HomePage_Banner
HomePage_Banner
HomePage_Banner
HomePage_Banner

ಸ್ನ್ಯಾಪ್ ಚಾಟ್ ನಲ್ಲಿ ಪರಿಚಯ ಮಾಡಿ ಯುವತಿಯನ್ನು ಭೇಟಿ ಮಾಡಲು ಪುತ್ತೂರಿಗೆ ಬಂದ ಯುವಕ, ಸ್ನೇಹಿತ: ಕೆ.ಎಸ್.ಆರ್.ಟಿ.ಸಿ ಬಸ್‌ನಿಲ್ದಾಣದಲ್ಲಿ ತಂಡದಿಂದ ವಿಚಾರಣೆ -ಯುವಕ, ಯುವತಿಯರು ಪೊಲೀಸ್ ಠಾಣೆಗೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರಾಯಚೂರು ಮೂಲದ ಯುವಕನೋರ್ವ ಸ್ನ್ಯಾಪ್ ಚಾಟ್ ಮೂಲಕ ಪರಿಚಯ ಮಾಡಿಸಿಕೊಂಡ ಪುತ್ತೂರಿನ ಯುವತಿಯನ್ನು ಸಂಪರ್ಕ ಮಾಡಲು ತನ್ನ ಸ್ನೇಹಿತನ ಜೊತೆ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದಾಗ ತಂಡವೊಂದು ಅವರನ್ನು ಪ್ರಶ್ನಿಸಿದಾಗ ನಡೆದ ಮಾತಿನ ಚಕಮಕಿಯಿಂದ ತುಸು ಗೊಂದಲ ಉಂಟಾದಾಗ ಯುವಕ ಮತ್ತು ಯುವತಿಯರನ್ನು ಪೊಲೀಸ್ ಠಾಣೆಗೆ ಕರೆದೊಯ್ದ ಘಟನೆ ಸೆ.1ರಂದು ನಡೆದಿದೆ.

ರಾಯಚೂರು ಮೂಲದ ಹಿಂದು ಯುವಕ ಸ್ನ್ಯಾಪ್ ಚಾಟ್ ಮೂಲಕ ಪುತ್ತೂರಿನ ಯುವತಿಯೊಬ್ಬರನ್ನು ಪರಿಚಯ ಮಾಡಿಕೊಂಡು ಸೆ.1ರಂದು ಭೇಟಿಯಾಗುವ ಮಾತುಕತೆ ನಡೆಸಿದ್ದರು. ಅದರಂತೆ ಸೆ.1ರಂದು ರಾಯಚೂರಿನ ಯುವಕ ತನ್ನ ಸ್ನೇಹಿತನ ಜೊತೆ ಪುತ್ತೂರು ಬಸ್‌ನಿಲ್ದಾಣಕ್ಕೆ ಬಂದು ಯುವತಿಯನ್ನು ಸಂಪರ್ಕಿಸಿದಾಗ ಯುವತಿಯೊಂದಿಗೆ ಆಕೆಯ ಸ್ನೇಹಿತರಿಬ್ಬರು ಇದ್ದರು. ಬಳಿಕ ಅವರು ಬಸ್‌ನಿಲ್ದಾಣದಲ್ಲೇ ಇರುವ ವಸತಿ ಗೃಹಕ್ಕೆ ಹೋಗುತ್ತಿರುವ ಮಾಹಿತಿ ಅರಿತ ತಂಡವೊಂದು ಅವರನ್ನು ಪ್ರಶ್ನಿಸಿದರು. ಈ ವೇಳೆ ಗೊಂದಲದ ವಾತಾವರಣ ಉಂಟಾಗಿತ್ತು. ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳು ಯುವಕ ಮತ್ತು ಯುವತಿಯರನ್ನು ಆಟೋ ರಿಕ್ಷಾದಲ್ಲಿ ಪೊಲೀಸ್ ಠಾಣೆಗೆ ಕಳುಹಿಸಿಕೊಟ್ಟಿದ್ದಾರೆ. ಠಾಣೆಯಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.