ನುಳಿಯಾಲು ಜಗನ್ನಾಥ ರೈ ಮಾದೋಡಿಯವರಿಗೆ ಸಮಾಜ ಸೇವಾ ಮಿತ್ರ ಪ್ರಶಸ್ತಿ ಪ್ರದಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಾಣಿಯೂರು: ಪುತ್ತೂರು ಬಂಟರ ಸಂಘದ ವತಿಯಿಂದ ನಿವೃತ್ತ ಡಿವೈಎಸ್‌ಪಿ, ಪುತ್ತೂರು ಬಂಟಸಿರಿ ವಿವಿಧೋದ್ಧೇಶ ಸಹಕಾರ ಸಂಘದ ಅಧ್ಯಕ್ಷರಾದ ನುಳಿಯಾಲು ಜಗನ್ನಾಥ ರೈ ಮಾದೋಡಿಯವರಿಗೆ ಮಿತ್ರಂಪಾಡಿ ಮನೆಯವರ ದತ್ತಿನಿಧಿ ಪ್ರಾಯೋಜಿತ ಮಿತ್ರಂಪಾಡಿ ಚೆನ್ನಪ್ಪ ರೈ ಮತ್ತು ಡಿಂಬ್ರಿಗುತ್ತು ಸರಸ್ವತಿ ಸಿ.ರೈ ಸ್ಮರಣಾರ್ಥ ಸಮಾಜ ಸಮಾಜ ಸೇವಾ ಮಿತ್ರ ಪ್ರಶಸ್ತಿಯನ್ನು ಸೆ ೧ರಂದು ನುಳಿಯಾಲು ಜಗನ್ನಾಥ ರೈ ಅವರ ಮಾದೋಡಿ ಮನೆಯಲ್ಲಿ ಪ್ರದಾನ ಮಾಡಿ ಗೌರವಿಸಲಾಯಿತು.

ಪ್ರಶಸ್ತಿ ನೀಡಿ ಸನ್ಮಾನಿಸಿ, ಗೌರವಿಸಿದ ಎಲ್ಲರಿಗೂ ಅಭಾರಿಯಾಗಿದ್ದೇನೆ- ನುಳಿಯಾಲು ಜಗನ್ನಾಥ ರೈ
ನಿವೃತ್ತ ಡಿವೈಎಸ್‌ಪಿ, ಪುತ್ತೂರು ಬಂಟಸಿರಿ ವಿವಿಧೋದ್ಧೇಶ ಸಹಕಾರ ಸಂಘದ ಅಧ್ಯಕ್ಷರಾದ ನುಳಿಯಾಲು ಜಗನ್ನಾಥ ರೈಯವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಬಂಟರ ಸಂಘದ ಎಲ್ಲರ ಸಹಕಾರದಿಂದ ಬಂಟಸಿರಿ ವಿವಿಧೋದ್ಧೇಶ ಸಹಕಾರ ಸಂಘವು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಪ್ರಶಸ್ತಿ ನೀಡಿ ಸನ್ಮಾನಿಸಿ, ಗೌರವಿಸಿದ ಸಂಘದ ಎಲ್ಲಾ ಪದಾಧಿಕಾರಿ, ಸದಸ್ಯರಿಗೆ ಅಭಾರಿಯಾಗಿದ್ದೇನೆ ಎಂದರು.

ನುಳಿಯಾಲು ಜಗನ್ನಾಥ ರೈ ಅವರಿಗೆ ತನ್ನದೇ ಆದ ಗೌರವಗಳು ಇವೆ– ಸವಣೂರು ಸೀತಾರಾಮ ರೈ
ಪುತ್ತೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಸವಣೂರು ಸೀತಾರಾಮ ರೈ ಮಾತನಾಡಿ, ದಕ್ಷ, ನಿಷ್ಟಾವಂತ ಪೋಲಿಸ್ ಅಧಿಕಾರಿಯಾಗಿ ರಾಜ್ಯದಲ್ಲಿಯೇ ಹೆಸರುವಾಸಿಯಾಗಿ, ವೃತ್ತಿಯಿಂದ ನಿವೃತ್ತರಾದ ಬಳಿಕ ಸಮಾಜಸೇವೆಯಲ್ಲಿಯೂ ತೊಡಗಿಸಿಕೊಂಡಿರುವ ನುಳಿಯಾಲು ಜಗನ್ನಾಥ ರೈ ಅವರಿಗೆ ಕಾಣಿಯೂರು ಪರಿಸರದಲ್ಲಿ ತನ್ನದೇ ಆದ ಗೌರವಗಳು ಇವೆ. ಪುತ್ತೂರಿನಲ್ಲಿ ಬಂಟಸಿರಿ ವಿವಿದ್ದೋದ್ಧೇಶ ಸಹಕಾರ ಸಂಘವನ್ನು ಸ್ಥಾಪಿಸಿಕೊಂಡು, ಸಂಘವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವುದು ಜಗನ್ನಾಥ ರೈ ಅವರ ವಿಶೇಷ ಸಾಧನೆಯಾಗಿದೆ ಎಂದು ಅವರು ಹೇಳಿದರು.

