HomePage_Banner
HomePage_Banner
HomePage_Banner
HomePage_Banner

ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಯಾದ ಜ್ಯೋತ್ಸ್ನಾ ಡಿ, ಪ್ರವೀಣ್ ಕುಮಾರ್‌ರವರಿಗೆ ಪುತ್ತೂರು ವಕೀಲರ ಸಂಘದಿಂದ ಅಭಿಂದನಾ ಸಮಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

  • ಸಾಧಿಸುವ ಛಲವಿದ್ದಾಗ ಸಾಧನೆಗೆ ತಕ್ಕ ಫಲ – ರುಡಾಲ್ಫ್ ಪಿರೇರಾ
  • ಉತ್ತಮ ನ್ಯಾಯಧೀಶರಾಗಿ ಮೂಡಿ ಬರಬೇಕು – ಎಂ. ರಮೇಶ್
  • ಯುವ ನ್ಯಾಯವಾದಿಗಳಿಗೆ ಉತ್ತೇಜನ ಕೊಡಬೇಕು – ಈಶ್ವರ ಭಟ್
  • ನಾವಿನ್ನೂ ಕೂಡಾ ರನ್ನರ್‍ಸ್ – ಪುಷ್ಪರಾಜ್ ಅಡ್ಯಂತಾಯ
  • ಸಾಧಿಸುವಂತಹದ್ದು ಬಹಳಷ್ಟಿದೆ – ಮನೋಹರ್ ಕೆ.ವಿ

ಪುತ್ತೂರು: ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಗೊಂಡ ಪುತ್ತೂರು ವಕೀಲರ ಸಂಘದ ಸದಸ್ಯೆ ಜ್ಯೋತ್ಸ್ನಾ ಡಿ ಮತ್ತು ಸಹಾಯಕ ಅಭಿಯೋಜಕ ಪ್ರವೀಣ್ ಕುಮಾರ್ ಅವರಿಗೆ ಪುತ್ತೂರು ವಕೀಲರ ಸಂಘದಿಂದ ಅಭಿಂದನಾ ಕಾರ್ಯಕ್ರಮ ಸೆ.೧ರಂದು ವಕೀಲರ ಸಂಘದ ಪರಶರಾ ಸಭಾಭವನದಲ್ಲಿ ನಡೆಯಿತು

ಸಾಧಿಸುವ ಛಲವಿದ್ದಾಗ ಸಾಧನೆ ತಕ್ಕ ಫಲ:
5ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ರುಡಾಲ್ಫ್ ಪಿರೇರಾ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಯಾರೆ ಆಗಲಿ ತಮ್ಮಲ್ಲಿ ಸಾಧಿಸುವ ಛಲವಿದ್ದಾಗ ಏನು ಬೇಕಾದರೂ ಸಾಧಿಸಹುದು. ಈ ನಿಟ್ಟಿನಲ್ಲಿ ಸಾಧನೆಗೆ ತಕ್ಕ ಫಲವನ್ನು ಜ್ಯೋತ್ಸ್ನಾ ಡಿ ಮತ್ತು ಪ್ರವೀಣ್ ಕುಮಾರ್ ಅವರು ಪಡೆದು ಕೊಂಡಿದ್ದಾರೆ ಎಂದರು.

ಉತ್ತಮ ನ್ಯಾಯಧೀಶರಾಗಿ ಮೂಡಿ ಬರಬೇಕು:
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಎಸಿಜೆಎಮ್ ಆಗಿರುವ ಎಂ.ರಮೇಶ್ ಅವರು ನೂತನ ನ್ಯಾಯಾಧೀಶರನ್ನು ಸನ್ಮಾನಿಸಿ ಮಾತನಾಡಿ ನ್ಯಾಯಾಧೀಶ ಆದರೆ ಸಾರ್ಥಕ ಆದಂತೆಯಲ್ಲ. ಬಳಿಕ ವೈಯುಕ್ತಿಕ ಜೀವನ ಬಲಿದಾನ ಆಗುತ್ತದೆ. ಗುಲಾಬಿ ಹೂವು ನೋಡಲು ಚೆಂದ. ಆದರೆ ಅದರ ಮುಳ್ಳು ಇರುವುದು ಸಹಜ. ಈ ನಿಟ್ಟಿನಲ್ಲಿ ನ್ಯಾಯಾಧೀಶರಾಗಿ ಆಯ್ಕೆಗೊಂಡ ಜ್ಯೋತ್ಸ್ನಾ ಡಿ ಮತ್ತು ಪ್ರವೀಣ್ ಕುಮಾರ್ ಉತ್ತಮ ನ್ಯಾಯಾಧೀಶರಾಗಿ ಮೂಡಿ ಬರಬೇಕು ಎಂದು ಹಾರೈಸಿದರು.

