HomePage_Banner
HomePage_Banner
HomePage_Banner
HomePage_Banner

ವೀಕೆಂಡ್ ಕರ್ಫ್ಯೂ ಹಿಂಪಡೆಯದಿದ್ದರೆ ಅಂಗಡಿ ತೆರೆಯುವ ನಿರ್ಧಾರ ಶಾಸಕರಲ್ಲಿ ಪುತ್ತೂರು ವರ್ತಕ ಸಂಘದಿಂದ ಮನವಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ವೀಕೆಂಡ್ ಕರ್ಫ್ಯೂವನ್ನು ಹಿಂಪಡೆಯುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಬೇಕು ಮತ್ತು ಇಲ್ಲವಾದಲ್ಲಿ ನಾವೆಲ್ಲ ಅಂಗಡಿ ತೆರೆಯುವ ನಿರ್ಧಾರ ಕೈಗೊಂಡಿದ್ದೇವೆ ಎಂದು ಪುತ್ತೂರ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜಾನ್ ಕುಟಿನ್ಹಾ ಅವರ ನೇತೃತ್ವದಲ್ಲಿ ವರ್ತಕರ ಸಂಘದ ಪ್ರಮುಖರು ಶಾಸಕ ಸಂಜೀವ ಮಠಂದೂರು ಅವರಿಗೆ ಮನವಿ ನೀಡಿದ್ದಾರೆ.

ಸೆ.೧ರಂದು ಮಧ್ಯಾಹ್ನ ಶಾಸಕ ಸಂಜೀವ ಮಠಂದೂರು ಅವರು ಪುರಭವನದಲ್ಲಿ ಕೋವಿಡ್ ಲಸಿಕೆ ಮೇಳಾವನ್ನು ಪರಿಶೀಲಿಸಲು ಆಗಮಿಸಿದ ವೇಳೆ ವರ್ತಕರ ಸಂಘದ ನಿಯೋಗ ಶಾಸಕರನ್ನ ಭೇಟಿ ಮಾಡಿ ರ್ತಕರ ತೊಂದರೆಗಳನ್ನು ತಿಳಿಸಿದರು. ವೀಕೆಂಡ್ ಕರ್ಫ್ಯೂ ಮುಂದುವರಿದಿರುವ ಕುರಿತು ಪತ್ರಿಕೆಯ ಮೂಲಕ ತಿಳಿದು ಕೊಂಡಿದ್ದೇವೆ. ಆದರೆ ಈಗಾಗಲೇ ಪುತ್ತೂರಿನಲ್ಲಿ ವರ್ತಕರು ವೀಕೆಂಡ್ ಕರ್ಫ್ಯೂವಿನಿಂದ ಉದ್ಯಮಕ್ಕೆ ಹೊಡೆತ ಬಿದ್ದು, ವ್ಯವಹಾರ ನಡೆಸಲು ಸಾಧ್ಯವಾಗದಷ್ಟು ತೊಂದರೆಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ವೀಕೆಂಡ್ ಕರ್ಫ್ಯೂವನ್ನು ಹಿಂಪಡೆಯಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಬೇಕು ಮತ್ತು ಈ ಭಾರಿ ವೀಕೆಂಡ್ ಕರ್ಫ್ಯೂ ತೆರವು ಮಾಡದೆ ಇದ್ದರೆ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮುಂದಿನ ವೀಕೆಂಡ್ ಕರ್ಫ್ಯೂವಿನಲ್ಲಿ ಎಲ್ಲಾ ವರ್ತಕರು ಅಂಗಡಿ ವ್ಯವಹಾರ ಆರಂಭಿಸಿ ವಿರೋಧ ಮತ್ತು ಪ್ರತಿಭಟನೆ ನಡೆಸಲಿದ್ದೇವೆ ಎಂದು ತಿಳಿಸಿದರು.

ಸಾಧಕ ಬಾದಕ ವರದಿ ಆಗಬೇಕು:
ಈಗಾಗಲೇ ವೀಕೆಂಡ್ ಕರ್ಫ್ಯೂವಿನ ಸಂದರ್ಭ ಮತ್ತು ಇತರ ಸಂದರ್ಭದ ಕೋವಿಡ್ ವರದಿ ಮತ್ತು ಶನಿವಾರ ಮತ್ತು ಆದಿತ್ಯವಾರ ವೀಕೆಂಡ್ ಕರ್ಫ್ಯೂವಿನಿಂದ ಏನು ಪರಿಣಾಮ ಆಗುತ್ತಿದ ಎಂದು ಸಾಧಕ ಬಾದಕ ವರದಿ ಮಾಡಬೇಕು. ವರ್ತಕರ ಸಮಸ್ಯೆಗಳು ನನಗೂ ಅರ್ಥವಾಗಿದೆ. ಈ ಕುರಿತು ರಾಜ್ಯಮಟ್ಟದಲ್ಲಿ ಚರ್ಚೆ ಆಗಬೇಕು ಎಂದು ಶಾಸಕರು ತಿಳಿಸಿದರು. ಈ ಸಂದರ್ಭದಲ್ಲಿ ವರ್ತಕ ಸಂಘದ ಪದಾಧಿಕಾರಿಗಳಾದ ವಿಶ್ವಪ್ರಸಾದ್ ಸೇಡಿಯಾಪು, ಕೃಷ್ಣನಾರಾಯಣ ಮುಳಿಯ, ಉಮೇಶ್ ನಾಯಕ್ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.