ಸಮಾಜ ಸೇವಾ ಮಿತ್ರ ಪ್ರಶಸ್ತಿ ನೀಡಿ ಗೌರವಿಸುವುದು ಸಂತೋಷದ ವಿಚಾರ– ಬೂಡಿಯಾರು ರಾಧಾಕೃಷ್ಣ ರೈ
ಪುತ್ತೂರು ಬಂಟರ ಸಂಘದ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಪುತ್ತೂರು ಬಂಟರ ಸಂಘಕ್ಕೆ ತನ್ನ ಕೊಡುಗೆ ಬೇಕು ಎನ್ನುವ ಉದ್ದೇಶವನ್ನು ಇಟ್ಟುಕೊಂಡು ಬಂಟಸಿರಿ ವಿವಿಧೋದ್ಧೇಶ ಸಹಕಾರ ಸಂಘವನ್ನು ಸ್ಥಾಪಿಸಿ, ಸಂಘದ ಅಧ್ಯಕ್ಷರಾಗಿ ಬಂಟಸಿರಿ ವಿಧ್ಯಾನಿಧಿಯ ಸ್ಥಾಪಕರಾಗಿ ಯಶಸ್ವಿಯಾಗಿ ಮುನ್ನಡೆಸುತ್ತಿರುವ ನುಳಿಯಾಲು ಜಗನ್ನಾಥ ರೈಯವರಿಗೆ ಸಮಾಜ ಸೇವಾ ಮಿತ್ರ ಪ್ರಶಸ್ತಿ ನೀಡಿ ಗೌರವಿಸುವುದು ಸಂತೋಷದ ವಿಚಾರ. ಸಮಾಜ ಬಾಂಧವರನ್ನು ಸೇರಿಸಿಕೊಂಡು ದೊಡ್ಡ ಮಟ್ಟದಲ್ಲಿ ವಿಜೃಂಭಣೆಯಿಂದ ಕಾರ್ಯಕ್ರಮವನ್ನು ಆಯೋಜಿಸುವ ಬಗ್ಗೆ ಸಂಘದಿಂದ ತೀರ್ಮಾನಿಸಿದ್ದೇವು. ಆದರೆ ಕೋವಿಡ್ ಹಿನ್ನಲೆಯಲ್ಲಿ ಸರಕಾರದ ನಿಯಮಗಳನ್ನು ಪಾಲಿಸಿಕೊಂಡು ಸಣ್ಣ ಮಟ್ಟದಲ್ಲಿ ಪ್ರಶಸ್ತಿ ಪುರಸ್ಕೃತರ ಮನೆಗೆ ತೆರಳಿ ಪ್ರಧಾನ ಮಾಡುವ ಕಾರ್ಯಕ್ರಮಗಳನ್ನು ಆಯೋಜಿಲಾಗಿದೆ ಎಂದರು.

ನುಳಿಯಾಲು ಜಗನ್ನಾಥ ರೈ ಅವರ ನಿಷ್ಠೆ, ಪ್ರಮಾಣಿಕತೆ ಎಲ್ಲರೂ ಮೆಚ್ಚುವಂತದ್ದು– ಕಾವು ಹೇಮನಾಥ ಶೆಟ್ಟಿ
ಮಂಗಳೂರು ಬಂಟರ ಯಾನೇ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಒಬ್ಬ ದಕ್ಷ ಪೋಲಿಸ್ ಅಧಿಕಾರಿಯಾಗಿ ರಾಜ್ಯ ಮಟ್ಟದಲ್ಲಿಯೇ ಗುರುತಿಸಿಕೊಂಡಿರುವ ನುಳಿಯಾಲು ಜಗನ್ನಾಥ ರೈ ಅವರ ನಿಷ್ಠೆ, ಪ್ರಮಾಣಿಕತೆ ಎಲ್ಲರೂ ಮೆಚ್ಚುವಂತದ್ದು. ಹಿರಿಯ, ಕಿರಿಯರನ್ನು ಅತ್ಯಂತ ಪ್ರೀತಿಯಿಂದ ಕಾಣುವ ಜಗನ್ನಾಥ ರೈಯವರಿಗೆ ಪ್ರಶಸ್ತಿ ನೀಡಿ ಗೌರವಿಸುವುದು ನಮ್ಮೆಲ್ಲರ ಭಾಗ್ಯ ಎಂದರು.