ಯುವ ನ್ಯಾಯವಾದಿಗಳಿಗೆ ಉತ್ತೇಜನ ಕೊಡಬೇಕು:
ನ್ಯಾಯವಾದಿ ಬೆಟ್ಟ ಈಶ್ವರ ಭಟ್ ಅವರು ಮಾತನಾಡಿ ಉತ್ತಮ ಸಾಧನೆ ಮಾಡಲು ಯುವ ನ್ಯಾಯವಾದಿಗಳಿಗೆ ಉತ್ತೇಜನ ಕೊಡುವ ಕೆಲಸ ಹಿರಿಯ ವಕೀಲರಿಂದ ಆಗಬೇಕು. ಇಂತಹ ಸಂದರ್ಭದಲ್ಲಿ ಯುವ ನ್ಯಾಯವಾಧಿಗಳ ಸಾಧನೆಗೆ ಉಪಯುಕ್ತ ಆಗುತ್ತದೆ ಎಂದರು.

ನಾವಿನ್ನೂ ಕೂಡಾ ರನ್ನರ್‍ಸ್:
ವಿಶೇಷ ಸರಕಾರಿ ಸಹಾಯಕ ಅಭಿಯೋಜಕ ಪುಷ್ಪರಾಜ್ ಅಡ್ಯಂತಾಯ ಕಾನೂನು ಮತ್ತು ವಾಸ್ತವ ಸಂಗತಿಯ ಪಾಂಡಿತ್ಯ ಇರಬೇಕು. ಆದರೆ ಅರಿದು ಕುಡಿದಿರುವ ಭಾವನೆ ತಪ್ಪು. ಯಾಕೆಂದರೆ ನಾವಿನ್ನೂ ಕೂಡಾ ರನ್ನರ್‍ಸ್. ಕಲಿಯಬೇಕಾಗಿರುವುದು ಬಹಳಷ್ಟಿದೆ ಎಂದರು.

ಸಾಧಿಸುವಂತಹದ್ದು ಬಹಳಷ್ಟಿದೆ :
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ ಅವರು ಮಾತನಾಡಿ ಸಾಧಕರು ಸಾಧಿಸುವಂತಹದ್ದು ಬಹಳಷ್ಟಿದೆ. ಜಿಲ್ಲಾ ನ್ಯಾಯಾಧೀಶರಾಗುವುದು ಒಂದು ಸಾಧನೆ. ಅದೇ ರೀತಿ ಉತ್ತಮ ನ್ಯಾಯಾಧೀಶರಾಗುವುದು ಇನ್ನೊಂದು ಸಾಧನೆ. ಇಂತಹ ಸಂದರ್ಭದಲ್ಲಿ ಸಾಧನೆಗೆ ಯಾವುದೇ ಅಡೆತಡೆಗಳನ್ನು ಮೆಟ್ಟಿ ನಿಂತು ಮುಂದೆ ಹೋಗಬೇಕೆಂದರು.

ಸನ್ಮಾನ: ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಗೊಂಡ ಜೋತ್ಸ್ನಾ ಡಿ ಮತ್ತು ಪ್ರವೀಣ್ ಕುಮಾರ್ ಆರ್ ಎನ್ ಅವರನ್ನು ನ್ಯಾಯಾಧೀಶರುಗಳು ಅಭಿನಂದಿಸಿದರು. ನ್ಯಾಯವಾದಿಗಳಾದ ನರಸಿಂಹ ಪ್ರಸಾದ್ ಮತ್ತು ಮೋಹನ್ ವಿ ಸನ್ಮಾನಿತರನ್ನು ಪರಿಚಯಿಸಿದರು. ಸನ್ಮಾನ ಸ್ವೀಕರಿಸಿದ ಸನ್ಮಾನಿತರು ಮಾತನಾಡಿದರು. ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಮ್‌ಎಫ್‌ಸಿ ನಿರ್ಮಲ, ಪ್ರಧಾನ ಸಿವಿಲ್ ನ್ಯಾಯಧೀಶ ಮತ್ತು ಜೆಎಮ್‌ಎಫ್‌ಸಿ ಅರುಣ್, ೨ನೇ ಹಎಚ್ಚುವರಿ ಸಿವಿಲ್ ನ್ಯಾಯಾಧೀಶ ವೆಂಕಟೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಧೀರ್ ತೋಳ್ಪಾಡಿ ಪ್ರಾರ್ಥಿಸಿದರು. ವಕೀಲರ ಸಂಘಧ ಉಪಾಧ್ಯಕ್ಷ ಸುರೇಶ್ ರೈ ಪಡ್ಡಂಬೈಲು ಸ್ವಾಗತಿಸಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಎನ್ ಎಸ್ ವಂದಿಸಿದರು. ದೀಪಕ್ ಬೊಳುವಾರು ಮತ್ತು ಕೋಶಾಧಿಕಾರಿ ಚೇತನ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಸುಳ್ಯ ವಕೀಲರ ಸಂಘದ ಅಧ್ಯಕ್ಷ ವೆಂಕಪ್ಪ ಗೌಡ ಸೇರಿದಂತೆ ಪುತ್ತೂರು ವಕೀಲರ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.