಾಗೌರಿ
ಮಾತನಾಡಿ ವಾರ್ಡ್-19ರಲ್ಲಿ ಶೇ.100 ಲಸಿಕಾ ಅಭಿಯಾನ(ವ್ಯಾಕ್ಸಿನೇಶನ್) ಆಗಿರುವುದಕ್ಕೆ ಹೆಮ್ಮೆಯಿದೆಯೆಂದು ತಿಳಿಸಿದರು. ನಗರಸಭಾಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ ಕೊರೋನಾ ಬಗ್ಗೆ ಮುನ್ನೆಚ್ಚರಿಕೆ, ಜಾಗೃತಿ ಹಾಗೂ ನಿಯಂತ್ರಣಕ್ಕೆ ತರುವಲ್ಲಿ ಮಾಡಬೇಕಾದ ಕಾರ್ಯಗಳು, ವ್ಯಾಕ್ಸಿನೇಶನ್ ಬಗ್ಗೆ ಅರಿವು ಹಾಗೂ ಸ್ವಚ್ಛ ಪುತ್ತೂರು ಯಶಸ್ವಿಗೊಳ್ಳುವಲ್ಲಿ ಪ್ರತಿ ನಾಗರಿಕನ ಜವಾಬ್ದಾರಿಯುತ ಪಾತ್ರದ ಬಗ್ಗೆ ತಿಳಿಸಿದರು. ಪೌರಾಯುಕ್ತ ಮಧು ಮನೋಹರ್ ಮಾತನಾಡಿ ಕೊರೋನಾ ತಡೆಗಟ್ಟಲು ಮೂರು ಸೂತ್ರಗಳಾದ (Trace,Track,Treat) ರೋಗ ಪತ್ತೆ ಹಚ್ಚುವಿಕೆ, ರೋಗಿಯ ಸಂಪರ್ಕ ಹಾಗೂ ರೋಗಿಯ ಚಿಕಿತ್ಸೆಯ ಬಗ್ಗೆ ಅರಿವು ಮೂಡಿಸುವ ಕೆಲಸ ಮುಖ್ಯವೆಂದರು. ಕೊರೋನಾ ನಿಯಮಗಳನ್ನು ವಾರ್ಡ್’ನ ನಿವಾಸಿಗಳು ಪಾಲಿಸುವಂತೆ ಸಹಕರಿಸುವುದು ನಿಯಮಗಳ ಉಲ್ಲಂಘನೆಯಾದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸುವ ಜವಾಬ್ದಾರಿ ಟಾಸ್ಕ್‌ಫೋರ್ಸ್ ಟೀಮ್ ಸದಸ್ಯರದಾಗಿದೆ ಎಂದು ಹೇಳಿ ಶುಚಿಮಿತ್ರ ಎಂಬ ಹೊಸ ಪರಿಕಲ್ಪನೆಯ ಬಗ್ಗೆ ವಿವರಿಸಿದರು.

ವಾರ್ಡ್-19ರಲ್ಲಿ ಶುಚಿಮಿತ್ರರಾಗಿ ನೇಮಕಗೊಂಡ ನಾಗೇಶ್ ಪ್ರಭು ಹಾಗೂ ಸುಕುಮಾರ್ ರವರನ್ನು ನಗರಸಭಾಧ್ಯಕ್ಷರು ಶಾಲು ಹೊದಿಸಿ ಗೌರವಿಸಿದರು.

ನಗರಸಭೆಯ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್, ಟಾಸ್ಕ್‌ಫೋರ್ಸ್ ಸದಸ್ಯ ಶಿವಕುಮಾರ್, ಆಶಾ ಕಾರ್ಯಕರ್ತೆ ವೀಣಾ, ಸಂತೋಷ್ ಬೋನಂತಾಯ, ನಾಗೇಶ್ ಪ್ರಭು, ಸುಕುಮಾರ್, ಪುರುಷೋತ್ತಮ್ ನ್ಯಾಕ್, ನಾಗೇಶ್, ಅಂಗನವಾಡಿ ಶಿಕ್ಷಕಿ ಸುಮಿತ್ರಾ, ಮುಖ್ಯಗುರು ಮನೋರಮಾ, ಶಿಕ್ಷಕಿಯರಾದ ವತ್ಸಲಾ, ವಾಣಿಶ್ರೀ, ಅಕ್ಷತಾ, ಸೀತಾ, ಎಸ್.ಡಿ.ಎಮ್.ಸಿ. ಅಧ್ಯಕ್ಷೆ ಸುಚಿತ್ರಾ, ರವಿರಾಜ್, ಉದಯ, ಡಾ.ಶಂಕರ್ ಹಾಗೂ ರಾಧಾಕೃಷ್ಣ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.