ಮಂಗಳೂರು ಬಂಟರ ಯಾನೇ ನಾಡವರ ಮಾತೃ ಸಂಘದ ತಾಲೂಕು ಸಂಚಾಲಕ ದಯಾನಂದ ರೈ ಮನವಳಿಕೆ ಮಾತನಾಡಿದರು. ಪುತ್ತೂರು ಬಂಟರ ಸಂಘದ ಕೋಶಾಧಿಕಾರಿ, ನಿತ್ಯಾನಂದ ಶೆಟ್ಟಿ ಮನವಳಿಕೆ, ಉಪಾಧ್ಯಕ್ಷ ಜಗಜೀವನ್ ದಾಸ್ ರೈ, ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಮೀರಾ ಭಾಸ್ಕರ್ ರೈ, ಕಡಮಜಲು ಸುಭಾಸ್ ರೈ, ಜಯರಾಜ್ ಭಂಡಾರಿ, ಎಂ.ಆರ್.ಜಯಕುಮಾರ್ ರೈ, ಉದಯ ರೈ ಮಾದೋಡಿ, ದಿವ್ಯನಾಥ ಶೆಟ್ಟಿ ಕಾವು, ಜಿ.ಪಂ. ಮಾಜಿ ಸದಸ್ಯೆ ಅನಿತಾ ಹೇಮಾನಾಥ ಶೆಟ್ಟಿ, ನಾರಾಯಣ ರೈ ಬಾರಿಕೆ, ರಂಜಿನಿ ಶೆಟ್ಟಿ, ಉಮಪ್ರಸಾದ್ ರೈ ನಡುಬೈಲು, ಸುಶೀಲ ಜಗನ್ನಾಥ ರೈ ಮಾದೋಡಿ, ರತಿ. ರೈ ಮಾದೋಡಿ, ಹರಿಪ್ರಸಾದ್ ರೈ ಕಾಣಿಯೂರು ಉಪಸ್ಥಿತರಿದ್ದರು. ಪುತ್ತೂರು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.

ಸಮಾಜ ಸೇವಾ ಮಿತ್ರ ಪ್ರಶಸ್ತಿ ನೀಡಿ ಗೌರವಿಸುವುದು ಸಂತೋಷದ ವಿಚಾರ– ಬೂಡಿಯಾರು ರಾಧಾಕೃಷ್ಣ ರೈ
ಪುತ್ತೂರು ಬಂಟರ ಸಂಘದ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಪುತ್ತೂರು ಬಂಟರ ಸಂಘಕ್ಕೆ ತನ್ನ ಕೊಡುಗೆ ಬೇಕು ಎನ್ನುವ ಉದ್ದೇಶವನ್ನು ಇಟ್ಟುಕೊಂಡು ಬಂಟಸಿರಿ ವಿವಿಧೋದ್ಧೇಶ ಸಹಕಾರ ಸಂಘವನ್ನು ಸ್ಥಾಪಿಸಿ, ಸಂಘದ ಅಧ್ಯಕ್ಷರಾಗಿ ಬಂಟಸಿರಿ ವಿಧ್ಯಾನಿಧಿಯ ಸ್ಥಾಪಕರಾಗಿ ಯಶಸ್ವಿಯಾಗಿ ಮುನ್ನಡೆಸುತ್ತಿರುವ ನುಳಿಯಾಲು ಜಗನ್ನಾಥ ರೈಯವರಿಗೆ ಸಮಾಜ ಸೇವಾ ಮಿತ್ರ ಪ್ರಶಸ್ತಿ ನೀಡಿ ಗೌರವಿಸುವುದು ಸಂತೋಷದ ವಿಚಾರ. ಸಮಾಜ ಬಾಂಧವರನ್ನು ಸೇರಿಸಿಕೊಂಡು ದೊಡ್ಡ ಮಟ್ಟದಲ್ಲಿ ವಿಜೃಂಭಣೆಯಿಂದ ಕಾರ್ಯಕ್ರಮವನ್ನು ಆಯೋಜಿಸುವ ಬಗ್ಗೆ ಸಂಘದಿಂದ ತೀರ್ಮಾನಿಸಿದ್ದೇವು. ಆದರೆ ಕೋವಿಡ್ ಹಿನ್ನಲೆಯಲ್ಲಿ ಸರಕಾರದ ನಿಯಮಗಳನ್ನು ಪಾಲಿಸಿಕೊಂಡು ಸಣ್ಣ ಮಟ್ಟದಲ್ಲಿ ಪ್ರಶಸ್ತಿ ಪುರಸ್ಕೃತರ ಮನೆಗೆ ತೆರಳಿ ಪ್ರಧಾನ ಮಾಡುವ ಕಾರ್ಯಕ್ರಮಗಳನ್ನು ಆಯೋಜಿಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.